ಎಸ್.ವಿ.ಶ್ರೀನಿವಾಸರಾವ್ ಇವರು ತುಮಕೂರಿನಲ್ಲಿ ೧೯೩೧ ಡಿಸೆಂಬರ ೨೪ರಂದು ಜನಿಸಿದರು. ಇವರ ತಾಯಿ ಪುಟ್ಟಚ್ಚಮ್ಮ ; ತಂದೆ ವೆಂಕಟರಾಮಯ್ಯ (ದತ್ತು ತಂದೆ ತಾಯಿಗಳು). == ಶಿಕ್ಷಣ == ಎಸ್.ವಿ.ಶ್ರೀನಿವಾಸರಾವ್ ಅವರು ಬಿ.ಎಸ್ಸಿ. ಮುಗಿಸಿ, ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಸೈಂಟಿಫಿಕ್ ಆಫಿಸರ್ ಆಗಿದ್ದರು. ನಂತರ ಎಂ.ಎ. ಮಾಡಿಕೊಂಡರು. ಅಲ್ಲದೆ ಹಿಂದಿಯಲ್ಲಿ ವಿಶಾರದ ಪರೀಕ್ಷೆಯನ್ನೂ , ರಶಿಯನ್ ಭಾಷೆಯಲ್ಲಿ ಡಿಪ್ಲೋಮಾವನ್ನೂ ಪಡೆದಿದ್ದಾರೆ. == ಸಂಘ ಸಂಸ್ಥೆಗಳ ಜೊತೆ ಸಂಪರ್ಕ == ಎಸ್.ವಿ.ಶ್ರೀನಿವಾಸರಾವ್ಅವರು ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿಯಾಗಿದ್ದರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯದರ್ಶಿಯಾಗಿದ್ದರು == ಕೃತಿಗಳು == === ಕಥಾಸಂಕಲನ === ಕಾಗೆಯ ಗೂಡಿನಲ್ಲಿ ಕೋಗಿಲೆ ಹಾಡಿತು ಗಾಳಿ ಮೋಡದ ಗೆಳತಿ ಗೊಂಚಲು ಅಂಕ ಮುಗಿಯಲಿಲ್ಲ === ಕಾದಂಬರಿ === ಕನ್ಯಾದಾನ ಹಸಿರು ಮಂಟಪ ಮಣ್ಣಿನ ಮಗ ಬಾಳೇ ಬಂಗಾರ ಮಬ್ಬು ಮುಂಜಾವು ಸ್ವರಮೇಳ ಸ್ವಾತಿಯ ಹನಿ ಇಬ್ಬನಿ ಸುಣ್ಣವಿಲ್ಲದ ವೀಳ್ಯ ಸೋನಾರ್ ಬಾಂಗ್ಲಾ ಹರಿಗೋಲು ಮಂಥನ ರಂಗಸ್ಥಳ ಪವನ ಚಕ್ರ ಗೆಜ್ಜೆ ಕಟ್ಟಿದ ಹೆಜ್ಜೆ ಪ್ರೌಢ ಪ್ರತಾಪ ವೀರ ರಾಜೇಂದ್ರ ಸತ್ಯಮೇವ ಜಯತೆ === ಅನುವಾದ === ಒರಿಯಾ ಕಥೆಗಳು ಇಪ್ಪತ್ತೊಂದು ಬಂಗಾಳಿ ಕಥೆಗಳು ಹ್ಯೂಯೆನ್ ತ್ಸಾಂಗನ ಇಂಡಿಯಾ ಪ್ರವಾಸ ಕಾಕಾ ಕಾಲೇಲಕರ ಸ್ವಾಮಿ ವಿವೇಕಾನಂದ === ಮಕ್ಕಳ ಸಾಹಿತ್ಯ === ಇಮ್ಮಡಿ ಪುಲಿಕೇಶಿ ಕೆರೂರ ವಾಸುದೇವಾಚಾರ್ಯ ನಮ್ಮ ವಾಯುಪಡೆ ಗಂಗರಾಜ ದುರ್ವಿನೀತ ಬಾನುಲಿ ನಾಟಕಗಳು ಮಕ್ಕಳೆ, ಇವರನ್ನು ನೀವು ಬಲ್ಲಿರಾ? ಪಂ. ಗೋವಿಂದ ವಲ್ಲಭ ಪಂತ ಮೌ. ಅಬುಲ್ ಕಲಾಮ್ ಆಜಾದ ಪೌರಪ್ರಜ್ಞೆ ಕವಿರತ್ನತ್ರಯರು ಸ್ಮರಣೀಯ ಹುತಾತ್ಮರು ಜಲಸಂಪತ್ತು ಸಹನೆ-ಸಾಧನೆ ಪುಟಾಣಿ ಸಾಹಸಿಗಳು (ಮಕ್ಕಳ ಕಾದಂಬರಿ) ಹಾರೊ ಹನುಮ ((ಮಕ್ಕಳ ಕಾದಂಬರಿ) === ಸಂಪಾದನೆ === ಸತ್ಪಥ ವಿದ್ಯಾವಿನೋದಿನಿ ಕರ್ನಾಟಕದ ಮುಖ್ಯ ಮಂತ್ರಿಗಳು === ಪ್ರವಾಸಕಥನ === ಇಣುಕು ನೋಟ === ಜೀವನ ಚಿತ್ರ === ಮೂಡಬಿದರಿ ವೀರಪ್ಪ ಮೊಯಿಲಿ === ಇತರ === ಕನ್ನಡ ಸಾಹಿತಿ ದರ್ಶನ ಬೆಟಗೇರಿ ಕೃಷ್ಣಶರ್ಮ ವಾಚಿಕೆ ಪರಿಸರ ಮಾಲಿನ್ಯದ ಅಪಾಯಗಳು == ಪುರಸ್ಕಾರ == “ಒರಿಯಾ ಕಥೆಗಳು” ಈ ಅನುವಾದಕ್ಕಾಗಿ ರಾಜ್ಯಸರಕಾರದ ಬಹುಮಾನ ದೊರೆತಿದೆ “ಸಹನೆ-ಸಾಧನೆ” ಕೃತಿಗೆ ಆರ್ಯಭಟ ಪ್ರಶಸ್ತಿ ದೊರೆತಿದೆ “ಪ್ರೌಢಪ್ರತಾಪ ವೀರ ರಾಜೇಂದ್ರ” ಕೃತಿಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ ದೊರೆತಿದೆ