ಎಸ್. ಮಹೇಂದರ್ ಇವರು ಮೈಸೂರು ಜಿಲ್ಲೆಯ, ಕೊಳ್ಳೆಗಾಲ ತಾಲ್ಲೂಕಿನ ಬ೦ಡಹಳ್ಳಿಯಲ್ಲಿ ಜನಿಸಿದರು. ಇವರು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಚಲನಚಿತ್ರ ನಿರ್ದೇಶಕ. ಅವರು ಕರ್ನಾಟಕದ ಕೊಳ್ಳೇಗಾಲ ಕ್ಷೇತ್ರದಿಂದ ಸ್ಪರ್ಧಿಸುವ ಬಿಜೆಪಿಯ ರಾಜಕಾರಣಿಯೂ ಆಗಿದ್ದಾರೆ. ಅವರು ಪ್ರಣಯದ ಪಕ್ಷಿಗಳು (೧೯೯೨) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು ೩೦ ಕ್ಕೂ ಹೆಚ್ಚು ಚಲನಚಿತ್ರಗಳಿಗೆ ನಿರ್ದೇಶನ ಮಾಡಿದರು. ಅವರು ತಮ್ಮದೇ ನಿರ್ದೇಶನವಾದ ಗಟ್ಟಿಮೇಳ (೨೦೦೧) ದಲ್ಲಿ ಪ್ರಮುಖ ಪಾತ್ರದಾರರಾಗಿ ನಟಿಸಿದ್ದಾರೆ. ತಾಯಿ ಇಲ್ಲದವರು (೧೯೯೫), ಕರ್ಪೂರದ ಗೊಂಬೆ (೧೯೯೬), ಸ್ನೇಹಲೋಕ (೧೯೯೯), ಅಸುರ (೨೦೦೧), ವಾಲೀ (೨೦೦೧), ನಿನಗಾಗಿ (೨೦೦೨), ಗೌಡ್ರು (೨೦೦೪) ಮತ್ತು ತಂದೆಗೆ ತಕ್ಕ ಮಗ (೨೦೦೬) ಅವರ ಪ್ರಸಿದ್ಧ ಚಲನಚಿತ್ರಗಳು. == ವೈಯಕ್ತಿಕ ಜೀವನ == ಮಹೇಂದರ್ ಅವರ ಹಲವು ಚಿತ್ರಗಳಲ್ಲಿ ನಟಿಸಿದ್ದ ನಟಿ ಶ್ರುತಿ ಅವರನ್ನು ವಿವಾಹವಾಗಿದ್ದರು. ಅವರಿಗೆ ಗೌರಿ ಎಂಬ ಮಗಳಿದಳು. ೨೦೦೯ ರಲ್ಲಿ, ಶ್ರುತಿ ತಿಳುವಳಿಕೆಯ ವ್ಯತ್ಯಾಸಗಳನ್ನು ಉಲ್ಲೇಖಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ನಂತರ ೨೦೧೨ರಲ್ಲಿ ಮೈಸೂರು ಮೂಲದ ಅರ್ಥಶಾಸ್ತ್ರ ವಿದ್ಯಾರ್ಥಿನಿ ಯಶೋಧಾ ಅವರನ್ನು ವಿವಾಹವಾದರು. == ಚಿತ್ರಕಥೆ == === ನಿರ್ದೇಶಕರಾಗಿ === === ಗಾಯಕನಾಗಿ === == ಉಲ್ಲೇಖ == == ಬಾಹ್ಯ ಕೊಂಡಿಗಳು == ಎಸ್.ಮಹೇ೦ದರ್ ಐ ಎಮ್ ಡಿ ಬಿನಲ್ಲಿ