ಐಎಸ್ಒ ೯೦೦೦ ಎನ್ನುವುದು ಉತ್ತನ್ನಗಳ ಗುಣಮಟ್ಟ ನಿರ್ವಹಣಾ ವ್ಯವಸ್ಥೆಗಳಲ್ಲೊಂದು. ಸಂಸ್ಥೆಗಳು ತಮ್ಮ ಉತ್ಪನ್ನಗಳ ಗುಣಮಟ್ಟ ಗ್ರಾಹಕರ, ಶಾಸನಗಳ ಮಾನದಂಡಗಳಿಗೆ ಅನುಗುಣವಾಗಿರುವಂತೆ ನೋಡಿಕೊಳ್ಳಲು ಇದು ಸಹಕರಿಸುತ್ತದೆ. == ಇತಿಹಾಸ == ಐಎಸ್ಒ ೯೦೦೧ವನ್ನು ೧೯೮೭ರಲ್ಲಿ ಸ್ಥಾಪಿಸಲಾಯಿತು.ಇದು ಬಿ.ಎಸ್.ಐ()ನ ೫೭೫೦ ಸರಣಿಯ ಮಾನದಂಡಗಳ ಮೇಲೆ ಆಧಾರಿತವಾಗಿದೆ. == ಐಎಸ್ಒ ೯೦೦೦ ಸರಣಿಯ ಗುಣಮಟ್ಟ ನಿರ್ವಹಣಾ ನಿಯಮಗಳು == ಐ.ಎಸ್.ಓ ೯೦೦೦ ಸರಣಿ ಎಂಟು ನಿರ್ವಹಣಾ ನಿಯಮಗಳನ್ನು ಒಳಗೊಂಡಿದೆ. ಅವೆಂದರೆ ಗ್ರಾಹಕ ಕೇಂದ್ರಿತ- ಸಂಸ್ಥೆಗಳು ಗ್ರಾಹಕರ ಇಂದಿನ ಮತ್ತು ಭವಿಷ್ಯದ ಅಗತ್ಯತೆಗಳನ್ನು ಮನಗಂಡು ಅವುಗಳನ್ನು ಪೂರೈಸುವತ್ತ ಗಮನಹರಿಸಬೇಕು. ನಾಯಕತ್ವ - ನಾಯಕರು ಸಂಸ್ಥೆಯ ಧ್ಯೇಯ ಮತ್ತು ದಿಕ್ಕುಗಳನ್ನು ನಿರ್ಧರಿಸುತ್ತಾರೆ. ಸಂಸ್ಥೆಯಲ್ಲಿ ಕೆಲಸ ಮಾಡುವವರು ಸಂಸ್ಥೆಯ ಧ್ಯೇಯಕ್ಕನುಗುಣವಾಗಿ ಕೆಲಸ ಮಾಡುವಂತಹ ಉತ್ತಮ ವಾತಾವರಣವನ್ನು ನಿರ್ಮಿಸಬೇಕಾದ್ದು ನಾಯಕರ ಕರ್ತವ್ಯ. ಜನರ ಭಾಗವಹಿಸುವಿಕೆ -ಸಂಸ್ಥೆಯ ಎಲ್ಲಾ ಸ್ಥರಗಳ ಜನರು ಭಾಗವಹಿಸುವಿಕೆ ಸಂಸ್ಥೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಪ್ರಕ್ರಿಯೆ - ಸಂಬಂಧಪಟ್ಟ ಸಂಪನ್ಮೂಲ ಮತ್ತು ಚಟುವಟಿಕೆಗಳನ್ನು ಒಂದು ವ್ಯವಸ್ಥಿತ ಪ್ರಕ್ರಿಯೆಯಾಗಿ ನಿರ್ವಹಿಸಿದಾಗ ನಿರೀಕ್ಷಿತ ಉದ್ದೇಶವನ್ನು ಈಡೇರಿಸಲು ಸಾಧ್ಯವಾಗುತ್ತದೆ ನಿರ್ವಹಣಾ ವ್ಯವಸ್ಥೆ - ಪರಸ್ಪರ ಸಂಬಂಧಿತ ಚಟುವಟಿಕೆಗಳನ್ನು ಗುರುತಿಸಿ , ಅರ್ಥೈಸುವುದರಿಂದ ಉದ್ದೇಶಿತ ಧ್ಯೇಯಗಳನ್ನು ಸಾಧಿಸೋ ಸಾಮರ್ಥ್ಯವನ್ನು ಉತ್ತಮಪಡಿಸಬಹುದು. ನಿರಂತರ ಉನ್ನತೀಕರಣ - ಸಂಸ್ಠೆಯ ಸಾಮರ್ಥ್ಯವನ್ನು ನಿರಂತರವಾಗಿ ಉತ್ತಮಪಡಿಸಿಕೊಳ್ಳುತ್ತಾ ಸಾಗುವುದು ಸಂಸ್ಥೆಯ ಧ್ಯೇಯಗಳಲ್ಲೊಂದಾಗಿರಬೇಕು ವಾಸ್ತವಿಕೆ ನೆಲೆಗಟ್ಟಿನ ಮೇಲೆ ನಿರ್ಧಾರ ಕೈಗೊಳ್ಳುವಿಕೆ - ಉತ್ತಮ ನಿರ್ಧಾರಗಳು ಲಭ್ಯ ಮಾಹಿತಿಯ ವ್ಯವಸ್ಠಿತ ಅವಲೋಕನದಿಂದ ಸಾಧ್ಯವಾಗುತ್ತದೆ. ಪರಸ್ಪರ ಲಾಭಕರ ಮಾರಾಟಗಾರರ ಸಂಬಂಧ - ಒಂದು ಸಂಸ್ಥೆ ಮತ್ತು ಅದಕ್ಕೆ ಮೂಲವಸ್ತುಗಳನ್ನು ಸರಬರಾಜು ಮಾಡುವ ಸರಬರಾಜುದಾರದ ಸಂಬಂಧ ಪರಸ್ಪರ ಲಾಭಯುತವಾಗಿರಬೇಕು == ಐಎಸ್ಒ ೯೦೦೧ರಲ್ಲಿರುವ ಅಂಶಗಳು == ಪುಟ ೪ - ಮುನ್ನುಡಿ ಪುಟ ೫-೧೦ - ಪರಿಚಯ ಪುಟ ೧೧-೧೪ - ಅಗತ್ಯತೆಗಳು ವಿಭಾಗ ೧ - ವ್ಯಾಪ್ತಿ ವಿಭಾಗ ೨ - ಪ್ರಮಾಣಕ ಉಲ್ಲೇಖ( ) ವಿಭಾಗ ೩ - ನಿಯಮಗಳು ಮತ್ತು ವ್ಯಾಖ್ಯಾನಗಳು(ಐಎಸ್ಒ ೯೦೦೦ರಲ್ಲಿಲ್ಲದ ಐಎಸ್ಒ ೯೦೦೧ರಲ್ಲಿ ಹೊಸದಾಗಿ ಸೇರ್ಪಡೆಯಾದವುಗಳು) ವಿಭಾಗ ೪ - ಗುಣಮಟ್ಟ ನಿರ್ವಹಣಾ ವ್ಯವಸ್ಥೆ ವಿಭಾಗ ೫ - ನಿರ್ವಹಣಾ ಜವಾಬ್ದಾರಿ ವಿಭಾಗ ೬ - ಸಂಪನ್ಮೂಲ ನಿರ್ವಹಣೆ ವಿಭಾಗ ೭ - ಉತ್ಪನ್ನ ಪರಿವರ್ತನೆ ವಿಭಾಗ ೮ - ಅಳತೆ, ವಿಶ್ಲೇಷಣೆ ಮತ್ತು ನಿರ್ವಹಣೆ ಪುಟ ೧೫ - ಇತರ ಮಾನದಂಡಗಳೊಂದಿಗೆ ಹೋಲಿಕೆ ಪುಟ ೨೩ - ಗ್ರಂಥಸೂಚಿ == ಐಎಸ್ಒ ೯೦೦೧ ಮಾನದಂಡ ಬೆಳೆದುಬಂದ ರೀತಿ == === ೧೯೮೭ರ ಆವೃತ್ತಿ === ಐ.ಎಸ್.ಓ ೧೯೮೭ ರ ರಚನೆ . ಯ 5750 ಮಾನದಂಡದಂತೆಯೇ ಇತ್ತು === ೧೯೯೪ ರ ಆವೃತ್ತಿ === 1994ರ ಆವೃತ್ತಿಯಲ್ಲಿ ಮುಂಜಾಗೃತ ಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಯಿತು === ೨೦೦೦ರ ಆವೃತ್ತಿ === ೨೦೦ರ ಆವೃತ್ತಿಯ ಮೂಲಕ ಹಿಂದಿನ ಮೂರೂ ಆವೃತ್ತಿಗಳನ್ನು ಬದಲಾಯಿಸಲಾಯಿತು. === ೨೦೦೮ರ ಆವೃತ್ತಿ === ಇದರಲ್ಲಿ ೨೦೦ರ ಆವೃತ್ತಿಗೆ ಕೆಲ ಬದವಾವಣೆಗಳನ್ನು ಮತ್ತು ಹೊಸ ಸೇರ್ಪಡೆಗಳನ್ನು ಜೋಡಿಸಲಾಯಿತು === ೨೦೧೫ರ ಆವೃತ್ತಿ === ಅತ್ಯಂತ ನವೀನ ಆವೃತ್ತಿ == ಉಲ್ಲೇಖಗಳು ==