ಕಚೋರಿ ಅಥವಾ ಕಚೋಡಿ ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಗುಜರಾತ್, ಬಂಗಾಳ, ತೆಲಂಗಾಣ ಮತ್ತು ಒರಿಸ್ಸಾವನ್ನು ಒಳಗೊಂಡಂತೆ ಭಾರತದ ವಿವಿಧ ಭಾಗಗಳಲ್ಲಿ ಜನಪ್ರಿಯವಿರುವ ಒಂದು ಮಸಾಲೆಭರಿತ ಲಘು ಆಹಾರ. ಕಚೋರಿ ಉತ್ತರ ಪ್ರದೇಶ ಅಥವಾ ರಾಜಸ್ಥಾನದಲ್ಲಿ ಹುಟ್ಟಿಕೊಂಡಿತು ಎಂದು ಊಹಿಸಲಾಗಿದೆ. ಈ ರಾಜ್ಯಗಳಲ್ಲಿ ಕಚೋರಿ ಸಾಮಾನ್ಯವಾಗಿ ನಯವಾದ ಹಿಟ್ಟಿನಿಂದ ಮಾಡಲಾದ ಒಂದು ದುಂಡನೆಯ ಚಪ್ಪಟೆ ಚೆಂಡು ಜೊತೆಗೆ ಒಳಗೆ ಬೇಕ್ ಮಾಡಲಾದ ಹೆಸರು ಬೇಳೆ ಅಥವಾ ಉದ್ದಿನ ಬೇಳೆ, ಕಡಲೆ ಹಿಟ್ಟು, ಮೆಣಸು, ಖಾರದ ಪುಡಿ, ಉಪ್ಪು ಮತ್ತು ಇತರ ಸಂಬಾರ ಪದಾರ್ಥಗಳ ಮಿಶ್ರಣದ ಹೂರಣ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==