ಕರ್ಕ್ಯುಮಿನ್ಇದು ಅರಿಸಿನದ ಬೇರಿನಲ್ಲಿರುವ ವರ್ಣಪದಾರ್ಥ, ಅರಿಸಿನವನ್ನು ನೇರವಾಗಿ ಲೀನಕಾರಿಗಳಿಂದ ಸಂಸ್ಕರಿಸಿ ಸ್ಫಟಿಕೀಕರಿಸಿಯಾಗಿಲೀ ಕ್ಷಾರಗಳ ಜಲದ್ರಾವಣದಲ್ಲಿ ಸಂಸ್ಕರಿಸಿ ಬಳಿಕ ಆಮ್ಲಗಳನ್ನುಪಯೋಗಿಸಿ ಸ್ಫಟಿಕೀಕರಿಸಿಯಾಗಲೀ ಇದನ್ನು ಹೊರತೆಗೆಯಬಹುದು. ಅರಿಸಿನ ಬೇರಿನಲ್ಲಿ ಶೇ. 0.5 ರಿಂದ ಶೇ. 2 ಭಾಗ ಕರ್ಕ್ಯುಮಿನ್ ಇರುತ್ತದೆ. ಇದರ ರಚನೆ 21 20 6. ರಾಸಾಯನಿಕ ಹೆಸರು ಫೆರುಲಾಯಿಲ್ ಮೀಥೇನ್. ಇದರ ಕರಗುವ ಬಿಂದು 177-178 ಡಿಗ್ರಿ ಸೆಂ. ಇದು ಉತ್ಕರ್ಷಣ ನಿರೋಧಕ ಪದಾರ್ಥ. ಇದರ ಫೀನಾಲಿಕ್ ರಚನೆಯೇ ಇದಕ್ಕೆ ಕಾರಣ. ಈಚಿನ ಸಂಶೋಧನೆಗಳಿಂದ ಇಲಿಗಳಿಗೆ ಕೋಲೆಸ್ಟೆರಾಲ್ ಜೊತೆಯಲ್ಲಿ ಕರ್ಕ್ಯುಮಿನ್ನನ್ನು ಆಹಾರದಲ್ಲಿ ಕೊಟ್ಟಾಗ ಕೋಲೆಸ್ಟೆರಾಲ್ ಹೀರುವಿಕೆ ಬಲುಮಟ್ಟಿಗೆ ನಿಂತು ಹೋಯಿತೆಂದು ತಿಳಿದುಬಂದಿದೆ. == ಬಾಹ್ಯ ಸಂಪರ್ಕಗಳು == , - , .. ,