ಕನ್ನಡದ ಪ್ರಥಮ ಮಹಿಳಾ ಶಿಲ್ಪಿ ಎಂದೇ ಖ್ಯಾತರಾಗಿದ್ದ ಜಕಣಾಚಾರಿ ಪ್ರಶಸ್ತಿಗೆ ಭಾಜನರಾಗಿದ್ದ ಕನಕಾಮೂರ್ತಿ (೧೯೪೨-೨೦೨೧) ಕೈಯಲ್ಲಿ ಅರಳಿದ್ದ ೨೦೦ಕ್ಕೂ ಹೆಚ್ಚು ಶಿಲ್ಪ ಕಲಾಕೃತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿತಗೊಂಡಿವೆ. == ವೈಯಕ್ತಿಕ ಜೀವನ == ೧೯೪೨ರ ಡಿಸೆಂಬರ ೨ರಂದು, ಜಮೀನ್ದಾರ್ ಮುತ್ತತ್ತಿ ಸುಬ್ಬರಾಯ ಮತ್ತು ಸುಂದರಮ್ಮ ದಂಪತಿಗಳಿಗೆ, ಟಿ. ನರಸೀಪುರದಲ್ಲಿ (ಮೈಸೂರು) ಜನಿಸಿದರು. ತಾಯಿ ಸುಂದರಮ್ಮ ಗಮಕ ಕಲಾವಿದರಾಗಿದ್ದರು. ೧೯೬೯ರಲ್ಲಿ ನಾರಾಯಣ ಮೂರ್ತಿಯವರನ್ನು ಮದುವೆಯಾದರು. ಇವರ ಮಗ ರೂಮಿ ಹರೀಶ್ (ಲಿಂಗ ಪರಿವರ್ತನೆಗೆ ಮುಂಚಿನ ಹೆಸರು: ಸುಮತಿ ಮೂರ್ತಿ) == ಕಲಾಶಿಕ್ಷಣ ಮತ್ತು ಸೇವೆ == ಬಾಲ್ಯದಲ್ಲಿಯೇ ರಂಗೋಲಿ ಕಲೆಯಲ್ಲಿ ಆಸಕ್ತಿ ಹೊಂದಿದ್ದರು. ಬಿ. ಎಸ್ಸಿ. ಪದವಿ ನಂತರ, ತಮ್ಮ ಸಹೋದರನೊಂದಿಗೆ ಚಿತ್ರಕಲೆ ಕಲೆಯುವ ಉದ್ದೇಶದಿಂದ ಭೇಟಿಕೊಟ್ಟಿದ್ದ ಬೆಂಗಳೂರಿನ ಕಲಾಮಂದಿರ ಕಲಾ ಶಾಲೆಯಲ್ಲಿ ೧೯೬೨ರಲ್ಲಿ, ಮೃತ್ತಿಕಾ (ಮಣ್ಣಿನ) ಪ್ರತಿಮಾಗಾರಿಕೆಯಲ್ಲಿ ಡಿಪ್ಲೊಮಾ ಗಳಿಸಿದರು. ಅಲ್ಲಿಯೇ ಕರ್ನಾಟಕದ ಹಲವಾರು ಶಿಲ್ಪಕಲಾ ಶೈಲಿಗಳನ್ನು ಅಭ್ಯಸಿಸಿದರು. ಗುರುಗಳಾದ ಡಿ. ವಾದಿರಾಜರು (ಸಾಂಪ್ರದಾಯಿಕ ಭಾರತೀಯ ಶಿಲ್ಪಶಾಸ್ತ್ರ) ಮತ್ತು ಎ. ಎನ್. ಸುಬ್ಬರಾಯರು (ರೇಖಾಚಿತ್ರ), ಕನಕಾಮೂರ್ತಿಯವರ ಆಸಕ್ತಿಗೆ ನೀರೆರೆದರು. ಹಲವಾರು ಶಿಲ್ಪ ಕಲಾಶಿಬಿರಗಳಲ್ಲಿ ನಿರ್ದೇಶಕಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಕಲಿತ ಕಲಾಮಂದಿರದಲ್ಲಿ ಶಿಕ್ಷಕಿಯಾಗಿ, ಕ್ರಾಫ್ಟ್ ಕೌನ್ಸಿಲ್ ಆಫ್ ಕರ್ನಾಟಕದ ಜಂಟಿ ಕಾರ್ಯದರ್ಶಿಯಾಗಿ, ಕರ್ನಾಟಕ ಶಿಲ್ಪಕಲಾ ಆಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. == ಶಿಲ್ಪ ಕಲಾಕೃತಿಗಳು == ಲೋಹಶಿಲ್ಪ, ಕಾಷ್ಠಶಿಲ್ಪ ಮತ್ತು ಶಿಲಾಶಿಲ್ಪಗಳಲ್ಲಿ ಪರಿಣಿತಿ ಹೊಂದಿ, ಬಹುಬೇಡಿಕೆಯ ಶಿಲ್ಪಿಯಾಗಿದ್ದ ಇವರ ೨೦೦ಕ್ಕೂ ಹೆಚ್ಚು ಕೆತ್ತನೆಯ ಕಲಾಕೃತಿಗಳು ನಾಡಿನಾದ್ಯಂತ ಪ್ರತಿಷ್ಠಾಪನೆಗೊಂಡಿವೆ. ಕಲ್ಲಿನ ಗಣಪ - ೯ ಅಡಿ, ಸಾಯಿಬಾಬ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು ವಿಷ್ಣುವಿನ ಪ್ರತಿಮೆ - ೪ ಅಡಿ ೬ ಇಂಚು - ಹೊಯ್ಸಳ ಶೈಲಿ, ಸಾಯಿಬಾಬ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು ರೈಟ್ ಸೋದರರ ಪ್ರತಿಮೆ - ಫ಼ೈಬರ್ ಗ್ಲಾಸ್‌ ಶಿಲ್ಪ - ೨೦೦೩, ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯ ಗಣೇಶ ಮತ್ತು ಸರಸ್ವತಿಯರ ವಿಗ್ರಹ, ಭಾರತೀಯ ವಿದ್ಯಾಭವನ ಸಪ್ತಋಷಿಗಳ ಶಿಲಾಶಿಲ್ಪ - ಕುಳಿತ ಭಂಗಿಯಲ್ಲಿ, ಚಿಕ್ಕ ಗುಬ್ಬಿಯ ತಪೋವನ ಆಶ್ರಮ ವಿಶ್ವಾಮಿತ್ರರ ಮಹರ್ಷಿ - ೭ ಅಡಿ ಶಿಲಾಶಿಲ್ಪ, ಚಿಕ್ಕ ಗುಬ್ಬಿಯ ತಪೋವನ ಆಶ್ರಮ ಹನುಮಂತ - ೧೦ ಅಡಿ ಶಿಲಾಶಿಲ್ಪ , ಚಿಕ್ಕ ಗುಬ್ಬಿಯ ತಪೋವನ ಆಶ್ರಮ ಗಣೇಶಮೂರ್ತಿ, ಮಲ್ಲೇಶ್ವರ ಸಮುದ್ರ ಮಂಥನದ ಶಿಲಾಶಿಲ್ಪ - ೬ ಅಡಿ ಎತ್ತರ ಪುರಂದರದಾಸರ ವಿಗ್ರಹ, ಇಂದಿರಾನಗರ ಸಂಗೀತ ಸಭಾ ಕುವೆಂಪು ಪ್ರತಿಮೆ, ಲಾಲ್‌ಬಾಗ್ ಪಶ್ಚಿಮ ದ್ವಾರ ಸರ್ ಎಂ. ವಿಶ್ವೇಶ್ವರಯ್ಯ ವೀಣೆ ದೊರೆಸ್ವಾಮಿ ಅಯ್ಯಂಗಾರ್ ಗಂಗೂಬಾಯಿ ಹಾನ್‌ಗಲ್ ಕೆ. ಎಂ. ಮುಂಷಿ ಶಿವರಾಮ ಕಾರಂತರ ಎದೆ ವಿಗ್ರಹ, ಉಡುಪಿಯ ಸಾಲಿಗ್ರಾಮದ ವಸ್ತುಸಂಗ್ರಹಾಲಯ ಮತ್ತೂರು ಕೃಷ್ಣಮೂರ್ತಿ ಭೀಮಸೇನ ಜೋಷಿ ಮಲ್ಲಿಕಾರ್ಜುನ ಮನ್ಸೂರ್ ಪಿ. ಎಂ. ಎ. ಪೈರವರ ಫ಼ೈಬರ್ ಗ್ಲಾಸ್‌ ಶಿಲ್ಪ, ಮಣಿಪಾಲ್ ವಿಶ್ವವಿದ್ಯಾಲಯ ಡಿ. ಎ. ಪಾಂಡುರವರ ಕಂಚಿನ ಎದೆ ವಿಗ್ರಹ, ಆರ್. ವಿ. ದಂತ ವಿದ್ಯಾಲಯ ಪ್ರೊ. ಎಂ. ಪಿ. ಎಲ್. ಶಾಸ್ತ್ರಿ (ಎಂ. ಇ. ಎಸ್. ಕಾಲೇಜಿನ ಸಂಸ್ಥಾಪಕರು)ರವರ ಫ಼ೈಬರ್ ಗ್ಲಾಸ್‌ ಶಿಲ್ಪ ಶರಣಬಸಪ್ಪ ಅಪ್ಪರವರ ಎದೆ ವಿಗ್ರಹ, ಗುಲ್ಬರ್ಗ ಕೆ. ಕೆ. ಹೆಬ್ಬಾರ್ - ಲೋಹ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ - ಲೋಹ ಪಂ. ರಾಮರಾವ್ ನಾಯಕ್ - ಫ಼ೈಬರ್ ಗ್ಲಾಸ್‌ ಬೆಳೆಗರೆ ಚಂದ್ರಶೇಖರ ಶಾಸ್ತ್ರಿಗಳು - ಫ಼ೈಬರ್ ಗ್ಲಾಸ್‌ ವಾಗ್ದೇವಿ, ದೆಹಲಿ ಮ್ಯೂಸಿಯಮ್ == ಪ್ರಶಸ್ತಿಗಳು == ೧೯೭೦ - ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿಯ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಬಹುಮಾನ ೧೯೮೮ - ನಾಗಪುರದಲ್ಲಿ ಜರುಗಿದ ಶಿಲ್ಪಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿ ೧೯೯೬ - ಕನ್ನಡ ರಾಜ್ಯೊತ್ಸವ ಪ್ರಶಸ್ತಿ (ಕರ್ನಾಟಕ ಸರ್ಕಾರ) ೧೯೯೯ - ಕರ್ನಾಟಕ ಶಿಲ್ಪಕಲಾ ಅಕಾಡೆಮಿ ೨೦೧೦ - ಜಕಣಾಚಾರಿ ಪ್ರಶಸ್ತಿ (ಕರ್ನಾಟಕ ಸರ್ಕಾರ) ೨೦೧೬ - ಶ್ರೀ ವನಮಾಲಿ ಸೇವಾ ಪ್ರಶಸ್ತಿ == ಬರವಣಿಗೆ == === ಲೇಖನಗಳು === ಶಿಲ್ಪಕಲೆ ಕುರಿತು ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ ಡೆಕ್ಕನ್ ಹೆರಾಲ್ಡ್ ಇಂಡಿಯನ್ ಎಕ್ಸ್‌ಪ್ರೆಸ್ ತರಂಗ ವಿಜಯವಾಣಿ ಪ್ರಜಾವಾಣಿ ಉದಯವಾಣಿ === ಪುಸ್ತಕಗಳು === "ಉತ್ತುಂಗ ಶಿಖರ ಶಿಲ್ಪಿ" - ಡಿ. ವಾದಿರಾಜ್‍ರವರನ್ನು ಕುರಿತ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಕಟಿಸಿರುವ "ನಮ್ಮದನಿ" - ೨೦೦೮ - ಕರ್ನಾಟಕ ಶಿಲ್ಪಕಲಾ ಅಕಾಡೆಮಿ - ಸಾಂಪ್ರದಾಯಿಕ ಶಿಲ್ಪಿಗಳನ್ನು ಕುರಿತು "ಹೌದೇ? ಇದು ನಾನೇ!" - ೨೦೧೪ - ಭಾರತೀಯ ವಿದ್ಯಾಭವನ ಪ್ರಕಟಿಸಿದ ಆತ್ಮಚರಿತ್ರೆ == ನಿಧನ == ಮೇ ೧೩, ೨೦೨೧ ರಂದು ತಮ್ಮ ೭೯ನೇ ವಯಸ್ಸಿನಲ್ಲಿ ಬೆಂಗಳೂರಿನ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾದರು. == ಉಲ್ಲೇಖ ==