ಭಾರತದ ಗ್ರಾಮೀಣ ಕ್ರೀಡೆ ಆಗಿರುವ ಕಬಡ್ಡಿ ಸುಮಾರು ೪೦೦೦ ವರ್ಷಗಳಷ್ಟು ಪುರಾತನವಾದದ್ದು. ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಲಿಕೆಯ ಜೊತೆಗೆ ಹೆಸರನ್ನೂ ತಂದು ಕೊಟ್ಟಿದೆ. ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಅಂದರೆ ಗ್ರಾಮೀಣ ಜನರಿಗೆ ಬಹಳ ಇಷ್ಟ. ಕಬಡ್ಡಿ ಹಲವಾರು ಹೆಸರುಗಳಿಂದ ಪ್ರಚಲಿತವಾಗಿದೆ. ಅವುಗಳಲ್ಲಿ ಕೆಲವು - ಕಬಡ್ಡಿ, ಹುತುತು, ಸಡುಗುಡು, ಗುಡುಗುಡು, ಪಲಿನ್ಜಡುಗಿದು ಹಾಗೂ ಸಡುಗೂಡತ್ತಿ. ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಆಡುತ್ತಾರೆ. == ಕಬಡ್ಡಿ ಸಂಸ್ಥೆಗಳು == 1.ಇಂಟರ್ ನ್ಯಾಶನಲ್ ಕಬಡ್ಡಿ ಫೆಡರೇಶನ್ (ಐಕೆಫ್) 2.ಕರ್ನಾಟಕ ರಾಜ್ಯ ಕಬಡ್ಡಿ ಸಂಸ್ಥೆ 3.ಕಬಡ್ಡಿ ಅಸೋಸಿಯೇಶನ್ ಕಪ್ == 17ನೇ ಏಷ್ಯನ್‌ ಕ್ರೀಡಾಕೂಟ 2014-ಕಬಡ್ಡಿ == 17ನೇ ಏಷ್ಯನ್‌ ಕ್ರೀಡಾಕೂಟ 2014 ರಲ್ಲಿ ಕರ್ನಾಟಕ ಮಹಿಳಾ ಕಬಡ್ಡಿ ತಂಡಕ್ಕೆ ಕನ್ನಡತಿ ತೇಜಸ್ವಿನಿ ಬಾಯಿ ನಾಯಕಿ. ರೈಲ್ವೆಯಲ್ಲಿ ಉದ್ಯೋಗಿ­ಯಾಗಿರುವ ಕರ್ನಾಟಕದ ಮಮತಾ ಪೂಜಾರಿ, ಕೆಎಸ್‌ಪಿಯಲ್ಲಿರುವ ಸುಷ್ಮಿತಾ ಪವಾರ್ ಮತ್ತು ಜಯಂತಿ ಅವರು ತಂಡದಲ್ಲಿದ್ದರು.17ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಎರಡು ಸ್ವರ್ಣ ಪದಕಗಳು ಲಭ್ಯವಾಗಿದ್ದು, ಪುರುಷರ ಮತ್ತು ಮಹಿಳೆಯರ ಕಬಡ್ಡಿ ತಂಡಗಳು ಇರಾನ್ ತಂಡಗಳನ್ನು ಸೋಲಿಸಿ ಎರಡೂ ಸ್ವರ್ಣ ಪದಕವನ್ನು ಮುಡಿಗೇರಿಸಿಕೊಂಡಿವೆ. (ಟಿ.ಒ.ಐ./ವಿಜಯ ಕರ್ನಾಕ/ ಪ್ರಜಾವಾಣಿ- ಸುದ್ದಿ ೩-೧೦-೨೦೧೪) ಭಾರತದ ಕಬಡ್ಡಿ ತಂಡ ಪುರುಷರು, ಥಾಕೂರ್ ರಾಕೇಶ್ ಕುಮಾರ್, ಗುರುಪೀತ್ ಸಿಂಗ್, ನವನೀತ್ ಗೌತಮ್, ಸುರ್ಜೀತ್ ಕುಮಾರ್, ಪರ್ವೀನ್ ಕುಮಾರ್, ನಿತಿನ್ ಮದಾನೆ, ಸುರ್ಜೀತ್ ಸಿಂಣ್, ಅನೂಪ್ , ಗುರುಪೀತ್, ರಾಜಗುರು, ಸುಬ್ರಮಣಿಯನ್. ಮಹಿಳೆಯರು ಕವಿತಾ , ಕವಿತಾದೇವಿ, ತೇಜಸ್ವಿನಿ ಬಾಯಿ, ಅಭಿಲಾಷಾ ಮ್ಹಾತ್ರೆ, ಪೂಜಾ ಥಾಕೂರ್, ಪ್ರಿಯಾಂಕಾ, ಅನಿತಾ ಮಾವಿ ಲಕ್ಷ್ಮಣ ಸಿಂಗ್, ಜಯಂತಿ , ಸುಮಿತ್ರಾ ಶರ್ಮಾ, ಮಮತಾ ಪೂಜಾರಿ, ಸುಶ್ಮಿತಾ ಪವಾರ್, ಕಿಶೋರಿ ದಿಲೀಪ್ ಸಿಂಧೆ. [೧] ಪುರುಷ ಮತ್ತು ಮಹಿಳಾ ತಂಡಗಳು. == ಏಷಿಯನ್ ಕ್ರೀಡಾಕೂಟಗಳು == ( : [೪]) ಪುರುಷ ವಿಭಾಗ: === ಮಹಿಳಾ ವಿಭಾಗ: === ಮಹಿಳಾ ತಂಡಗಳು -ಏಷಿಯಾದ ಕ್ರೀಡಾಕೂಟ (ಇಂಗ್ಲಿಷ್ ತಾಣದಿಂದ : : /ಕಬಡ್ಡಿ ಅಟ್ ಏಷಿಯನ್ ಗೇಮ್ಸ್.) == ಭಾರತದ ಕಬಡ್ಡಿ ತಂಡ == ಏಷ್ಯನ್ ಗೇಮ್ಸ್‌ನಲ್ಲಿ ಸತತ ಎರಡನೇ ಬಾರಿಗೆ ಬಂಗಾರ ಗೆದ್ದಿರುವ ಭಾರತ ಮಹಿಳಾ ತಂಡ ಕೂಡ ವಿಶ್ವ ಕಪ್ ಕಬಡ್ಡಿಯಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡು ಪ್ರಭುತ್ವ ಮೆರೆದಿದೆ. 2012ರಲ್ಲಿ ಪಂಜಾಬ್‌ನಲ್ಲಿ ನಡೆದ ಮೊದಲ ವಿಶ್ವಕಪ್‌ನಲ್ಲಿ ಇರಾನ್ ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡ ಕರ್ನಾಟಕದ ಮಮತಾ ಪೂಜಾರಿ ಸಾರಥ್ಯದ ಭಾರತ ತಂಡ 2013ರಲ್ಲಿ ನಡೆದ ಟೂರ್ನಿ ಯಲ್ಲೂ ನ್ಯೂಜಿಲೆಂಡ್ ತಂಡವನ್ನು ಸದೆಬಡಿದು ದ್ವಿತೀಯ ಬಾರಿಗೆ ಪ್ರಶಸ್ತಿ ತಮ್ಮದಾಗಿಸಿಕೊಂಡಿದೆ. == ಕಬಡ್ಡಿ ಪದಕದ ಪಟ್ಟಿ == ಕಬಡ್ಡಿ ಪದಕದ ಪಟ್ಟಿ-2014 ನವೆಂಬರ್ == ವಿಶ್ವಕಪ್ ಟೂರ್ನಿಯ ಹಿನ್ನೆಲೆ == 2004ರಲ್ಲಿ ಆರಂಭವಾದ ವಿಶ್ವಕಪ್ ಕಬಡ್ಡಿ ಟೂರ್ನಿ 2005 ಮತ್ತು 2006ರನ್ನು ಹೊರತುಪಡಿಸಿ ಈವರೆಗೂ ಆರು ಬಾರಿ ನಡೆದಿದೆ. ವಾರ್ಷಿಕ ಟೂರ್ನಿ ಇದಾಗಿದ್ದು, ಭಾರತ ಸತತ ಆರು ಬಾರಿಯು ಚಾಂಪಿ ಯನ್ ಪಟ್ಟ ಅಲಂಕರಿಸಿದೆ.ಅದರಲ್ಲೂ 2010, 2012,2013ರಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಭಾರತ ಹೊರತುಪಡಿಸಿದರೆ, ಪಾಕಿಸ್ತಾನ ಮತ್ತು ಇರಾನ್ ಕ್ರಮುವಾಗಿ ಮೂರು ಹಾಗೂ ಎರಡು ಬಾರಿ ರನ್ನರ್‌ಅಪ್ ಸ್ಥಾನಗಳಿಸಿದ್ದು, ಭಾರತಕ್ಕೆ ಸವಾಲೊಡ್ಡಬಲ್ಲ ತಂಡಗಳಾಗಿವೆ. 2012ರಲ್ಲಿ ಆರಂಭವಾದ ಮಹಿಳಾ ಟೂರ್ನಿ 2013ರಲ್ಲಿ ಎರಡನೇ ಬಾರಿಗೆ ನಡೆದಿದ್ದು, ಭಾರತವೇ ಇಲ್ಲಿಯೂ ಪ್ರಭುತ್ವ ಸಾಧಿಸಿದೆ. : ವಿಶ್ವಕಪ್ ಕಬಡ್ಡಿ ಟೂರ್ನಿಯ ಫಲಿತಾಂಸಗಳು === ಹೆಣ್ಣು ಮಕ್ಕಳ ವಿಶ್ವ ಕಬಡ್ಡಿ === ಹೆಣ್ಣು ಮಕ್ಕಳ ವಿಶ್ವ ಕಬಡ್ಡಿ ಮೊದಲ ಬಾರಿ ೨೦೧೨/2012 ರಲ್ಲಿ ಪಂಜಾಬಿನಲ್ಲಿ ಆಡಲಾಯಿತು.ಇಂಡಿಯಾ ನ್ಯಾಶನಲ್ ಕಬಡ್ಡಿ ಟೀಮ್-ಭಾರತ ತಂಡವು,ಪೈನಲ್ ನಲ್ಲಿ ಇರಾನ್[ ] ತಂಡವನ್ನು ಸೋಲಿಸಿ ಪಂದ್ಯ ಶ್ರೇಷ್ಟವಾಗಿ ಹೊರಹೊಮ್ಮಿತು.2013ರಲ್ಲಿ ತನ್ನ ಪ್ರಥಮ ಪ್ರಯತ್ನದ ಎದುರಾಳಿ ನ್ಯೂಜಿಲೆಂಡನ್ನು ಅಂತಿಮ ಪಂದ್ಯದಲ್ಲಿ ಸೋಲಿಸಿ ಭಾರತ ತನ್ನ ಪಂದ್ಯ-ಶ್ರೇಷ್ಠತೆಯನ್ನು ಉಳಿಸಿಕೊಂಡಿತು.ವಿವರ:೧ ಹೆಣ್ಣು ಮಕ್ಕಳ ವಿಶ್ವ ಕಬಡ್ಡಿ ಫಲಿತಾಂಶ : (ಆಧಾರ: ಇಂಗ್ಲಿಷ್ ತಾಣ : == ಪ್ರಮುಖ ಅಂತರಾಷ್ಟ್ರಿಯ ಪಂದ್ಯಾವಳಿಗಳು == ವಿಶ್ವ ಕಪ್ ಏಷ್ಯನ್ ಗೇಮ್ಸ್ ಪುರುಷರ ಏಷ್ಯನ್ ಛಾಂಪಿಯನಶಿಪ್ ಮಹಿಳೆಯರ ಏಷ್ಯನ್ ಛಾಂಪಿಯನಶಿಪ್ ಜ್ಯೂನಿಯರ್ ಗಂಡು ಮಕ್ಕಳ ಏಷ್ಯನ್ ಛಾಂಪಿಯನಶಿಪ್ ಜ್ಯೂನಿಯರ್ ಹೆಣ್ಣು ಮಕ್ಕಳ ಏಷ್ಯನ್ ಛಾಂಪಿಯನಶಿಪ್ ದಕ್ಷಿಣ ಏಷ್ಯನ್ ಫೆಡರೇಶನ್ ಗೇಮ್ಸ್ ಪ್ರೊ ಕಬಡ್ಡಿ ಲಿಗ್ == ರಾಜ್ಯಮಟ್ಟದ ಪಂದ್ಯಾವಳಿಗಳು == ರಾಜ್ಯಮಟ್ಟದ ಗ್ರಾಮೀಣ ಕಬಡ್ಡಿ ಪಂದ್ಯಾವಳಿ ಜಿಲ್ಲಾಮಟ್ಟದ ಗ್ರಾಮೀಣ ಕಬಡ್ಡಿ ಪಂದ್ಯಾವಳಿ ತಾಲೂಕ ಮಟ್ಟದ ಗ್ರಾಮೀಣ ಕಬಡ್ಡಿ ಪಂದ್ಯಾವಳಿ == ಕಬಡ್ಡಿ ತಂಡವಿರುವ ದೇಶಗಳ ಪಟ್ಟಿ ? == 1. ಭಾರತ 2. ಟರ್ಕಿ 3. ಇರಾನ 4. ಅಮೇರಿಕ 5. ಇಥೋಪಿಯಾ 6. ಮಲೇಷ್ಯಾ 7. ರಷ್ಯಾ 8. ಇಂಡೋನೇಷ್ಯಾ 9. ಬ್ರಜಿಲ್ 10. ಥೈಲ್ಯಾಂಡ 11. ಬ್ರಿಟನ 12. ವಿಯೆಟ್ನಾಮ್ 13. ಜರ್ಮನಿ 14. ಪಾಕಿಸ್ತಾನ 15. ಫಿಲಿಪ್ಪೀನ್ಸ್ 16. ಬಾಂಗ್ಲಾದೇಶ 17. ಇಜಿಪ್ತ 18. ಜಪಾನ್ 19. ನೈಜೀರೆಯ == ಏಷ್ದಾಡ್ ನಲ್ಲಿ ಆಡಿದ ಟೀಮುಗಳು == ಈ ವರರ್ಷಗಳಲ್ಲಿ ಪುರುಷ ಮತ್ತು ಮಹಿಳಾ ಕಬಡ್ಡಿ ಟೀಮುಗಳು ಗಳಿಸಿದ ಸ್ಥಾನಗಳು : 1990; 1994; 1998; 2002; 2006; 2010; 2014. === ಏಷ್ಯಾಡ್`ನಲ್ಲಿ ಆಡಿದ ಪುರುಷ ಕಬಡ್ಡಿ ತಂಡಗಳು === ಈ ವರರ್ಷಗಳಲ್ಲಿ ಟೀಮುಗಳು ಗಳಿಸಿದ ಸ್ಥಾನಗಳು : 1990; 1994; 1998; 2002; 2006; 2010; 2014. === ಏಷ್ಯಾಡ್`ನಲ್ಲಿ ಆಡಿದ ಮಹಿಳಾ ಕಬಡ್ಡಿ ತಂಡಗಳು === (ಇಂಗ್ಲಿಷ್ ತಾಣದಿಂದ [೫]) == ಮಹಿಳಾ ಕಬಡ್ಡಿ ಲೀಗ್ == ಮಹಿಳಾ ಕಬಡ್ಡಿ ಲೀಗ್ 2016 2016 ಜೂನ್ ಮಹಿಳಾ ಕಬಡ್ಡಿ ಲೀಗ್ ಇದೇ ವರ್ಷದ ಜೂನ್‌ನಲ್ಲಿ ನಡೆಸಲು ಸಂಘಟಕರು ನಿರ್ಧರಿಸಿದ್ದಾರೆ.(ದೇಶಿ ಕ್ರೀಡೆ ಕಬಡ್ಡಿಯ ಪ್ರಾಮುಖ್ಯತೆ ಹೆಚ್ಚಾಗಬೇಕು ಎನ್ನುವ ಕಾರಣಕ್ಕಾಗಿ ಮಷಾಲ ಸ್ಪೋರ್ಟ್ಸ್‌ ಮತ್ತು ಸ್ಟಾರ್‌ ಸ್ಪೋರ್ಟ್ಸ್ ವಾಹಿನಿ 2014ರ ಜುಲೈನಲ್ಲಿ ಮೊದಲ ಬಾರಿಗೆ ಪುರುಷರಿಗೆ ಪ್ರೊ ಕಬಡ್ಡಿ ಲೀಗ್ ಆಯೋಜಿಸಿತ್ತು.)ಈಗ ಜೂನ್‌ 25ರಿಂದ ನಡೆಯುವ ಪುರುಷರ ಲೀಗ್ ಜೊತೆಗೆ ಮಹಿಳಾ ಲೀಗ್ ಕೂಡ ಆಯೋಜಿಸಲು ಸಂಘಟಕರು ನಿರ್ಧರಿಸಿದ್ದಾರೆ. ಮಹಿಳಾ ಲೀಗ್‌ನಲ್ಲಿ ಒಟ್ಟು ಮೂರು ತಂಡಗಳು ಪಾಲ್ಗೊಳ್ಳಲಿವೆ. ಭಾರತ ಕಬಡ್ಡಿ ತಂಡದ ನಾಯಕಿ ಕರ್ನಾಟಕದ ತೇಜಸ್ವಿನಿ ಬಾಯಿ ಮತ್ತು ಇಂಚೆನ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ತಂಡದಲ್ಲಿ ಮಮತಾ ಪೂಜಾರಿ ಅವರು ಒಂದೊಂದು ತಂಡಕ್ಕೆ ನಾಯಕಿಯರಾ ಗಿದ್ದಾರೆ. ಮಹಾರಾಷ್ಟ್ರದ ಅಭಿಲಾಷ ಇನ್ನೊಂದು ತಂಡವನ್ನು ಮುನ್ನಡೆಸ ಲಿದ್ದಾರೆ. ರಾಜ್ಯದ ಇನ್ನೊಬ್ಬ ಆಟಗಾರ್ತಿ ಉಷಾರಾಣಿ ಕೂಡ ಲೀಗ್‌ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ವಿಧಾನ ಪುರುಷರ ಲೀಗ್‌ನಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ಒಂದೇ ಸ್ಥಳದಲ್ಲಿ ಏಳು ಪಂದ್ಯಗಳು ನಡೆಯುತ್ತವೆ. ಒಂದು ದಿನ ಒಂದು ಪಂದ್ಯವಷ್ಟೇ ಇರುತ್ತದೆ. ಈ ಬಿಡುವಿನ ಅವಧಿಯ ವೇಳೆ ಮಹಿಳಾ ಲೀಗ್ ಪಂದ್ಯ ನಡೆಸಲು ಸ್ಟಾರ್ ಸ್ಪೋರ್ಟ್ಸ್ ನಿರ್ಧರಿಸಿದೆ. ಮಹಿಳಾ ಲೀಗ್‌ನಲ್ಲಿ ಒಟ್ಟು ಎಂಟು ಪಂದ್ಯಗಳು ನಡೆಯಲಿವೆ. ಹೆಚ್ಚು ಪಾಯಿಂಟ್ಸ್‌ ಪಡೆದು ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಕ್ರಮವಾಗಿ ಚಾಂಪಿಯನ್‌ ಮತ್ತು ರನ್ನರ್ಸ್‌ ಅಪ್‌ ಸ್ಥಾನ ಪಡೆದುಕೊಳ್ಳಲಿವೆ. ಅಂತರರಾಷ್ಟ್ರೀಯ ಮಹಿಳಾ ಕಬಡ್ಡಿ ಪಂದ್ಯಗಳನ್ನು ಸಾಮಾನ್ಯವಾಗಿ 11X8ರ ಅಳತೆಯ ಅಂಕಣದಲ್ಲಿ ಆಡಿಸಲಾ ಗುತ್ತದೆ. ಆದರೆ ಲೀಗ್‌ನಲ್ಲಿ ಮಹಿಳಾ ತಂಡಗಳು 13X10ರ ಅಂಕಣದ ಅಳತೆಯಲ್ಲಿಯೇ ಆಡಬೇಕಾಗುತ್ತದೆ. ಒಂದು ತಂಡದಲ್ಲಿ 14 ಆಟಗಾರ್ತಿಯರು ಇರಲಿದ್ದಾರೆ ಎಂದೂ ತಿಳಿದು ಬಂದಿದೆ. == ಚಲನಚಿತ್ರ == ಈಗ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟದ ಹಿನ್ನೆಲೆ ಇರುವಂಥ ಚಿತ್ರವೊಂದು ಇದೀಗ ಕನ್ನಡದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಗಂಗಾ ಜಮುನಾ (1961) ಕದಂಬ ತಲೈವಾನ್ (೧೯೬೨) ಗಂಗಾ ಕೀ ಸೌಗಂಧ್ (೧೯೭೮) ನಸೀಬ್ (೧೯೮೧) ಲಿಟಲ್ ಬುದ್ಧ (೧೯೯೩) ಪರ್ದೇಸ್ (೧೯೯೭) ಹು ತು ತು (೧೯೯೯) ಕಬಡ್ಡಿ ಕಬಡ್ಡಿ (೨೦೦೩) ಒಕ್ಕಾಡು (೨೦೦೩) ಘಿಲ್ಲಿ (೨೦೦೬- ತಮಿಳು) ಅಜಯ್ (೨೦೦೬) ಕಬಡ್ಡಿ (೨೦೦೯) ವೆನ್ನಿಲಾ ಕಬಾಡಿ ಕುಜು (೨೦೦೯-ತಮಿಳು) ಭೀಮ್ಲೀ ಕಬಡ್ಡಿ ಜುತ್ತು (೨೦೧೦) ಚಲ್ ಧರ್ ಪಕಡ್ (೨೦೧೦) ಕಬಡ್ಡಿ ಏಕ್ ಮೊಹೊಬತ್ (೨೦೧೦) ಕಬಡ್ಡಿ ವನ್ಸ್ ಎಗೈನ್ (೨೦೧೨) ಬದ್ಲಾಪುರ್ ಬಾಯ್ಸ್ (೨೦೧೪) ತೇವರ್ (೨೦೧೫) ಥೊಪ್ಪಿಲ್ ಜೋಪ್ಪನ್ (೨೦೧೬) "ಭಕ್ತಿ ಕಬಡ್ಡಿ ಲೀಗ್ "(೨೦೧೭) ಸ್ಟೂಡೆಂಟ್ ಆಫ್ ದಿ ಇಯರ್ ೨ (೨೦೧೯) ವೆನ್ನಿಲಾ ಕಬಾಡಿ ಕುಜು ೨ (೨೦೧೯ - ತಮಿಳು) ಪಂಗಾ (೨೦೨೦) == ನೋಡಿ == ವಿಶ್ವಕಪ್‌ ಕಬಡ್ಡಿ ಟೂರ್ನಿ ೨೦೧೬ ಪ್ರೊ ಕಬಡ್ಡಿ- 17ನೇ ಏಷ್ಯನ್‌ ಕ್ರೀಡಾಕೂಟ 2014 ಕರ್ನಾಟಕ ಮತ್ತು ಕ್ರೀಡೆ ಎತ್ತರ-ತೂಕ-ಆರೋಗ್ಯ ಫೀಫಾ:-- 2014 ರ ಫೀಫಾ ಫುಟ್ ಬಾಲ್ ವಿಶ್ವ ಕಪ್ ಪಂದ್ಯ ಮೇರಿ ಕೋಮ್ ಸ್ಕೌಟ್ ಚಳುವಳಿ ಎಂ.ಆರ್. ಪೂವಮ್ಮ ಜಿತು ರಾಯ್ ವಿಕಾಸ್‌ ಗೌಡ ಕ್ರೀಡೆ 2014 --[೬] == ಬಾಹ್ಯ ಸಂಪರ್ಕಗಳು == * * 2011 2007-06-18 ವೇಬ್ಯಾಕ್ ಮೆಷಿನ್ ನಲ್ಲಿ. 2019-12-12 ವೇಬ್ಯಾಕ್ ಮೆಷಿನ್ ನಲ್ಲಿ. 2021-06-13 ವೇಬ್ಯಾಕ್ ಮೆಷಿನ್ ನಲ್ಲಿ. 2011-06-16 ವೇಬ್ಯಾಕ್ ಮೆಷಿನ್ ನಲ್ಲಿ. - ದ ನ್ಯೂ ಯಾರ್ಕ್ ಟೈಮ್ಸ್ :[೭] :[೮] 2014 :[೯] 2015 : [೧೦] : [೧೧] 2016 : [೧೨] == ಉಲ್ಲೇಖಗಳು ==