ಕಂಬಾಗಿ ಒಂದು ಗ್ರಾಮ. ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನಲ್ಲಿದೆ. ಕಂಬಾಗಿ ಗ್ರಾಮವು ವಿಜಯಪುರ - ಗಲಗಲಿ ರಾಜ್ಯ ಹೆದ್ದಾರಿ - 55 ರಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 40 ಕಿ.ಮಿ. ದೂರವಿದ್ದು ಬಬಲೇಶ್ವರ ಹೋಬಳಿ ವ್ಯಾಪ್ತಿಯಲ್ಲಿ ಬರುತ್ತದೆ. == ಚರಿತ್ರೆ == ಪ್ರಸಿದ್ಧ ಶ್ರೀ ಹನುಮಾನ ದೇವಾಲಯವಿದೆ. == ಭೌಗೋಳಿಕ == ಗ್ರಾಮವು ಭೌಗೋಳಿಕವಾಗಿ 16°33'40.6" ಉತ್ತರ ಅಕ್ಷಾಂಶ ಮತ್ತು 75°32'13.9" ಪೂರ್ವ ರೇಖಾಂಶದಲ್ಲಿ ಬರುತ್ತದೆ. == ಜನಸಂಖ್ಯೆ == ಗ್ರಾಮದಲ್ಲಿ ಜನಸಂಖ್ಯೆ ಸುಮಾರು 3,170 ಇದೆ. ಅದರಲ್ಲಿ 1606 ಪುರುಷರು ಮತ್ತು 1564 ಮಹಿಳೆಯರು ಇದ್ದಾರೆ. == ಹವಾಮಾನ == ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 43 ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ 9 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ. ಬೇಸಿಗೆಕಾಲ - 35°-42° ಡಿಗ್ರಿ ಸೆಲ್ಸಿಯಸ್ ಚಳಿಗಾಲ ಮತ್ತು ಮಳೆಗಾಲ - 18°-28° ಡಿಗ್ರಿ ಸೆಲ್ಸಿಯಸ್. ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ. ಗಾಳಿ -ಗಾಳಿ ವೇಗ 18 ಕಿಮಿ/ಗಂ (ಜೂನ), 19 ಕಿಮಿ/ಗಂ (ಜುಲೈ)ಹಾಗೂ 17 ಕಿಮಿ/ಗಂ (ಅಗಸ್ಟ್) ಇರುತ್ತದೆ. == ಆಹಾರ (ಖಾದ್ಯ) == ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ ಹಾಗೂ ಕೆನೆಮೊಸರು ಲಭ್ಯವಿರುತ್ತದೆ. == ಸಂಸ್ಕೃತಿ == ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. == ಕಲೆ == ಲಾವಣಿ ಪದ, ಡೊಳ್ಳಿನ ಪದ, ಗೀಗೀ ಪದ, ಹಂತಿ ಪದ ಮತ್ತು ಮೊಹರಮ ಹೆಜ್ಜೆ ಕುಣಿತದ ಪದ ಮುಂತಾದವುಗಳು ಗ್ರಾಮದ ಕಲೆಯಾಗಿದೆ. ಗೀಗೀಪದಗಳ ಕಲಾವಿದೆಯಾದ ಹಣಮವ್ವ ಹಂಗರಗಿ ಹಾಗೂ ಡೋಳ್ಳಿನ ಪದಗಳ ಕಲಾವಿದರಾದ ಅಪ್ಪಣ್ಣ ತೇಲಿ ಪ್ರಮುಖರಾಗಿದ್ದಾರೆ == ಧರ್ಮಗಳು == ಗ್ರಾಮದಲ್ಲಿ ಹಿಂದೂ, ಮುಸ್ಲಿಂ ಮತ್ತು ಜೈನ ಧರ್ಮದ ಜನರಿದ್ದಾರೆ. == ಭಾಷೆಗಳು == ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ ಹಾಗೂ ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ. == ದೇವಾಲಯಗಳು == ಶ್ರೀ ಹನುಮಾನ ದೇವಾಲಯ ಶ್ರೀ ಮಹಾಲಕ್ಷ್ಮಿ ದೇವಾಲಯ ಶ್ರೀ ದುರ್ಗಾದೇವಿ ದೇವಾಲಯ ಶ್ರೀ ಮಲ್ಲಿಕಾರ್ಜುನ ದೇವಾಲಯ ಶ್ರೀ ಬಸವೇಶ್ವರ ದೇವಾಲಯ ಶ್ರೀ ವೆಂಕಟೇಶ್ವರ ದೇವಾಲಯ ಶ್ರೀ ಪಾಂಡುರಂಗ ದೇವಾಲಯ ಶ್ರೀ ಅಮೋಘಸಿದ್ದೇಶ್ವರ ದೇವಾಲಯ == ಸಂಘಟನೆಗಳು == ಡಾ|| ಅಂಬೇಡ್ಕರ ಯುವಕ ಸಂಘ ಹನುಮಾನ ಯುವಕ ಮಂಡಳಿ, ಕನಕ ಸೇನೆ ಮತ್ತು ಸುಭಾಷ್ ಚಂದ್ರಭೋಸ ಯುವ ತರುಣ ಸಂಘ ಎಂಬ ಸಂಘಟನೆಗಳಿವೆ == ಹಬ್ಬಗಳು == 1.ಪ್ರತಿವರ್ಷ ಶ್ರೀ ಹನುಮಾನ ಉತ್ಸವ (ಓಕಳಿ), 2.ಶ್ರೀ ದುರ್ಗಾದೇವಿ ಜಾತ್ರೆ, 3. ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), 4. ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, 5. ಅಮೋಘಸಿದ್ದೇಶ್ವರ ಮೂರು ವರ್ಷಗಳಿಗೆ ಒಮ್ಮೆ ನಡೆಯುವ ಕಾಂಡ ಬಹು ಪ್ರಸಿದ್ಧಿ ಉರಸು ಹಾಗೂ 6.ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ. == ಕೃಷಿ == ಗ್ರಾಮದ ಪ್ರತಿಶತ 90 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ(ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ. == ಕಾಲುವೆಗಳು == ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಮುಳವಾಡ ಏತ ನೀರಾವರಿ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ. == ಬೆಳೆಗಳು == ಆಹಾರ ಬೆಳೆಗಳು ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ ವಾಣಿಜ್ಯ ಬೆಳೆಗಳು ದ್ರಾಕ್ಷಿ, ದಾಳಿಂಬೆ, ನಿಂಬೆ, ಕಬ್ಬು, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ(ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ. ತರಕಾರಿ ಬೆಳೆಗಳು ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ. == ಉದ್ಯೋಗ == ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ. == ಆರ್ಥಿಕತೆ == ಫಲವತ್ತಾದ ಭೂಮಿ ಹಾಗೂ ನೀರಾವರಿಯಿಂದಗಿ ಗ್ರಾಮದ ಆರ್ಥಿಕತೆ ಹಾಗೂ ಹಣಕಾಸಿನ ಸ್ಥಿತಿ ಉತ್ತಮವಾಗಿದೆ. == ಸಾಕ್ಷರತೆ == ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು 67%. ಅದರಲ್ಲಿ 75% ಪುರುಷರು ಹಾಗೂ 55% ಮಹಿಳೆಯರು ಸಾಕ್ಷರತೆ ಹೊಂದಿದೆ. == ಶಿಕ್ಷಣ == ಶಿವಗಿರಿ ಪ್ರಾಥಮಿಕ ಶಾಲೆ, ಕಂಬಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಂಬಾಗಿ ಸರಕಾರಿ ಪ್ರೌಢಶಾಲೆ, ಕಂಬಾಗಿ ಶಿವಗಿರಿ ಪದವಿ ಪೂರ್ವ ಮಹಾವಿದ್ಯಾಲಯ, ಕಂಬಾಗಿ == ಕೈಗಾರಿಕೆಗಳು == ಗ್ರಾಮದ ಸಮೀಪದಲ್ಲಿ ಶ್ರೀ ಸೋಮೇಶ್ವರ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಿದೆ. == ಬ್ಯಾಂಕ್ == ಬ್ಯಾಂಕ್ ಆಫ್ ಇಂಡಿಯಾ, ಕಂಬಾಗಿ ಶ್ರೀ ಕಂಬಾಗೇಶ್ವರ ಸೌಹಾರ್ದ ಸಹಕಾರಿ ನಿಯಮಿತ, ಕಂಬಾಗಿ ಸಿದ್ಧಸಿರಿ ಸೌಹಾರ್ದ ನಿಯಮಿತ ಕಂಬಾಗಿ == ಸಾರಿಗೆ == ಗ್ರಾಮವು ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 40 ಕಿ.ಮೀ. ದೂರವಿದೆ. ಬಬಲೇಶ್ವರ - ಗಲಗಲಿ ಮಾರ್ಗದಲ್ಲಿ ಬರುತ್ತದೆ. == ರಾಜಕೀಯ == ಗ್ರಾಮವು ಬಬಲೇಶ್ವರ ವಿಧಾನ ಸಭಾ ಕ್ಷೇತ್ರ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. == ಉಲ್ಲೇಖಗಳು ==