ಗುಡಿಬ೦ಡೆ ಪೂರ್ಣಿಮಾ ಎ೦ಬ ಕಾವ್ಯನಾಮದಿಂದ ಪ್ರಸಿದ್ದರಾಗಿರುವ 'ಎಸ್.ಪಿ.ಪೂರ್ಣಿಮಾ' ಅವರು ಕನ್ನಡ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ಕಾದಂಬರಿ, ಕಾವ್ಯ, ನಾಟಕ, ಜೀವನ ಚರಿತ್ರೆ, ಅಧ್ಯಯನ ಕೃತಿ, ಲೆಖನಗಳು, ಸಣ್ಣಕಥೆಗಳು ಮುಂತಾದವುಗಳಲ್ಲಿ ತೊಡಗಿಕೊಂಡಿದ್ದಾರೆ. ಸಾಹಿತ್ಯಕ್ಕಾಗಿ ಇವರು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರೆ. == ಜನನ. ಜೀವನ == ಇವರು ೧೭-೫-೧೯೫೧ರಲ್ಲಿ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಜನಿಸಿದರು. ತಂದೆ ದಿ|ಎಸ್.ಜೆ.ಪ್ರಭಾಚಂದ್ರ ('ಶಶಿಕಿರಣ' ಕಾವ್ಯನಾಮ). ತಾಯಿ ಎಸ್.ಪಿ. ಶಾಂತಮ್ಮ ('ಧಾರಿಣಿದೇವಿ' ಕಾವ್ಯನಾಮ). ಸುರೆಶ್ ಜೈನ್(ದಿ) ಇವರ ಜೊತೆ ಮದುವೆಯಾದರು. ಇವರಿಗೆ ಒಬ್ಬ ಮಗ . ಪಿ.ಎಸ್.ರನ್ನಗೌರವ (೪.೯.೧೯೮೭) ಇಂಜಿನಿಯರಿಂಗ್ ವಿದ್ಯಾರ್ಥಿ. ಇವರು ಅಖಿಲ ಭಾರತ ಸಾಹಿತ್ಯ ಸಮ್ಮೆಳನಗಳು, ದಸರಾ ಕವಿಗೊಷ್ಟಿ, ಹಂಪಿ ಉತ್ಸವ, ನಂದಿ ಉತ್ಸವ,ಜಿಲ್ಲಾ ಸಾಹಿತ್ಯ ಸಮ್ಮೆಳನ, ಲೇಖಕಿಯರ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. == ಕೃತಿಗಳು == === ಕವನ ಸಂಕಲನ === ಬೇರು,ಕಣ್ಣುರೆಪ್ಪೆ === ನಾಟಕಗಳು === ಎರಡು ನಾಟಕಗಳು === ಲೇಖನಗಳು === ಬಿತ್ತರ ಹಾಗೂ ಬಿಡಿ ಬಿಡಿ === ಇತರ ಕೃತಿಗಳು === ಅಲೆಯಾಳ,ಯಶೋಮಾನಾ - ಜೀವನ ಚರಿತ್ರೆ-೩ ಬದುಕು ಬೇರು ವಂಶವಾಹಿ - ಅಧ್ಯಯನ-೧ ಸಣ್ಣಕಥೆ - ನಿಸರ್ಗದ ನಿಲುವು + ಇತರ -೪೦ಕ್ಕೂ ಹೆಚ್ಚು ಅಪ್ರಕಟಿತ. == ಪ್ರಶಸ್ತಿಗಳು == ಶ್ರೀ ಗೋಮಟೇಶ್ವರ ರಾಷ್ಟ್ರೀಯ ಪ್ರಶಸ್ತಿ ಶ್ರೀ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಮಲ್ಲಿಕಾ ಪ್ರಶಸ್ತಿ == ಉಲ್ಲೇಖಗಳು == == ಇದನ್ನೂ ಸಹಾ ನೋಡಿ == ನಮ್ಮ ಬದುಕಿನ ಪುಟಗಳು ಡಾ.ಕೆ.ಆರ್.ಸಂಧ್ಯಾರೆಡ್ಡಿ ಪುಟ-೯೦