ಒಪ್ಪೋವು ಚೈನೀಸ್ ಗ್ರಾಹಕ ಎಲೆಕ್ಟ್ರಾನಿಕ್ಸ್‌ನಲ್ಲಿ ತಯಾರಿಸಲಾಗಿದ್ದು, ಇದರ ಪ್ರಧಾನ ಕಚೇರಿ ಗುವಾಂಗ್‌ಡಾಂಗ್‌ನ ಡಾಂಗ್‌ಗುವಾನ್‌ನಲ್ಲಿ ಇದೆ. ಇದರ ಪ್ರಮುಖ ಉತ್ಪನ್ನ ಸಾಲುಗಳಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಸಾಧನಗಳು, ಆಡಿಯೊ ಸಾಧನಗಳು, ಪವರ್ ಬ್ಯಾಂಕ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳು ಸೇರಿವೆ. ಬಿಬಿಕೆ ಎಲೆಕ್ಟ್ರಾನಿಕ್ಸ್ ಇದರ ಮೇಲ್ವಿಚಾರಣೆಯನ್ನು ೨೦೨೩ ರವರೆಗೆ ನೋಡಿಕೊಂಡಿತು. == ಇತಿಹಾಸ == ೨೦೦೧ ರಲ್ಲಿ "ಒಪ್ಪೋ" ಎಂಬ ಬ್ರ್ಯಾಂಡ್ ಹೆಸರನ್ನು ಚೀನಾದಲ್ಲಿ ನೋಂದಾಯಿಸಲಾಯಿತು ಮತ್ತು ೨೦೦೪ ರಲ್ಲಿ ಟೋನಿ ಚೆನ್ ಅವರು ಚೀನಾದ ಡೊಂಗುವಾನ್‌ನಲ್ಲಿ ಪ್ರಾರಂಭಿಸಿದರು. ೨೦೦೫ ರಲ್ಲಿ, ಅವರು ತಮ್ಮ ಮೊದಲ ಸಾಧನ ಒಪ್ಪೋ ಸ್೩ ಎಂಪಿ೩ ಅನ್ನು ಅಂತರಾಷ್ಟ್ರೀಯವಾಗಿ ಪರಿಚಯಿಸಿದರು. ಜೂನ್ ೨೦೧೬ ರಲ್ಲಿ, ಒಪ್ಪೋ ತನ್ನ ಫೋನ್‌ಗಳನ್ನು ೨೦೦೦೦೦ ಕ್ಕಿಂತ ಹೆಚ್ಚುನ ಚಿಲ್ಲರೆ ಮಳಿಗೆಗಳಲ್ಲಿ ಮಾರಾಟ ಮಾಡಿತ್ತು. ಇದರ ಮೂಲಕ ಅವರು ಚೀನಾದಲ್ಲಿ ಅತಿ ದೊಡ್ಡ ಸ್ಮಾರ್ಟ್‌ಫೋನ್ ತಯಾರಕರಾದರು. ೨೦೧೮ ರಲ್ಲಿ, ಒಪ್ಪೋ ಡಿಜಿಟಲ್ ಅವರು ಪ್ರಮುಖ ಮಾರುಕಟ್ಟೆಗಳಲ್ಲಿ ತಮ್ಮ ಡಿಸ್ಕ್ ಪ್ಲೇಯರ್ ವ್ಯವಹಾರವನ್ನು ನಿಲ್ಲಿಸುತ್ತಿದ್ದೇವೆ ಮತ್ತು ಮೊಬೈಲ್ ಸಾಧನಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ ಎಂದು ಘೋಷಿಸಿದರು. ೨೦೧೯ ರಲ್ಲಿ ಒಪ್ಪೋ ಚೀನಾದಲ್ಲಿ ಅಗ್ರ ಸ್ಮಾರ್ಟ್‌ಫೋನ್ ಬ್ರಾಂಡ್ ಆಯಿತ್ತು ಮತ್ತು ಇದು ವಿಶ್ವಾದ್ಯಂತ ಮಾರುಕಟ್ಟೆ ಷೇರಿನಲ್ಲಿ ಐದನೇ ಸ್ಥಾನದಲ್ಲಿದೆ. ೨೦೨೧ ರಲ್ಲಿ, ಒಪ್ಪೋ ಅವರು ಪ್ರಮುಖ ಫೋನ್ ತಯಾರಕರಾದ ಒನ್‍ಪ್ಲಸ್ ಅನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ ಎಂದು ಘೋಷಿಸಿದರು. ಈ ಒಪ್ಪಂದವನ್ನು ೨೦೨೨ ರಲ್ಲಿ ವಿಸ್ತರಿಸಲಾಯಿತು. ಒನ್‍ಪ್ಲಸ್ ಒಪ್ಪೋ ನ ಅಂಗಸಂಸ್ಥೆಗಳಲ್ಲಿ ಒಂದಾಗಿದೆ. == ಬ್ರ್ಯಾಂಡಿಂಗ್ == ೨೦೧೦ ರಲ್ಲಿ ದಕ್ಷಿಣ ಕೊರಿಯಾದ ಬಾಯ್ ಬ್ಯಾಂಡ್ ಥೈಲ್ಯಾಂಡ್‌ನಲ್ಲಿ ತನ್ನ ಬ್ರ್ಯಾಂಡ್ ಅನ್ನು ಪ್ರಾರಂಭಿಸಲು ಒಪ್ಪೋ ನೊಂದಿಗೆ ಪ್ರಚಾರದ ಒಪ್ಪಂದದಲ್ಲಿ "ಫಾಲೋ ಯುವರ್ ಸೋಲ್" ಎಂದು ಕರೆಯಲ್ಪಡುವ ಹಾಡನ್ನು ಸಿದ್ಧಪಡಿಸಿತು. ಜೂನ್ ೨೦೧೫ ರಲ್ಲಿ, ಕಂಪನಿಯು ಸ್ಪ್ಯಾನಿಷ್ ಫುಟ್ಬಾಲ್ ಕ್ಲಬ್‌ನ ಪ್ರಾಯೋಜಕರಾಗಲು ಎಫ್‍ಸಿ ಬಾರ್ಸಿಲೋನಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ೨೦೧೬ ರಲ್ಲಿ, ಫಿಲಿಪೈನ್ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ​​ಈ ಕಂಪನಿಯೊಂದಿಗೆ ತನ್ನ ಅಧಿಕೃತ ಸ್ಮಾರ್ಟ್‌ಫೋನ್ ಪಾಲುದಾರನಾಗಿ ಒಪ್ಪಂದ ಮಾಡಿಕೊಂಡಿತು. ಇದು ೨೦೧೬ರಲ್ಲಿ ಪಿ.ಬಿ.ಎ ಕಮಿಷನರ್ ಕಪ್‌ನಿಂದ ಪ್ರಾರಂಭವಾಗುತ್ತದೆ. ೨೦೧೭ ರಲ್ಲಿ, ಒಪ್ಪೋ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರಾಯೋಜಿಸುವ ಬಿಡ್ ಅನ್ನು ಗೆದ್ದಿತು. ಇದು ೨೦೧೭ ರಿಂದ ೨೦೧೯ ರವರೆಗೆ ತಂಡದ ಕಿಟ್‌ಗಳಲ್ಲಿ ಅವರ ಲೋಗೋವನ್ನು ಬಳಸಲು ಅವಕಾಶ ಮಾಡಿಕೊಟ್ಟಿತು. ೨೦೧೯ ರಲ್ಲಿ, ಪ್ಯಾರಿಸ್‌ನ ರೋಲ್ಯಾಂಡ್-ಗ್ಯಾರೋಸ್‌ನಲ್ಲಿ ನಡೆದ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪ್ರಾಯೋಜಕ ಪಾಲುದಾರರಾದರು. ಅದೇ ವರ್ಷ, ಅವರು ಮೊದಲ ಅಧಿಕೃತ ಸ್ಮಾರ್ಟ್‌ಫೋನ್ ಪಾಲುದಾರರಾಗಿ ೫ ವರ್ಷಗಳ ಕಾಲ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ ಪ್ರಾಯೋಜಕ ಪಾಲುದಾರರಾದರು. == ಉತ್ಪನ್ನಗಳು == === ಸ್ಮಾರ್ಟ್ ವಾಚ್ === ಒಪ್ಪೋ ತನ್ನ ಮೊದಲ ಸ್ಮಾರ್ಟ್ ವಾಚ್ ಅನ್ನು ಮಾರ್ಚ್ ೬ ೨೦೨೦ ರಂದು ಚೀನಾದ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ನಂತರ ೨೦೨೨ ರಲ್ಲಿ ವಾಚ್ ೩ಪ್ರೊ ಮತ್ತು ೨೦೨೪ ರಲ್ಲಿ ವಾಚ್ ೪ಪ್ರೊ ಅನ್ನು ಬಿಡುಗಡೆ ಮಾಡಿತು. === ಫೋನ್‌ಗಳು === ಚೀನಾದ ಕಂಪನಿ ಒಪ್ಪೋ ಸ್ಮಾರ್ಟ್‌ಫೋನ್‌ಗಳನ್ನು ತಮ್ಮ ಎ ಸರಣಿ, ಫೈಂಡ್ ಸರಣಿ, ಎಫ್ ಸರಣಿ, ಎನ್ ಸರಣಿ ಮತ್ತು ಆರ್ ಸರಣಿಗಳಲ್ಲಿ ಫೋನ್‌ಗಳನ್ನು ಉತ್ಪಾದಿಸುತ್ತಾರೆ. ಒಪ್ಪೋ ತನ್ನ ಒಪ್ಪೋ ಡಿಜಿಟಲ್ ಬ್ರಾಂಡ್ ಅಡಿಯಲ್ಲಿ ಹೆಡ್‌ಫೋನ್‌ಗಳು ಮತ್ತು ಬ್ಲೂ-ರೇ ಪ್ಲೇಯರ್‌ಗಳನ್ನು ಸಹ ಉತ್ಪಾದಿಸುತ್ತದೆ. == ಸಂಶೋಧನೆ ಮತ್ತು ಅಭಿವೃದ್ಧಿ == === ವಿಓಓಸಿ === ೨೦೧೪ ರಲ್ಲಿ ವಿಓಓಸಿ (ವೋಲ್ಟೇಜ್ ಓಪನ್ ಲೂಪ್ ಮಲ್ಟಿ-ಸ್ಟೆಪ್ ಕಾನ್ಸ್ಟಂಟ್-ಕರೆಂಟ್ ಚಾರ್ಜಿಂಗ್) ಒಪ್ಪೋ ನಿಂದ ಅನಾವರಣಗೊಂಡೆ. ಇದು ಒಂದು ರೀತಿಯ ಚಾರ್ಜಿಂಗ್ ವಿಧಾನವಾಗಿದೆ. ಇದು ಪ್ರಾಥಮಿಕವಾಗಿ ಅದರ ಮೂಲ ಕಂಪನಿ ಬಿಬಿಕೆ ಎಲೆಕ್ಟ್ರಾನಿಕ್ಸ್‌ನ ಅಡಿಯಲ್ಲಿ ಮೊಬೈಲ್ ಉತ್ಪನ್ನಗಳ ಬ್ರ್ಯಾಂಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಫೆಬ್ರವರಿ ೨೦೨೩ ರ ಹೊತ್ತಿಗೆ, ವಿಓಓಸಿಯು ಒಪ್ಪೋನ ನಿಕಟವಾದ ಸಂಯೋಜಿತ ಬ್ರ್ಯಾಂಡ್‌ಗಳೊಂದಿಗೆ ಪ್ರತ್ಯೇಕವಾಗಿದೆ. ಕೆಲವು ಒಪ್ಪೋ ಸಾಧನಗಳು ಯುಎಸ್‍ಬಿ-ಪಿಡಿ ಚಾರ್ಜರ್‌ಗಳನ್ನು ಬೆಂಬಲಿಸುತ್ತವೆ. ೨೦೨೨ ರಿಂದ ವಿಓಓಸಿ ಕೆಲವು ಬದಲಾವಣೆಗಳು: ವಿಓಓಸಿ ೨.೦ (೨೦೧೫), ೨೦೧೪ ರಲ್ಲಿ ಪರಿಚಯಿಸಲಾದ ಮೊದಲ ಆವೃತ್ತಿ. ಇದು ೫ವಿ/೪ಎ ನಲ್ಲಿ ಕಾರ್ಯನಿರ್ವಹಿಸುತ್ತದೆ. ಸೂಪರ್ ವಿಓಓಸಿ (೨೦೧೬), ಇದು ಎರಡು-ಸೆಲ್ ಸರಣಿಯಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ. ಇದು "ಕಡಿಮೆ ವೋಲ್ಟೇಜ್ ಪಲ್ಸ್" ಚಾರ್ಜಿಂಗ್ ಅನ್ನು ಆಧರಿಸಿದೆ, ಹಾಗೂ ಕಸ್ಟಮೈಸ್ ಮಾಡಿದ ಬ್ಯಾಟರಿಯೊಂದಿಗೆ ಕಾರ್ಯನಿರ್ವಹಿಸುತ್ತದೆ. ವಿಓಓಸಿ ೩.೦ (೨೦೧೯), ವಿಓಓಸಿ ೨.೦ ಗಿಂತ ೨೩.೮% ವೇಗವಾಗಿದೆ. ವಿಓಓಸಿ ೪.೦ (೨೦೧೯ ಸೆಪ್ಟೆಂಬರ್), ಇದು ೫ವಿ/೬ಎ ನಲ್ಲಿ ಕಾರ್ಯನಿರ್ವಹಿಸುತ್ತದೆ. ಸೂಪರ್ ವಿಓಓಸಿ ೨.೦ (೨೦೨೦), ಇದರ ಪರ್ಯಾಯ ಹೆಸರು: ವಾರ್ಪ್ ಚಾರ್ಜ್ ೬೫. == ವಿವಾದಗಳು == === ಜರ್ಮನಿ === ೨೦೨೨ ರಲ್ಲಿ, ಫಿನ್ನಿಷ್ ದೂರಸಂಪರ್ಕ ಉಪಕರಣಗಳ ಪೂರೈಕೆದಾರ ನೋಕಿಯಾ ಪರವಾನಗಿ ಶುಲ್ಕವನ್ನು ಪಾವತಿಸದೆ ಒಪ್ಪೋ ತನ್ನ ತಂತ್ರಜ್ಞಾನದ ಪೇಟೆಂಟ್‌ಗಳನ್ನು ಬಳಸುತ್ತಿದೆ ಎಂದು ಆರೋಪಿಸಿ ಮೊಕದ್ದಮೆ ಹೂಡಿತು. ಆಗಸ್ಟ್‌ನಲ್ಲಿ, ಜರ್ಮನ್ ನ್ಯಾಯಾಲಯವು ಒಪ್ಪೋ ಸ್ಮಾರ್ಟ್‌ಫೋನ್‌ಗಳ ಮಾರಾಟವನ್ನು ಸ್ಥಗಿತಗೊಳಿಸಿತು. === ಭಾರತ === ಒಪ್ಪೋ ಭಾರತದಲ್ಲಿ ಸವಾಲುಗಳನ್ನು ಎದುರಿಸಿದೆ. ಇದು ೨೦೧೪ ರಲ್ಲಿ ಮಾರುಕಟ್ಟೆಗೆ ವಿಸ್ತರಿಸಿತು. ಜುಲೈ ೨೦೨೨ ರಲ್ಲಿ, ತೆರಿಗೆ ವಂಚನೆಗಾಗಿ ಒಪ್ಪೋನ ಸ್ಥಳೀಯ ಅಂಗಸಂಸ್ಥೆಯ ವಿರುದ್ಧ ಭಾರತ ಸರ್ಕಾರವು ೪೩.೮ ಶತಕೋಟಿ ರೂಪಾಯಿಗಳ ದಂಡವನ್ನು ಘೋಷಿಸಿತು. == ಸಹ ನೋಡಿ == ಒನ್‍ಪ್ಲಸ್ == ಉಲ್ಲೇಖಗಳು ==