ಕಲಕೇರಿ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿದೆ. == ಭೌಗೋಳಿಕ == ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦" ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ. == ಹವಾಮಾನ == ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ. ಬೇಸಿಗೆಕಾಲ - ೩೫°-೪೨° ಡಿಗ್ರಿ ಸೆಲ್ಸಿಯಸ್ ಚಳಿಗಾಲ ಮತ್ತು ಮಳೆಗಾಲ - ೧೮°-೨೮° ಡಿಗ್ರಿ ಸೆಲ್ಸಿಯಸ್. ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ. ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ. == ಜನಸಂಖ್ಯೆ == ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರುಇದೆ.25683ಅದರಲ್ಲಿ ಪುರುಷರು 13118ಮತ್ತು 12565ಮಹಿಳೆಯರು ಇದ್ದಾರೆ. == ಸಾಂಸ್ಕೃತಿಕ == ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ. == ಕಲೆ ಮತ್ತು ಸಂಸ್ಕೃತಿ == ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. == ಧರ್ಮ == ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ. == ಭಾಷೆ == ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ. == ದೇವಾಲಯ == ಶ್ರೀ ವೀರಘಂಟೈ ಮಡಿವಾಳೇಶ್ವರ ದೇವಾಲಯ ಪ್ರಸಿದ್ದಿಯಾಗಿದೆ ಪ್ರತಿ ವರ್ಷ ಡಿಸೆಂಬರ ತಿಂಗಳಲ್ಲಿ ಜಾತ್ರೆ ನಡೆಯುತ್ತದೆ. ವೀರಘಂಟೈ ಮಡಿವಾಳೇಶ್ವರರ ಜೀವಂತ ಸಮಾಧಿಗಳಿವೆ. ಮಡಿವಾಳೇಶ್ವರರು ದೇವರ ಹಿಪ್ಪರಗಿಯಿಂದ ಕಲಕೇರಿಗೆ ಬಂದು ದೀಕ್ಷೆ ಪಡೆದು ಕಲಕೇರಿಯಲ್ಲಿಯೆ ಜೀವಂತ ಸಮಾಧಿಯಾಗಿದ್ದಾರೆ. ಶ್ರೀ ಕಲ್ಲಿನಾತೇಶ್ವರ ದೇಗುಲವು ಕಲಕೇರಿಯ ಪುರಾತನ ದೇಗುಲ. ಶ್ರೀ ಮಲ್ಲಿಕಾರ್ಜುನ ದೇವಾಲಯವು ಬದಾಮಿ ಚಾಲುಕ್ಯರಿಗೆ ಸೇರಿರಬಹುದು ಅವರ ಶೈಲಿಯಲ್ಲಿಯೆ ಇದೆ ಹಾಗೂ ಟಾಲಮಿ ಅನುವಂತಹ ತಜ್ಞರು ಕಲಕೇರಿಯಲ್ಲಿ ವಜ್ರವೈಡೂರಿಗಳ ಮಾರುಕಟ್ಟೆ ಇತ್ತು ಎಂದು ಹೇಳುತ್ತಾರೆ.ಈ ದೇವಾಲಯದಲ್ಲಿ ಶಿವ ಪಾರ್ವತಿಯರ ವಿಗ್ರಹಗಳು ಇವೆ. ಶ್ರೀ ಬಸವೇಶ್ವರ ದೇವಾಲಯ ಈ ದೇವಾಲಯವು ಕುಡಾ ಪುರಾತನ ವಾದದು. ಶ್ರೀ ಮಹಾಲಕ್ಷ್ಮಿ ದೇವಾಲಯ ಶ್ರೀ ದುರ್ಗಾದೇವಿ ದೇವಾಲಯ ಶ್ರೀ ವೆಂಕಟೇಶ್ವರ ದೇವಾಲಯವು ಶ್ರೀ ಪಾಂಡುರಂಗ ದೇವಾಲಯ ಶ್ರೀ ಹಣಮಂತ ದೇವಾಲಯ ಶ್ರೀ ಭಾಗ್ಯವಂತಿ ದೇವಾಲಯ ಶ್ರೀ ನಾಗ ದೇವಾಲಯ ಶ್ರೀ ಭವಾನಿ ದೇವಾಲಯ ಶ್ರೀ ಪಾಲ್ಕಮ್ಮ ದೇವಾಲಯ(ಅಗಸಿ) ಶ್ರೀ ಯಾಲ್ಲಾಲಿಂಗೇಶ್ವರ ಮಠ ಶ್ರೀ ಬಸವೇಶ್ವರ ದೇವಾಲಯ ಶ್ರೀ ಮಲ್ಲಿಕಾರ್ಜುನ ದೇವಾಲಯ ಶ್ರೀ ನಾಗೇಶ್ವರ ದೇವಾಲಯ == ಮಸೀದಿ == ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಬಂದೆನಮಾಜ ದರ್ಗಾ ಹಾಗೂ ಜುಮ್ಮಾ ಮಸೀದಿ ಇದೆ. == ನೀರಾವರಿ == ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ, ತೊಗರಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ. == ಕೃಷಿ ಮತ್ತು ತೋಟಗಾರಿಕೆ == ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ. == ಉದ್ಯೋಗ == ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ, ಮೇಕೆ ಸಾಕಾಣಿಕೆ ಹಾಗೂ ಉಪ ಕಸುಬುಗಳಾಗಿವೆ. == ಬೆಳೆ == ಆಹಾರ ಬೆಳೆಗಳು ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ ವಾಣಿಜ್ಯ ಬೆಳೆಗಳು ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ. ತರಕಾರಿ ಬೆಳೆಗಳು ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ. == ಸಸ್ಯ == ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ. == ಪ್ರಾಣಿ == ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ. == ಹಬ್ಬ == ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಮತ್ತು ಗಣೇಶ ಚೌತಿ ಆಚರಿಸುತ್ತಾರೆ. == ಶಿಕ್ಷಣ == ಸರಕಾರಿ ಹಿರಿಯ ಬಾಲಕರ ಪ್ರಾಥಮಿಕ ಶಾಲೆ, ಕಲಕೇರಿ ಸರಕಾರಿ ಹಿರಿಯ ಬಾಲಕಿಯರ ಪ್ರಾಥಮಿಕ ಶಾಲೆ, ಕಲಕೇರಿ ಸರಕಾರಿ ಉರ್ದು ಶಾಲೆ ಹಿರಿಯ ಪ್ರಾಥಮಿಕ ಶಾಲೆ, ಕಲಕೇರಿ ಪೀಸ್ ಇಂಟರನ್ಯಾಶನಲ್ ಕಿರಿಯ ಪ್ರಾಥಮಿಕ ಶಾಲೆ, ಕಲಕೇರಿ ಸಿದ್ಧಾರ್ಥ ಕಿರಿಯ ಪ್ರಾಥಮಿಕ ಶಾಲೆ, ಕಲಕೇರಿ ಮಡಿವಾಳೇಶ್ವರ ಕಿರಿಯ ಪ್ರಾಥಮಿಕ ಶಾಲೆ, ಕಲಕೇರಿ ಶ್ರೀ ಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆ, ಕಲಕೇರಿ ಆದರ್ಶ ಕಿರಿಯ ಪ್ರಾಥಮಿಕ ಶಾಲೆ, ಕಲಕೇರಿ ವಿದ್ಯಾಸಾಗರ ಕಿರಿಯ ಪ್ರಾಥಮಿಕ ಶಾಲೆ, ಕಲಕೇರಿ ಶಾಂತಿಲಿಂಗೇಶ್ವರ ಕಿರಿಯ ಪ್ರಾಥಮಿಕ ಶಾಲೆ, ಕಲಕೇರಿ ಶ್ರೀ ಜಯಶಾಂತ ಲಿಂಗೇಶ್ವರ ಆಂಗ್ಲ ಮಾದ್ಯಮ ಪ್ರಾಥಮಿಕ, ಕಲಕೇರಿ ಆದರ್ಶ ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆ, ಕಲಕೇರಿ ಶ್ರೀ ಸಿದ್ದಾರ್ಥ ಪ್ರೌಢ ಶಾಲೆ, ಕಲಕೇರಿ ಆದರ್ಶ ಆಂಗ್ಲ ಮಾದ್ಯಮ ಪ್ರೌಡ ಶಾಲೆ, ಕಲಕೇರಿ ಶ್ರೀ ಬಸವೇಶ್ವರ ಪ್ರೌಢ ಶಾಲೆ, ಕಲಕೇರಿ ಟಿ.ಈ.ಎಮ್. ಉರ್ದು ಪ್ರೌಢ ಶಾಲೆ, ಕಲಕೇರಿ ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಕಲಕೇರಿ ಎ.ಕೆ.ಶಿರಸಗಿ ಪದವಿ ಪೂರ್ವ ಮಹಾವಿದ್ಯಾಲಯ, ಕಲಕೇರಿ ಜಗದಾಆರಾಧ್ಯ ಜಯಶಾಂತಲಿಂಗೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಕಲಕೇರಿ ಶ್ರೀ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಕಲಾ ಮಹಾವಿದ್ಯಾಲಯ, ಕಲಕೇರಿ ಅಲ್ - ಅಮೀನ್ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ , ಕಲಕೇರಿ ಶ್ರೀ ಭವಾನಿ ಕಂಪ್ಯೂಟರ್ ತರಬೇತಿ ಕೇಂದ್ರ ಕಲಕೇರಿ == ಸಾಕ್ಷರತೆ == ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ. == ರಾಜಕೀಯ == ಗ್ರಾಮವು ದೇವರ ಹಿಪ್ಪರಗಿ ಲೋಕಸಭಾ ದ ವ್ಯಾಪ್ತಿಯಲ್ಲಿ ಬರುತ್ತದೆ. == ಬ್ಯಾಂಕ್ == ವಿಜಯ ಬ್ಯಾಂಕ್, ಕಲಕೇರಿ ಡಿ.ಸಿ.ಸಿ.ಬ್ಯಾಂಕ, ಕಲಕೇರಿ == ಉಚಿತ ಪ್ರಸಾದನಿಲಯ == ಮೆಟ್ರಿಕ್ ಪುರ್ವ ಬಾಲಕರ ಉಚಿತ ಪ್ರಸಾದನಿಲಯ, ಕಲಕೇರಿ == ಗ್ರಾಮ ಪಂಚಾಯತಿ == ಗ್ರಾಮ ಪಂಚಾಯತಿ, ಕಲಕೇರಿ == ದೂರವಾಣಿ ವಿನಿಮಯ ಕೇಂದ್ರ == ದೂರವಾಣಿ ವಿನಿಮಯ ಕೇಂದ್ರ, ಕಲಕೇರಿ == ಅಂಚೆ ಕಚೇರಿ == ಅಂಚೆ ಕಚೇರಿ, ಕಲಕೇರಿ ಕಲಕೇರಿ - 586118 (ಹುಣಶ್ಯಾಳ(ಎಸ್.ಡಿ.ಜಿ), ಕೆರೂಟಗಿ, ಕೆಸರಟ್ಟಿ, ನೀರಲಗಿ, ತಿಳಿಗೂಳ, ಆಲಗೂರ, ಅಸ್ಕಿ, ಬೆಕಿನಾಳ, ಬಿಂಜಳಭಾವಿ). == ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘ == ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘ, ಕಲಕೇರಿ == ವಿದ್ಯುತ್ ಪರಿವರ್ತನಾ ಕೇಂದ್ರ == 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಕಲಕೇರಿ == ಪೋಲಿಸ್ ಠಾಣೆ == ಪೋಲಿಸ್ ಠಾಣೆ, ಕಲಕೇರಿ == ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ == ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕಲಕೇರಿ == ಹಾಲು ಉತ್ಪಾದಕ ಸಹಕಾರಿ ಸಂಘ == ಹಾಲು ಉತ್ಪಾದಕ ಸಹಕಾರಿ ಸಂಘ, ಕಲಕೇರಿ == ಪ್ರಾಥಮಿಕ ಆರೋಗ್ಯ ಕೇಂದ್ರ == ಸಮುದಾಯ ಆರೋಗ್ಯ ಕೇಂದ್ರ, ಕಲಕೇರಿ == ಸರಕಾರಿ ವಾಹನ ನಿಲ್ದಾಣ == ಸರಕಾರಿ ವಾಹನ ನಿಲ್ದಾಣ, ಕಲಕೇರಿ ವಿಜಯಪುರ ಕರ್ನಾಟಕ