ಎರ್ನಾಕುಳಂ: ಕೇರಳ ರಾಜ್ಯದ ಒಂದು ಪಟ್ಟಣ. ಅದೇ ಹೆಸರಿನ ಜಿಲ್ಲೆಯ ಕೇಂದ್ರ. == ಭೌಗೋಳಿಕ == ಕೊಚ್ಚಿ (ಕೊಚೀನ್) ಬಂದರಿಗೆ ಈಶಾನ್ಯದಲ್ಲಿ 3 ಕಿಮೀ ದೂರದಲ್ಲಿ ಸಮುದ್ರದ ಹಿನ್ನೀರಿನ (ಬ್ಯಾಕ್ ವಾಟರ್) ಮಧ್ಯದಲ್ಲಿದೆ. == ಜನಸಂಖ್ಯೆ == ಜನಸಂಖ್ಯೆ 5 ಲಕ್ಷ ಕೊಚ್ಚಿ ಮತ್ತು ತಿರುವಾಂಕೂರ್ ಸಂಸ್ಥಾನಗಳು ಸೇರಿ ಒಂದು ರಾಜ್ಯವಾಗುವವರೆಗೂ ಕೊಚ್ಚಿಯ ರಾಜಧಾನಿಯಾಗಿದ್ದು ಅನಂತರ ಉಚ್ಚನ್ಯಾಯಾಲಯದ ಕೇಂದ್ರವಾಯಿತು. ಇಲ್ಲಿ ಕೇರಳ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದ ಐದು ಕಾಲೇಜುಗಳಿವೆ. == ಕೈಗಾರಿಕೆ == ಸಾಬೂನು, ಎಣ್ಣೆ, ಗ್ಲಿಸರಿನ್, ರೇಷ್ಮೆ ಮುಂತಾದ ಕೈಗಾರಿಕೆಗಳು ಇಲ್ಲಿವೆ. ಮೀನುಗಾರಿಕೆ ಹಾಗೂ ತೆಂಗಿನ ಬೇಸಾಯ ಜನರ ಎರಡು ಪ್ರಮುಖ ಕಸಬುಗಳು. ಇಲ್ಲೊಂದು ಸರ್ಕಾರಿ ಮುದ್ರಣಾಲಯವೂ ಇದೆ. == ಬಾಹ್ಯ ಸಂಪರ್ಕಗಳು == 2008-10-14 ವೇಬ್ಯಾಕ್ ಮೆಷಿನ್ ನಲ್ಲಿ. ’ - 2013-12-03 ವೇಬ್ಯಾಕ್ ಮೆಷಿನ್ ನಲ್ಲಿ.