== ಡಾ.ಎಸ್.ಎನ್.ಹೆಗಡೆ ಅವರ ಪರಿಚಯ == ಡಾ.ಎಸ್.ಎನ್.ಹೆಗಡೆ ಅವರು ಹುಟ್ಟಿದ್ದು ೦೯-೦೧-೧೯೫೦ರಲ್ಲಿ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೋಕಿನ ಗುಡ್ಡೇಕಣ ಗ್ರಾಮದಲ್ಲಿ. ತಂದೆ ನಾರಾಯಣ ಹೆಗಡೆ, ತಾಯಿ ಗಣಪಮ್ಮ. ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಬಿ.ಎಸ್ಸಿ, ಎಂ.ಎಸ್ಸಿ ಮತ್ತು ಪಿಎಚ್.ಡಿ ಪದವಿ ಪಡೆದು ಅಲ್ಲಿಯೇ ಸ್ನಾತಕೋತ್ತರ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿ, ಜನವರಿ ೩೧, ೨೦೧೨ರಂದು ನಿವೃತ್ತರಾಗಿ, ಪ್ರಸ್ತುತ ೨೦೧೩-೧೪ನೇ ಸಾಲಿನಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಪರೀಕ್ಷಾ ನಿಯಂತ್ರಣ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. == ಜೀವನ/ಸಾಧನೆ == ಡಾ.ಎಸ್.ಎನ್.ಹೆಗಡೆ ಅವರು ಕಳೆದ ೩೦ ವರ್ಷಗಳಿಂದ ಕನ್ನಡ ವಿಜ್ಞಾನ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ವಿಜ್ಞಾನವನ್ನು ಜನಪ್ರಿಯ ಗೊಳಿಸುವಲ್ಲಿ ಇವರ ಕೊಡುಗೆ ಅಪಾರ. ಮೂವತ್ತೆರಡು ವರ್ಷಗಳಿಗಿಂತ ಹೆಚ್ಚಿನ ಬೋಧನಾನುಭವ ಹಾಗೂ ಮೂವತ್ತೇಳು ವರ್ಷಗಳಿಗಿಂತ ಅಧಿಕ ಸಂಶೋಧನ ಅನುಭವ ಇವರಿಗಿದೆ. ಹದಿನೈದು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಪ್ರಾಣಿಗಳ ವರ್ತನೆಗೆ ಸಂಬಂಧಿಸಿದಂತೆ ಇವರು ಪ್ರತಿಪಾದಿಸಿದ ಬಿಗ್ಗರ್ ಈಸ್ ಬೆಟರ್ ಎಂಬ ನಿಯಮವು ಅಂತರರಾಷ್ಟ್ರೀಯ ಮನ್ನಣೆ ಪಡೆದಿದೆ. == ಪ್ರಕಟಿತ ಸಾಹಿತ್ಯ == ಮೈಸೂರು ವಿಶ್ವ ವಿದ್ಯಾನಿಲಯ ಹೊರತಂದ ಕನ್ನಡ ವಿಷಯ ವಿಶ್ವಕೋಶ, ಪ್ರಾಣಿ ವಿಜ್ಞಾನದಲ್ಲಿ ಇದುವರೆಗೆ ಇಪ್ಪತ್ತು ಜನಪ್ರಿಯ ವಿಜ್ಞಾನದ ಕೃತಿಗಳನ್ನು ರಚಿಸಿದ್ದಾರೆ. ಮೈಸೂರು ವಿಶ್ವ ವಿದ್ಯಾನಿಲಯದ ವಿಜ್ಞಾನ ಕರ್ಣಾಟಕದ ಸಂಪಾದಕರಾಗಿ, ಕನ್ನಡ ವಿಶ್ವಕೋಶದ ೧೩ ಮತ್ತು ೧೪ನೇ ಸಂಪುಟಗಳ ಗೌರವ ಸಮಾಲೋಚಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ೧೨೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. == ಪ್ರಕಟಿತ ಕೃತಿಗಳು == == ಸಂಪಾದಿತ ಕೃತಿ == ಕನ್ನಡ ವಿಷಯ ವಿಶ್ವಕೋಶ-ಪ್ರಾಣಿ ವಿಜ್ಞಾನ - ೨೦೦೬ - ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು (೧೨೦೦ಪುಟಗಳ ಎ-೪ ಗಾತ್ರದ ಈ ಸಂಪುಟವನ್ನು ಕೇವಲ ಹತ್ತು ತಿಂಗಳಲ್ಲಿ ಸಂಪಾದಿಸಲಾಗಿದೆ) == ಪ್ರಶಸ್ತಿ/ಪುರಸ್ಕಾರ == ಪ್ಯಾಲಸ್ಟೀನಿಯನ್ ಸ್ಟೂಡೆಂಟ್ಸ್ ಯೂನಿಯನ್ ನ ಬೆಸ್ಟ್ ಟೀಚರ್ಸ್ ಪ್ರಶಸ್ತಿ, ನ್ಯಾಷನಲ್ ಜಿಯೋಗ್ರಫಿಕ್ ಸೊಸೈಟಿಯ ಗೌರವ ಸದಸ್ಯತ್ವ, ಸೊಸೈಟಿ ಆಫ್ ಲೈಫ್ ಸೈನ್ಸ್ ನ ಫೇಲೋಶಿಫ್, ಸರ್.ಸಿ.ವಿ.ರಾಮನ್ ವಿಜ್ಞಾನ ಸಾಹಿತ್ಯ ಪ್ರಶಸ್ತಿ. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಲೇಖಕ ಪ್ರಶಸ್ತಿ. ಪ್ರಾಣಿ ವಿಜ್ಞಾನದ ಕೊಡುಗೆಗಾಗಿ ಜೂವಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾದಿಂದ ಸನ್ಮಾನ == ಕೃತಿ ನೆರವು == ಆಲ್ಪ್ರಡ್ ರಸೆಲ್ ವ್ಯಾಲ್ಲೇಸ್ ;ಡಾರ್ವಿನ್ನನ ನೆರಳು - ಡಾ.ಎಸ್.ಎನ್.ಹೆಗಡೆ == ಉಲ್ಲೇಖಗಳು ==