ಕಂಬದಮರ ಮೂಲತ: ಶ್ರೀಲಂಕಾದ ನಿವಾಸಿ.ಹೆಚ್ಚಾಗಿ ಉದ್ಯಾನವನಗಳಲ್ಲಿ ಅಲಂಕಾರಕ್ಕೆ ಬೆಳೆಸುತ್ತಾರೆ. ಇದನ್ನು ಪುತ್ರಂಜೀವಿ ಹಾಗೂಅಶೋಕ ವೃಕ್ಷಕ್ಕೆ ತಪ್ಪಾಗಿ ತಿಳಿಯುತ್ತಾರೆ.ಪ್ರಪಂಚದೆಲ್ಲೆಡೆ ಅಲಂಕಾರ ಸಸ್ಯವಾಗಿ ಬೆಳೆಸುತ್ತಾರೆ. == ಸಸ್ಯಶಾಸ್ತ್ರೀಯ ವರ್ಗೀಕರಣ == ಇದು ಅನೋನಾಸಿ ()ಕುಟುಂಬಕ್ಕೆ ಸೇರಿದ್ದು,ಪಾಲಿಯಾಲ್ತಿಯ ಲಾಂಗಿಫೋಲಿಯ ( ) ಎಂದು ಸಸ್ಯಶಾಸ್ತ್ರೀಯ ಹೆಸರಿದೆ. == ಸಸ್ಯದ ಗುಣಲಕ್ಷಣಗಳು == ಸುಂದರವಾದ ನಿತ್ಯಹರಿದ್ವರ್ಣ ಮರ.ಒತ್ತಾದ ಹಂದರ.ಈಟಿ ತಲೆಯಾಕಾರದ ಎಲೆಗಳು ಅಲೆಅಲೆಯಾದ ಅಂಚನ್ನು ಹೊಂದಿದ್ದು,ಹೊಳಪಿನಿಂದ ಕೂಡಿದೆ.ನಕ್ಷತ್ರಾಕಾರದ ಸಣ್ಣ ನಸುಹಳದಿ ಹೂವುಗಳು ಫೆಬ್ರವರಿ-ಎಪ್ರಿಲ್ ತಿಂಗಳಲ್ಲಿ ಕಂಡುಬರುತ್ತದೆ.ಸಾಧಾರಣ ಮೃದುವಾದ ದಾರು ಇದೆ. == ಉಪಯೋಗಗಳು == ದಾರುವು ಪೆಟ್ಟಿಗೆ,ಪೆನ್ಸಿಲ್ ಮುಂತಾದವುಗಳ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ.ತೊಗಟೆಯಿಂದ ಒಳ್ಳೆಯ ನಾರು ದೊರಕುತ್ತದೆ.ಇದರ ಬೀಜಗಳು ಪಕ್ಷಿಗಳಿಗೆ ಬಹಳ ಇಷ್ಟವಾದ ಅಹಾರ.ಎಲೆಗಳು ಅಲಂಕಾರಕ್ಕಾಗಿ ಬಳಸಲ್ಪಡುತ್ತದೆ.ಈ ಮರದಿಂದ ಔಷಧ ತಯಾರಿಕೆ ಬಗ್ಗೆ ಸಂಶೋಧನೆ ನಡೆಯುತ್ತಿದೆ. == ಆಧಾರ ಗ್ರಂಥಗಳು == 'ವನಸಿರಿ':ಅಜ್ಜಂಪುರ ಕೃಷ್ಣಸ್ವಾಮಿ. == ಚಿತ್ರಹಾರ ==