ಕನಕಾಂಗಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಪ್ರಥಮ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಕನಕಾಂಬರಿ ಎಂದು ಹೆಸರಿಸಿದ್ದಾರೆ. == ರಾಗ ಸ್ವರೂಪ ಮತ್ತು ಲಕ್ಷಣ == ಇದು ಪ್ರಥಮ ಇಂದು ಚಕ್ರದ ಪ್ರಥಮ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ. ಆರೋಹಣ ಸ ರಿ೧ ಗ೧ ಮ೦ ಪ ದ೧ ನಿ೧ ಸ ಅವರೋಹಣ ಸ ನಿ೧ ದ೧ ಪ ಮ೧ ಗ೧ ರಿ೧ ಸ ಇದು ಒಂದು ಸಂಪೂರ್ಣ ರಾಗವಾಗಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು, ಕರ್ನಾಟಕ ಶುದ್ಧ ಸಾವೇರಿ ಮತ್ತು ಇತ್ತೀಚೆಗೆ ಬಾಲಮುರಳಿ ಕೃಷ್ಣರವರು ರಚಿಸಿದ ಲವಾಂಗಿ ಹೆಚ್ಚು ಜನಪ್ರಿಯವಾಗಿದೆ. 1 ಕನಕಾಂಬರಿ .ಸ ರಿ1 ಮ1 ಪ ದ1 ಸ ಸ ನಿ1 ದ1 ಪ ಮ1 ಗ1 ರಿ1 ಸ 2 ಕನಕತೋಡಿ. ಸ ರಿ ಗಮ೧ಪ ದ೧ ಸ ಸ ನಿ೧ ದ೧ ಪ ಮ೧ ರಿ೧ ಸ 3 ಕರ್ನಾಟಕ ಶುದ್ಧ ಸಾವೇರಿ ಸ ರಿ೧ ಮ೧ ಪ ದ೧ ಸ ಸ ದ೧ ಪ ಮ೧ ರಿ೧ ಸ 4 ಲತಾಂತಪ್ರಿಯ. ಸ ರಿ೧ ಗ೧ ಮ೧ ಪ ದ೧ ಸ ಸ ದ೧ ಪ ಮ೧ ರಿ೧ ಸ 5 ಲವಂಗಿ. ಸ ರಿ೧ ಮ೧ ದ೧ ಸ ಸ ದ೧ ಮ೧ ರಿ೧ ಸ 6 ಮೇಘ. ಸ ರಿ೧ ಮ೧ ಪ ದ೧ ನಿ೧ ದ೧ ಪ ಸ ಸ ನಿ೧ ದ೧ ಪ ಮ೧ ರಿ೧ ಸ 7 ರಿಶಭವಿಲಾಸ. ಸ ರಿ೧ ಮ೧ ಪ ದ೧ ಸ ಸ ದ೧ ಪ ಮ೧ ರಿ೧ ಮ೧ ರಿ೧ ಸ 8 ಸರ್ವಶ್ರೀ. ಸ ಮ೧ ಪ ಸ ಸ ಪ ಮ೧ ಸ 9 ಶುದ್ಧ ಮುಖಾರಿ. ಸ ರಿ೧ ಮ೧ ಪ ದ೧ ಸ ಸ ನಿ೧ ದ೧ ಪ ಮ೧ ಗ೧ ರಿ೧ ಸ 10 ತಟಿಲ್ಲಟಿಕ. ಸ ರಿ೧ ಮ೧ ಪ ದ೧ ಸ ಸ ದ೧ ಪ ಮ೧ ರಿ೧ ಸ 11 ವಾಗೀಶ್ವರಿ. ಸ ರಿ೧ ಗ೧ ಮ೧ ಪ ದ೧ ಸ ಸ ದ೧ ಮ೧ ಪ ಗ೧ ರಿ೧ ಸ == ಜನಪ್ರಿಯ ರಚನೆಗಳು == ತ್ಯಾಗರಾಜರು ರಚಿಸಿದ ಶ್ರೀ ಗಣಾನಾಥಮ್ ಭಜಾಮ್ಯಹಂ, ಮುತ್ತುಸ್ವಾಮಿ ದೀಕ್ಷಿತರುರಚಿಸಿದ ಕನಕಾಂಬರಿ ಕಾರುಣ್ಯಾಮೃತ ಲಹರಿ ಎರಡು ವ್ಯಾಪಕವಾಗಿ ಬಳಕೆಯಲ್ಲಿರುವ ರಚನೆಗಳು. == ಉಲ್ಲೇಖಗಳು ==