ಕನ್ನಡದ ನಾಟಕಕಾರ ಹಾಗು ಹಾಸ್ಯಲೇಖಕ ಎಸ್.ಎನ್.ಶಿವಸ್ವಾಮಿ ಇವರು ಕೊರವಂಜಿಯಿಂದ ಹಿಡಿದು ಅಪರಂಜಿಯವರೆಗೆ ಆರು ದಶಕಗಳ ದೀರ್ಘಕಾಲದವರೆಗೆ ಕನ್ನಡಿಗರಿಗೆ ಹಾಸ್ಯದ ರುಚಿ ನೀಡಿದ್ದಾರೆ. ಈ ಅವಧಿಯಲ್ಲಿ ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿಯೂ ಇವರ ಲಘುಲೇಖನಗಳು ಪ್ರಕಟವಾಗಿವೆ. == ಕೃತಿಗಳು == === ನಾಟಕ === ಶಬ್ದಬ್ರಹ್ಮನ ಶಿರ ಹೋಯಿತ್ತು ವಾರಿಧಿ ನಿನಗಿದೊ ವಂದನೆ === ಹಾಸ್ಯ ಸಂಕಲನ === ಹಾಸ್ಯಾವತಾರ ಜಾತ್ರೆಯಲ್ಲಿ ಜಾಗರಣೆ ಬೂಸಾದಹನ == ಪುರಸ್ಕಾರ == ದೀರ್ಘಕಾಲೀನ ಅವಿರತ ಹಾಸ್ಯಬರಹಗಳಿಗಾಗಿ ೧೯೯೮ನೆಯ ಇಸವಿಯ ಪಡುಕೋಣೆ ರಮಾನಂದ ಪ್ರಶಸ್ತಿ ಇವರಿಗೆ ಲಭಿಸಿದೆ.