ಐಕಾರ್ನಿಯ ನೀರಿನಲ್ಲಿ ಅಥವಾ ಹೆಚ್ಚಿನ ತೇವದಲ್ಲಿ ಬೆಳೆಯುವ, ಮೂಲಿಕೆಯಂಥ ಒಂದು ಏಕದಳ ಸಸ್ಯಜಾತಿ. == ಸಸ್ಯಶಾಸ್ತ್ರೀಯ ವರ್ಗೀಕರಣ == ಪಾಂಟಿಡೇರಿಯೇಸಿ ಕುಟುಂಬಕ್ಕೆ ಸೇರಿದೆ. ಈ ಜಾತಿಯಲ್ಲಿ 5 ಪ್ರಭೇದಗಳಿವೆ. ಅವುಗಳಲ್ಲಿ ಐ. ಕ್ರ್ಯಾಸಿಪೆಸ್ ಎಂಬುದು ಮುಖ್ಯವಾದದ್ದು. == ಸಸ್ಯಲಕ್ಷಣಗಳು == ಐಕಾರ್ನಿಯ ಸಸ್ಯದ ಕಾಂಡ ಸಂಯುಕ್ತ ರೀತಿಯದು. ಪಕ್ಕದ ಕಾಂಡ ಮುಖ್ಯ ಕಾಂಡಕ್ಕೆ ಅಂಟಿಕೊಂಡಿರುತ್ತದೆ. ಗಿಣ್ಣಿನ ಬಳಿ ಬೇರು. ಎಲೆಗಳು ಚಕ್ರ ಅಥವಾ ಹೃದಯದ ಆಕಾರವಾಗಿರುತ್ತವೆ. === ಐ. ಕ್ರ್ಯಾಸಿಪೆಸ್ === ಐ. ಕ್ರ್ಯಾಸಿಪೆಸಿನಲ್ಲಿ ಎಲೆಯ ತೊಟ್ಟು ಚೀಲದಂತೆ ಊದಿಕೊಂಡಿರುತ್ತದೆ. ಹೂಗೊಂಚಲು ತೆನೆಯಾಗಿದ್ದು ಉಪಪತ್ರ ಅಥವಾ ಯುಗದಿಂದ ಆವೃತವಾಗಿರುತ್ತದೆ. ಹೂಗಳು ದ್ವಿಲಿಂಗಿಗಳಾಗಿಯೂ ಪಾರ್ಶ್ವಸೌಷ್ಠದವುಳ್ಳವಾಗಿಯೂ ಇವೆ. ಪುಷ್ಪಾಂಗ ಸಂಖ್ಯೆ ಮೂರರ ಅಪವರ್ತ್ಯದಲ್ಲಿದೆ. ಆಲಿಕೆಯಾಕಾರದಲ್ಲಿರುವ ಪುಷ್ಪಾವರಣ ನೀಲನೇರಳೆ ಅಥವಾ ಬಿಳಿ ಬಣ್ಣದ್ದು. ಅದರಲ್ಲಿ 6 ಪುಷ್ಪಪತ್ರಗಳಿರುತ್ತವೆ. ಕೇಸರಗಳು 6. ಕೇಸರದಂಡಗಳಲ್ಲಿ 3 ಉದ್ದವಾಗಿಯೂ 3 ಚಿಕ್ಕವಾಗಿಯೂ ಇವೆ. ಅಂಡಕೋಶದಲ್ಲಿ 3 ಭಾಗಗಳಿವೆ. ಅಂಡಾಶಯ ಉಚ್ಚಸ್ಥಿತಿಯಲ್ಲಿದೆ. ಅಂಡಕಗಳು ಪ್ರತಿ ಕುಹರದಲ್ಲೂ ಅಧಿಕ ಸಂಖ್ಯೆಯಲ್ಲಿವೆ. == ಹರಡುವಿಕೆ == ಐ. ಕ್ರ್ಯಾಸಿಪೆಸ್ ಎಂಬ ಪ್ರಭೇದ ಅಮೆರಿಕ, ಆಸ್ಟ್ರೇಲಿಯಾ, ಜಾವ, ಭಾರತ, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಹೆಚ್ಚಾಗಿದ್ದು ನೀರಿನಲ್ಲಿ ಬೃಹತ್ ಕಳೆಯಾಗಿ ವ್ಯಾಪಿಸಿ ತೊಂದರೆಯನ್ನುಂಟುಮಾಡುತ್ತಿದೆ. ಕೆಲವು ಕಡೆಗಳಲ್ಲಿ ಹಡಗಿನ ಸಂಚಾರಕ್ಕೂ ಅಡ್ಡಿಯನ್ನುಂಟುಮಾಡಿದೆ. ಕೆರೆ, ಕಾಲುವೆ, ಕುಂಟೆಗಳಲ್ಲಿ ಒತ್ತಾಗಿ ಬೆಳೆದು ಸೊಳ್ಳೆಗಳ ಉದ್ಭವಸ್ಥಾನವಾಗಿದೆ. ಈ ಸಸ್ಯವನ್ನು ನಿರ್ಮೂಲ ಮಾಡುವುದು ಒಳ್ಳೆಯದಾದರೂ ಈ ಜಾತಿಯ ಕೆಲವು ಪ್ರಭೇದಗಳನ್ನಾದರೂ ಅವುಗಳ ಚೆಲುವಾದ ಹೂಗಳಿಗಾಗಿ ಉಳಿಸಿಕೊಳ್ಳಬೇಕಾಗುತ್ತದೆ. == ಛಾಯಾಂಕಣ == == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2015-09-24 ವೇಬ್ಯಾಕ್ ಮೆಷಿನ್ ನಲ್ಲಿ. - . - ( ) 2015-10-05 ವೇಬ್ಯಾಕ್ ಮೆಷಿನ್ ನಲ್ಲಿ., , . . - ( ) 2015-10-05 ವೇಬ್ಯಾಕ್ ಮೆಷಿನ್ ನಲ್ಲಿ., , . . . 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.