ಏ ಕನ್ನಡ ವರ್ಣಮಾಲೆಯ ಒಂಬತ್ತನೇ ಅಕ್ಷರವಾಗಿದೆ.ಇದು ಒಂದು ದೀರ್ಘಸ್ವರಾಕ್ಷರ. == ಚಾರಿತ್ರಿಕ ಹಿನ್ನೆಲೆ == ಪ್ರಾಚೀನತಮ ಬ್ರಾಹ್ಮೀಲಿಪಿಯಲ್ಲಿ ಈ ಅಕ್ಷರ ಒಂದು ತ್ರಿಕೋಣದಂತೆ ಇದ್ದು ಪ್ರ.ಶ. 2ನೆಯ ಶತಮಾನದ ಹೊತ್ತಿಗೆ ತ್ರಿಕೋಣದ ಮೂಲೆಗಳು ದುಂಡಗಾದುವು. ಕದಂಬರ ಕಾಲದಲ್ಲಿ ಕೆಳಗಿನ ಒಳಭಾಗ ವೃತ್ತಾಕಾರದಂತಾಗಿ ಚೌಕತಲೆಯ ತಲೆಕಟ್ಟು ಸ್ಪಷ್ಟವಾಗಿ ಕಾಣುತ್ತದೆ. ಪ್ರ.ಶ. 9ನೆಯ ಶತಮಾನದಲ್ಲಿ ಕೆಳಗಿನ ವೃತ್ತಾಕಾರದಲ್ಲಿ ಬದಲಾವಣೆಗಳುಂಟಾಗಿ ಅಕ್ಷರ ಈಗಿರುವ ರೂಪವನ್ನು ಹೋಲುತ್ತದೆ. 13ನೆಯ ಶತಮಾನದಲ್ಲಿ ವೃತ್ತ ಮಾರ್ಪಟ್ಟು ಒಂದು ಸಣ್ಣ ಕೊಂಡಿಯಂತೆ ಬದಲಾಗುತ್ತದೆ. ಇದೇ ಪ್ರವೃತ್ತಿ ಮುಂದುವರಿದು ಈಗಿರುವ ರೂಪವನ್ನು ತಳೆಯುತ್ತದೆ. ಉಚ್ಚಾರಣೆಯಲ್ಲಿ ವ್ಯತ್ಯಾಸವಿದ್ದರೂ ಎಕಾರ ಏಕಾರಗಳ ಚಾಕ್ಷುಷರೂಪ ಮಾತ್ರ ಬಹಳ ಕಾಲ ಒಂದೇ ಆಗಿತ್ತೆಂದು ತೋರುತ್ತದೆ. ಈ ಅಕ್ಷರ ಪೂರ್ವ ಅಗೋಲ ಅರ್ಧ ಸಂವೃತ ದೀರ್ಘಸ್ವರವನ್ನು ಸೂಚಿಸುತ್ತದೆ. ವ್ಯಂಜನದೊಂದಿಗೆ ಸೇರಿದಾಗ ಎ ವರ್ಣ ಪಡೆಯುತ್ತಿದ್ದ ರೂಪಾದಿ ವಿವರಗಳಿಗೆ (ನೋಡಿ- ಎ). == ಸ್ವರಾಕ್ಷರಗಳು ಎಂದರೇನು ? == ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು. ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್. ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ, ಅ,ಆ, ಇ, ಈ, ಉ, ಊ, ಋ, ೠ , ಌ, ೡ, ಏ, ಐ, ಓ, ಔ. === ದೀರ್ಘಸ್ವರ === ಎರಡು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು ೫ - ಆ, ಈ, ಊ, ಋೂ, ಌ, ಏ, ಓ - ಈ ಅಕ್ಷರಗಳನ್ನು ಗುರು(ವ್ಯಾಕರಣ) ಎಂದು ಕರೆಯುತ್ತಾರೆ. ಇವುಗಳಲ್ಲಿ ಏ ಅಕ್ಷರವೂ ಒಂದಾಗಿದೆ. == ಕನ್ನಡದ ನಾವಿ ಸ್ವರಗಳು == ಈ ನಾಮಿ ಸ್ವರಗಳನ್ನು ಸವರ್ಣಗಳೆಂದು ಕರೆಯುತ್ತಾರೆ. == ಏ ಕನ್ನಡ ಅಕ್ಷರವನ್ನು ಬರೆಯುವ ಮತ್ತು ಉಚ್ಛರಿಸುವ ವಿಧಾನ == == ಏ ದಿಂದ ಆರಂಭವಾಗುವ ನಾಮಪದಗಳು == ಪ್ರಾಣಿ ಸಂಬಂಧಿ ಪದ : ಏಡಿ ಮನುಷ್ಯ ಸಂಬಂಧಿ ಪದ : ಏಸುಕ್ರಿಸ್ತ ಸಸ್ಯ ಸಂಬಂಧಿ ಪದ : ಏಲಕ್ಕಿ == ಏ' ಅಕ್ಷರದಿಂದ ಆರಂಭವಾಗುವ ಸಂಖ್ಯಾವಚಿ ಪದಗಳು == ಏಳು == ಉಲ್ಲೇಖ ==