ಕದಿರರೆಮ್ಮವ್ವೆ ನೂಲುವ ಕಾಯಕದವಳು. ತನ್ನ ಕಾಯಕದೊಂದಿಗೆ ಆಧ್ಯಾತ್ಮವನ್ನು ಸಮನ್ವಯಗೊಳಿಸಿ ಪ್ರೌಢವೆನಿಸುವ 'ಬೆಡಗಿನ ವಚನ'ಗಳನ್ನೂ ರಚಿಸಿದ್ಧಾಳೆ. ಈಕೆಯ ವಚನಗಳ ಅಂಕಿತ "ಕದಿರೆಮ್ಮಿಯೊಡೆಯ ಗುಮ್ಮೇಶ್ವರ". ಹರಿಹರ ತನ್ನ ಲಿಂಗಾರ್ಚನೆಯ ರಗಳೆಯಲ್ಲಿ ರೆಮ್ಮವ್ವೆಯ ಹೆಸರನ್ನು ಸ್ಮರಿಸಿದ್ದಾನೆ. == ವಚನಗಳ ವೈಶಿಷ್ಟ್ಯ == ತನಗೆ ಜೀವನ ರೂಪಿಸಿ ಕೊಳ್ಳಲು, ಸ್ವತಂತ್ರವಾಗಿ ಬದುಕಲು ಅವಕಾಶ ಕಲ್ಪಿಸಿಕೊಟ್ಟ ಶರಣರನ್ನು ಕೃತಜ್ಞತೆಯಿಂದ ಸ್ಮರಿಸಿರುವಳು. ನೂಲುವ ಕಾಯಕದಿಂದ ಬಂದ ಹಣದಲ್ಲಿ ಗುರು, ಲಿಂಗ, ಜಂಗಮ ಸೇವೆ, ದಾಸೋಹ ಮಾಡುವುದು, ಶರಣರ ಅನುಭಾವಗೋಷ್ಠಿಗಳಲ್ಲಿ ಭಾಗವಹಿಸುವುದು ಈಕೆಯ ನಿತ್ಯ ನೇಮವಾಗಿತ್ತು. ಶಿವ ಅವಳ ಅಲೌಕಿಕ ಆಧ್ಯಾತ್ಮಿಕ ಪತಿ. ಈತ ಮನ ಎಂಬ ಸೈನ್ಯದ ಚಟುವಟಿಕೆಗಳನ್ನು ನಿಯಂತ್ರಿಸುವವನು ಎನ್ನುತ್ತಾಳೆ. ಸೃಷ್ಠಿ, ಸ್ಥಿತಿ ,ಲಯಕಾರರಾದ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳನ್ನು ತನ್ನ ಕದಿರ ಕಾಯಕದ ದೃಷ್ಟಾಂತಗಳೊಂದಿಗೆ ಅಂತರ್ಗತಗೊಳಿಸಿರುವಳು. ಈಕೆಯ ನಾಲ್ಕು ವಚನಗಳು ದೊರಕಿವೆ.