ಕರಿಹಾವು : ಉತ್ತರ ಅಮೆರಿಕದಲ್ಲಿ ಇದು ಸಾಮಾನ್ಯವಾಗಿರುವ, ವಿಷರಹಿತ ಹಾವು. == ವೈಜ್ಞಾನಿಕ ವರ್ಗೀಕರಣ == ಕೊಲ್ಯೂಬ್ರಿಡೀ ಕುಟುಂಬಕ್ಕೆ ಸೇರಿದ ಕಾಲ್ಯುಬರ್ ಕನ್ಸ್ಟ್ರಿಕ್ಟರ್ ಎಂಬ ಶಾಸ್ತ್ರೀಯ ಹೆಸರಿನ ಹಾವು. == ಪ್ರಭೇದಗಳು == ಇದರಲ್ಲಿ ಹಲವಾರು ಉಪಪ್ರಭೇದಗಳಿವೆ. ಇವುಗಳಲ್ಲಿ ಅಮೆರಿಕದ ಸಂಯುಕ್ತಸಂಸ್ಥಾನಗಳ ಮಧ್ಯಭಾಗದಲ್ಲಿ ಕಾಣಬರುವ ಬ್ಲೂ ರೇಸರ್ ಹಾಗೂ ಆಗ್ನೇಯ ಭಾಗದಲ್ಲಿ ಕಾಣಬರುವ ದಕ್ಷಿಣದ ಬ್ಲ್ಯಾಕ್ ರೇಸರ್ ಮುಖ್ಯವಾದುವು. == ಲಕ್ಷಣಗಳು == ತೆಳು ಹಾಗೂ ನೀಳದೇಹದ ಈ ಹಾವು ಸು. 4-5 ಅಡಿ ಉದ್ದ ಬೆಳೆಯುತ್ತದೆ. ದೇಹದ ಮೇಲ್ಭಾಗ ಕಪ್ಪು, ತಳಭಾಗ ನಸುಬಿಳುಪು ಅಥವಾ ಹಳದಿ. ಬಾಯಿಯ ತಳಭಾಗ ಬಿಳಿಬಣ್ಣದ್ದಾಗಿದೆ. ಇದು ಬಹಳ ವೇಗವಾಗಿ ಚಲಿಸಬಲ್ಲುದಲ್ಲದೆ ಮರ ಹತ್ತುವುದಲ್ಲೂ ಈಜುವುದರಲ್ಲೂ ಪ್ರಾವೀಣ್ಯ ಪಡೆದಿದೆ. ಗಾಬರಿಗೊಂಡಾಗ ಬಾಲದ ತುದಿಯನ್ನು ಅಲುಗಾಡಿಸುತ್ತದೆ. == ಆಹಾರ == ಕಪ್ಪೆ ಇತರ ಸಣ್ಣ ಗಾತ್ರದ ಹಾವುಗಳು, ಚಿಕ್ಕ ಸ್ತನಿಗಳು, ಹಕ್ಕಿಗಳು ಮೊಟ್ಟೆಗಳು ಇದರ ಆಹಾರ. == ಸಂತಾನಾಭಿವೃದ್ಧಿ == ಇವು ವಸಂತ ಋತುವಿನಲ್ಲಿ ಕೂಡಿ 10-35 ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯಿಡುವ ಕಾಲ ಮೇ-ಜುಲೈ, ಮೊಟ್ಟೆಗಳ ಮೇಲೆ ಸಣ್ಣ ಮರಳಿನಂಥ ಕಣಗಳಿಂದಾದ ಹೊದಿಕೆಯುಂಟು. 7-9 ವಾರಗಳಲ್ಲಿ ಮೊಟ್ಟೆಗಳೊಡೆದು ಮರಿಗಳು ಹೊರಬರುತ್ತವೆ. == ಛಾಯಾಂಕಣ == == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == " ": - - 2015-07-03 ವೇಬ್ಯಾಕ್ ಮೆಷಿನ್ ನಲ್ಲಿ. , :