ಒಸಾಕಾ ಜಪಾನ್‌ನ ಕಾನ್ಸಾಯಿ ಪ್ರದೇಶದಲ್ಲಿರುವ ನಗರ. ಇದು ಒಸಾಕಾ ಆಡಳಿತ ಪ್ರಾಂತ್ಯದ ರಾಜಧಾನಿ ಮತ್ತು ಕಯಿನ್ಶಿನ್ ಮೆಟ್ರೊಪಾಲಿಟನ್ ಪ್ರದೇಶದ ಅತಿ ದೊಡ್ಡ ಭಾಗವಾಗಿದೆ ಮತ್ತು ೧೯ಮಿಲಿಯನ್ ಜನರು ವಾಸಿಸುವ ಜಪಾನಿನ ಎರಡನೇ ದೊಡ್ಡ ನಗರವಾಗಿದೆ. ಯೊಡೊ ನದಿಯ ಮುಖಜಭೂಮಿಯಲ್ಲಿರುವ ಒಸಾಕ ಕೊಲ್ಲಿಯಲ್ಲಿ ಈ ನಗರವಿದೆ. == ಹೆಸರಿನ ಹಿನ್ನೆಲೆ == "ಒಸಾಕಾ" ಎಂದರೆ ಅಕ್ಷರಶಃ "ದೊಡ್ಡ ಬೆಟ್ಟ" ಅಥವಾ "ದೊಡ್ಡದಾದ ಇಳಿಜಾರು" ಎಂದರ್ಥ. == ಭೂಗೋಳ ಮತ್ತು ಹವಾಗುಣ == === ಭೂಗೋಳ === ನಗರದ ಪಶ್ಚಿಮ ಭಾಗ ಒಸಾಕಾ ಕೊಲ್ಲಿಯ ಕಡೆ ತೆರೆದಿರುತ್ತದೆ ಮತ್ತು ಒಸಾಕಾ ಆಡಳಿತ ಪ್ರಾಂತ್ಯದ ಹತ್ತಕ್ಕಿಂತ ಹೆಚ್ಚು ಉಪನಗರಗಳಿಂದ ಸಂಪೂರ್ಣವಾಗಿ ಸುತ್ತುವರೆದಿರುತ್ತದೆ. === ಹವಾಗುಣ === ಒಸಾಕಾ ಜನವರಿಯ ಚಳಿಗಾಲದಲ್ಲಿ ಸರಾಸರಿ ೯.೩ °ಸೆ ತಾಪಮಾನದಿಂದ(೪೫ °ಫೆ) ಕೂಡಿರುತ್ತದೆ. ಬೇಸಿಗೆಯಲ್ಲಿ ಸರಾಸರಿ ೩೫ °ಸೆ ತಾಪಮಾನ ತಲುಪುತ್ತದೆ. ಚಳಿಗಾಲದಲ್ಲಿ ಅಪರೂಪಕ್ಕೊಮ್ಮೆ ಮಂಜು ಬೀಳುತ್ತದೆ. ಒಸಾಕದಲ್ಲಿ ವಸಂತಕಾಲವು ಸೌಮ್ಯವಾಗಿ ಪ್ರಾರಂಭವಾದರೂ ಕೊನೆಗೊಳ್ಳುವಾಗ ಸಾಕಷ್ಟು ಸೆಕೆ ಮತ್ತು ಆರ್ದ್ರತೆಯನ್ನು ಹೊಂದಿರುತ್ತದೆ. == ==