ಭಾರತದ ಅನೇಕ ರಾಜ್ಯಗಳಲ್ಲಿ ಗಣೇಶ ಚತುರ್ಥಿ ಹಬ್ಬದ ದಿನದಂದು ಮಾಡುವ ಸಿಹಿ ತಿಂಡಿ. === ಬೇಕಾಗುವ ಪದಾರ್ಥಗಳು === ಮೈದಾ ಹಿಟ್ಟು ೧/೨ ಕಿಲೋ ಕಡಲೆ ಬೇಳೆ ೧/೨ ಕಿಲೋ ಬೆಲ್ಲ ಎಣ್ಣೆ (ಕರಿಯಲು ಉಪಯೋಗಿಸಬಹುದಾದ ಖಾದ್ಯತೈಲ) ಏಲಕ್ಕಿ === ಮಾಡುವ ವಿಧಾನ === ಮಾಡುವ ವಿಧಾನ : ಮೈದಾ ಹಿಟ್ಟನ್ನು ಚಪಾತಿ ಹಿಟ್ಟಿನಂತೆ ತಯಾರಿಸಿಕೊಳ್ಳಬೇಕು. ಇನ್ನೊಂದೆಡೆ ಕಡಲೆ ಬೇಳೆಯನ್ನು ಒಂದು ಪಾತ್ರೆಯಲ್ಲಿ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಂಡು, ನೀರನ್ನು ಬಸಿಯಬೇಕು. ಅನಂತರ ಅದಕ್ಕೆ ಬೆಲ್ಲವನ್ನು ಹಾಕಿ ೫ ನಿಮಿಷಗಳವರೆಗೂ ಒಲೆಯ ಮೇಲಿಟ್ಟು ಬೆರೆಸಿಕೊಳ್ಳಬೇಕು. ಬೇಳೆ- ಬೆಲ್ಲದ ಈ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ಹೂರಣ ಮಾಡಿಕೊಳ್ಳಬೇಕು. ನಾದಿಟ್ಟ ಮೈದಾ ಹಿಟ್ಟನ್ನು ತೆಗೆದುಕೊಂಡು, ಚಿಕ್ಕ ಚಿಕ್ಕ ಹಪ್ಪಳದ ಗಾತ್ರದಲ್ಲಿ ಲಟ್ಟಿಸಿ ಅದರೊಳಗೆ ಈ ಹೂರಣವನ್ನು ತುಂಬಿ ಮುಚ್ಚಬೇಕು. ನಂತರ ಕಾಯ್ದ ಎಣ್ಣೆಯಲ್ಲಿ ಒಂದೊಂದೇ ಕರಿದು, ಅವು ಕೆಂಪು ಬಣ್ಣಕ್ಕೆ ತಿರುಗಿದ ನಂತರ ಕೆಳಗಿಳಿಸಬೇಕು. === ಕೊಬ್ಬರಿ ಕಡುಬು (ಕರ್ಜಿಕಾಯಿ) === ಇದನ್ನು ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ. ಇದನ್ನು ಕೂಡ ಮೇಲೆ ಹೇಳಿದ ರೀತಿಯಲ್ಲೇ ಮಾಡಬೇಕು. ಆದರೆ ಇದರಲ್ಲಿ ಬೇಳೆ ಹೂರಣದ ಬದಲು, ತುರಿದ ಕೊಬ್ಬರಿಯನ್ನು, ಸಕ್ಕರೆ ಮತ್ತು ಏಲಕ್ಕಿಯನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ, ಕಡುಬಿನ ಒಳಗೆ ತುಂಬಿಲಾಗಿರುತ್ತದೆ. == ಇವನ್ನೂ ನೋಡಿ == ಒಬ್ಬಟ್ಟು ಕಾಯಿ ಒಬ್ಬಟ್ಟು ಕೇಸರಿಬಾತ್ ಜಾಮೂನ್ ಪೇಣಿ ಶಾವಿಗೆ ಪಾಯಸ