ಏಷ್ಯಾ ಪ್ರಪಂಚದ ಅತಿ ದೊಡ್ಡ ಹಾಗೂ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಖಂಡವಾಗಿದೆ. ಭೂಗೋಳದ ಸುಮಾರು ೮.೭% ಪ್ರದೇಶವನ್ನು ಈ ಖಂಡ ಆವರಿಸಿದೆ ಮತ್ತು ಪ್ರಪಂಚದ ಸುಮಾರು ೬೦% ಜನಸಂಖ್ಯೆಯನ್ನು ಹೊಂದಿದೆ. ಪಾರಂಪರಿಕವಾಗಿ ಏಷ್ಯಾದ ಪಶ್ಚಿಮದ ಪರಿಮಿತಿಯು ಸುಯೆಜ್ ಕಾಲುವೆ, ಯೂರಲ್ ಪರ್ವತ ಶ್ರೇಣಿಯೆಂದು ಹಾಗು ಉತ್ತರ ಪರಿಮಿತಿಯು ಕಾವ್ಕಸಸ್ ಪರ್ವತ ಶ್ರೇಣಿ ಹಾಗು ಕ್ಯಾಸ್ಪಿಯನ್ ಸಮುದ್ರ ಮತ್ತು ಕಪ್ಪು ಸಮುದ್ರ(ಬ್ಲ್ಯಕ್ ಸೀ)ಗಳೆಂದು ಪರಿಗಣಿಸಲ್ಪಡುತ್ತದೆ. ಸಂಯುಕ್ತ ರಾಷ್ಟ್ರ ಸಂಸ್ಥಯು ಏಷ್ಯಾ ಖಂಡವನ್ನು ಈ ಪ್ರಕಾರ ವಿಭಜಿಸುತ್ತದೆ. ಪೂರ್ವ ಏಷ್ಯಾ ಆಗ್ನೇಯ ಏಷ್ಯಾ ದಕ್ಷಿಣ ಏಷ್ಯಾ ಮಧ್ಯ ಏಷ್ಯಾ ಉತ್ತರ ಏಷ್ಯಾ ಪಶ್ಚಿಮ ಏಷ್ಯಾ == ಪ್ರಾಂತ್ಯಗಳು ಮತ್ತು ರಾಷ್ಟ್ರಗಳು == ಈ ಪಟ್ಟಿಯು ವಿಶ್ವಸಂಸ್ಥೆ ಉಪಯೋಗಿಸುವ ವ್ಯವಸ್ಥೆಯ ರೀತಿಯಲ್ಲಿ ಸಂಗಟಿತಲ್ಪಟ್ಟಿದೆ. :