ಕರಾಕಸ್ ದಕ್ಷಿಣ ಅಮೇರಿಕ ಖಂಡದ ವೆನೆಜುವೆಲಾ ದೇಶದ ರಾಜಧಾನಿ ಮತ್ತು ಅತಿ ದೊಡ್ಡ ನಗರವಾಗಿದೆ. ದೇಶದ ಉತ್ತರ ಭಾಗದಲ್ಲಿ ಸ್ಥಿತವಾಗಿರುವ ಇದು ವೆನೆಜುವೆಲಾ ಕರಾವಳಿಯ ಪರ್ವತ ಶ್ರೇಣಿಯ ಕಣಿವೆಯೊಂದರಲ್ಲಿದೆ. ನಗರದ ಐತಿಹಾಸಿಕ ಕೇಂದ್ರವಾದ ಲಿಬರ್ಟಡೊರ್ ಪ್ರದೇಶದ ಜನಸಂಖ್ಯೆ ೨೦೦೫ರಲ್ಲಿ ೨೧ ಲಕ್ಷವಾಗಿತ್ತು. ಆ ಕಾಲದಲ್ಲಿಯೇ ಸುತ್ತಮುತ್ತಲಿನ ಪ್ರದೇಶಗಳನ್ನೊಳಗೊಂಡ ಕರಾಕಸ್ ಮಹಾನಗರದ ಜನಸಂಖ್ಯೆ ೪೭ ಲಕ್ಷವಾಗಿತ್ತು. == ಇವುಗಳನ್ನೂ ನೋಡಿ == ದಕ್ಷಿಣ ಅಮೇರಿಕ ವೆನೆಜುವೆಲಾ ದಕ್ಷಿಣ ಅಮೆರಿಕ ದೇಶಗಳ ರಾಜಧಾನಿಗಳು == ಹೊರಗಿನ ಸಂಪರ್ಕಗಳು == ಕರಾಕಸ್ ಪ್ರವಾಸಿ ತಾಣ 2007-03-12 ವೇಬ್ಯಾಕ್ ಮೆಷಿನ್ ನಲ್ಲಿ. ಮೈಕೇತಿಯಾ ವಿಮಾನ ನಿಲ್ದಾಣ, ಕರಾಕಸ್