ಎಲ್.ಗುಂಡಪ್ಪನವರು ೧೯೦೩ರಲ್ಲಿ ಜನಿಸಿದರು. ಎಂ.ಎ.ಪದವಿ ಸಂಪಾದಿಸಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. == ಸಾಹಿತ್ಯಸಾಧನೆ == === ಅನುವಾದ === ಎಲ್.ಗುಂಡಪ್ಪನವರು ಕುಮಾರವ್ಯಾಸನ “ಕರ್ಣಾಟ ಭಾರತ ಕಥಾಮಂಜರಿ”ಯ ಗದ್ಯಾನುವಾದ ಮಾಡಿದ್ದಾರೆ. ರಾಜಾಜಿಯವರ ‘ವ್ಯಾಸರ್ ವಿರುಂದು’ ಎನ್ನುವ ಹೆಸರಿನ ಮಹಾಭಾರತವನ್ನು ಕನ್ನಡಿಸಿದ್ದಾರೆ. ತಮಿಳಿನ ‘ತಿರುಕ್ಕುರುಳ್’ , ‘ಶಿಲಪ್ಪದಿಗಾರಂ’ ಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. === ನಿಘಂಟು ರಚನೆ === ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಂಪಾದನೆಯಲ್ಲಿ ಹಾಗು ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟು ಸಂಪಾದನೆಯಲ್ಲಿ ದುಡಿದಿದ್ದಾರೆ. ಇವರ ‘ಪತ್ರಿಕಾ ನಿಘಂಟು’ ಒಂದು ಉಪಯುಕ್ತ ಗ್ರಂಥ. === ಮಕ್ಕಳ ಸಾಹಿತ್ಯ === ಕಳ್ಳಮರಿ ಮಕ್ಕಳ ರವೀಂದ್ರರು ರವೀಂದ್ರನಾಥ ಠಾಕೂರರ ಜೀವನ ವ್ಯಕ್ತಿತ್ವ ಪರಿಚಯ === ಇತರ === ನಾಡಪದಗಳು ಮುಕುಂದಮಾಲಾ ಭಾಸನಾಟಕ ಕನ್ನಡ ವ್ಯಾಕರಣ ಪಾಠಗಳು == ಪುರಸ್ಕಾರ == ಮೈಸೂರು ವಿಶ್ವವಿದ್ಯಾನಿಲಯದ ಸಿಲ್ವರ್ ಜ್ಯುಬಿಲಿ ಕನ್ನಡ ಸ್ವರ್ಣಪದಕ ಪ್ರಶಸ್ತಿ ತಮಿಳು, ಕನ್ನಡ ಬಾಂಧವ್ಯಕ್ಕಾಗಿ ಶ್ರಮಿಸಿದ್ದಕ್ಕಾಗಿ ನಾಗರ್ ಕೊಯಿಲಿನಲ್ಲಿ ಬಂಗಾರದ ಪದಕ ದೇವರಾಜ ಬಹಾದ್ದೂರ್ ಬಹುಮಾನ ೧೯೭೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ