ಐಡಹೋ ಅಮೇರಿಕ ಸಂಯುಕ್ತ ಸಂಸ್ಥಾನದ ವಾಯುವ್ಯ ಭಾಗದಲ್ಲಿರುವ ಒಂದು ರಾಜ್ಯ. ರಾಜ್ಯದ ಅತೀ ದೊಡ್ಡ ನಗರ ಹಾಗೂ ರಾಜಧಾನಿ ಬಾಯ್ಸಿ. ಇದರ ಸುತ್ತಲು ಇರುವ ರಾಜ್ಯಗಳು ಒರೆಗಾನ್, ವಾಶಿಂಗ್ಟನ್, ನೆವಾಡಾ, ಮಾಂಟಾನ, ವಯೊಮಿಂಗ್, ಯುಟಾ ಹಾಗೂ ಕೆನಡದ ಬ್ರಿಟಿಶ್ ಕೊಲಂಬಿಯ. ಅಮೇರಿಕ ಸಂಯುಕ್ತ ಸಂಸ್ಥಾನದ ೨೦೧೦ ಜನಸಂಖ್ಯೆಯ ಪ್ರಕಾರ ರಾಜ್ಯದ ಜನಸಂಖ್ಯೆ ೧,೫೬೭,೫೮೨. ಹಲವಾರು ರತ್ನಗಳು ಸಿಗುವ ಕಾರಣದಿಂದಾಗಿ ಈ ರಾಜ್ಯಕ್ಕೆ 'ಜೆಂ ಸ್ಟೇಟ್ ಎಂದು ಕರೆಯುತ್ತಾರೆ. ವಿಶ್ವದಲ್ಲಿ ಸ್ಟಾರ್ ಗಾರ್ನೆಟ್ ಎಂಬ ರತ್ನವು ಸಿಗುವ ಎರಡು ಜಾಗಗಳಲ್ಲಿ ಈ ರಾಜ್ಯ ಒಂದು (ಇನ್ನೊಂದು ಜಾಗ ಭಾರತದ ಹಿಮಾಲಯ ಪರ್ವತಗಳು). == ==