ಕಲಿನಿನ್‍ಗ್ರಾಡ್ ಸೋವಿಯತ್ ದೇಶದ ಮತ್ತು ಆಬ್ಲಾಸ್ಟಿನ ಆಡಳಿತಕೇಂದ್ರ. ಮುಖ್ಯ ಬಂದರು, ನೌಕಾ ನೆಲೆ, ಪುರಾತನ ನಗರ, ಇದರ ಹಿಂದಿನ ಹೆಸರು ಕೋನಿಕ್ಸ್‌ ಬರ್ಗ್. ರಷ್ಯನ್ ಸೋವಿಯತ್ ಫೆಡರೇಟೆಡ್ ಸಮಾಜವಾದಿ ಗಣರಾಜ್ಯದಲ್ಲಿದೆ. ಜನಸಂಖ್ಯೆ ೪,೩೧,೯೦೨ (೨೦೧೦) . ಪ್ರೇಗೋಲ್ಯ ನದಿಯ ದಡದಲ್ಲಿರುವ ಈ ನಗರ ಮಾಸ್ಕೋವಿಗೆ ಪಶ್ಚಿಮಕ್ಕೆ ೧೦೦೮ ಕಿಮೀ ದೂರದಲ್ಲಿದೆ. ಬರ್ಲಿನ್ ಇದಕ್ಕೆ ನೈಋತ್ಯದಲ್ಲಿ, ೫೪೦ ಕಿಮೀ ದೂರದಲ್ಲಿದೆ. == ಇತಿಹಾಸ == ಕಲೀನಿನ್ಗ್ರಾಡ್ ಟ್ಯುಟಾನಿಕ್ ಸರ್ದಾರರಿಂದ ೧೨೫೫ರಲ್ಲಿ ಸ್ಥಾಪಿತವಾಗಿ ೧೨೮೬ರಲ್ಲಿ ಪಟ್ಟಣವಾಯಿತು. ಹ್ಯಾನ್ಸಿಯಾಟಿಕ್ ಕೂಟಕ್ಕೆ ಸೇರಿದ್ದ ಈ ಪಟ್ಟಣ ಟ್ಯುಟಾನಿಕರ ಕೇಂದ್ರವಾದ್ದು ೧೫ನೆಯ ಶತಮಾನದಲ್ಲಿ. ೧೬ನೆಯ ಶತಮಾನದಲ್ಲಿ ಇದು ಪ್ರಷ್ಯದ ಡ್ಯೂಕರ ಮುಖ್ಯಪಟ್ಟಣವಾಯಿತು. ಸುಪ್ರಸಿದ್ಧ ತತ್ತ್ವಶಾಸ್ತ್ರಜ್ಞ ಇಮ್ಯಾನ್ಯುಯೆಲ್ ಕಾಂಟ್ ಇಲ್ಲಿ ಪ್ರಾಧ್ಯಾಪಕನಾಗಿದ್ದ. ಆತನ ಸ್ಮಾರಕವೊಂದು ೧೮೬೪ರಲ್ಲಿ ಸ್ಥಾಪಿತವಾಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಕಲೀನಿನ್ಗ್ರಾಡ್ ನಗರ ಅಪಾರ ಹಾನಿಗೆ ಗುರಿಯಾಯಿತು. ಇಲ್ಲಿಯ ಅನೇಕ ಪುರಾತನ ಕಟ್ಟಡಗಳು ನಾಶವಾದುವು. ಕೆಲವು ಮಾತ್ರ ಇಂದಿಗೂ ಉಳಿದಿವೆ.ಮೊದಲು ಪ್ರಷ್ಯದ, ಅನಂತರ ಜರ್ಮನಿಯ ಅಡಿಯಲ್ಲಿ ಇದು ಬಾಲ್ಟಿಕ್ ಸಮುದ್ರದ ಮುಖ್ಯ ನೌಕಾನೆಲೆಗಳಲ್ಲೊಂದಾಗಿತ್ತು. ೧೯೪೫ರಲ್ಲಿ ಪಾಟ್ಸ್‌ ಡ್ಯಾಂ ಒಪ್ಪಂದದ ಪ್ರಕಾರ ಸೋವಿಯತ್ ದೇಶಕ್ಕೆ ಸೇರಿತು. == ಹವಾಮಾನ == ಕಲಿನಿನ್‍ಗ್ರಾಡ್‍ನಲ್ಲಿ ಸಮಶೀತೋಷ್ಣ ಹವಾಮಾನವಿದೆ.ಚಳಿಯಿಂದ ಕೂಡಿದ,ಮೋಡ ಮುಸುಕಿದ ಚಳಿಗಾಲ ಮತ್ತು ಮಳೆಗಳಿಂದ ಕೂಡಿದ ಬೇಸಗೆಕಾಲ ಇಲ್ಲಿಯ ವೈಶಿಷ್ಟ್ಯ. == ವಾಣಿಜ್ಯ == ಕಲೀನಿನ್ಗ್ರಾಡಿನ ಬಳಿ ನೀರು ಚಳಿಗಾಲದಲ್ಲಿ ಹೆಪ್ಪುಗಟ್ಟುವುದಿಲ್ಲವಾದ್ದರಿಂದ ಇದು ಸೋವಿಯತ್ ದೇಶದ ಸರ್ವಋತು ಬಂದರು. ಕಲೀನಿನ್ಗ್ರಾಡಿನಲ್ಲಿ ಕಾಗದ, ರಸಾಯನವಸ್ತು ಮತ್ತು ಮೀನಿನ ವಸ್ತುಗಳನ್ನು ತಯಾರಿಸುವ ಕೈಗಾರಿಕೆಗಳಿವೆ. ಮರದ ದಿಮ್ಮಿ. ಮೀನುಗಾರಿಕೆ ಎರಡು ಮುಖ್ಯ ಉದ್ಯೋಗಗಳು. ಸಾಗರ ಸಂಶೋಧನ ಇಲಾಖೆಗಳೂ ವಿಜ್ಞಾನ ಸಂಶೋಧನ ಕೇಂದ್ರಗಳೂ ನಗರದಲ್ಲುಂಟು. ಹಿನ್ನಾಡಿಗೆ ಹಲವು ರೈಲುಮಾರ್ಗಗಳಿವೆ. ಹೂಳೆತ್ತಿ ರಚಿಸಿದ ಕಡಲ್ಗಾಲುವೆಯ ಮೂಲಕ ಕಲೀನಿನ್ಗ್ರಾಡಿಗೆ ಅದರ ಹೊರರೇವಾದ ಬಾಲ್ಟಿಸ್ಕ್‌ ನೊಂದಿಗೆ ಸಂಬಂಧ ಕಲ್ಪಿಸಲಾಗಿದೆ. == ಛಾಯಾಂಕಣ == == ಬಾಹ್ಯ ಸಂಪರ್ಕಗಳು == 2017-08-20 ವೇಬ್ಯಾಕ್ ಮೆಷಿನ್ ನಲ್ಲಿ. // 2017-08-22 ವೇಬ್ಯಾಕ್ ಮೆಷಿನ್ ನಲ್ಲಿ. 2007-03-25 ವೇಬ್ಯಾಕ್ ಮೆಷಿನ್ ನಲ್ಲಿ. ' 1815 1945 () Königsberg 2006-09-02 ವೇಬ್ಯಾಕ್ ಮೆಷಿನ್ ನಲ್ಲಿ. Königsberg/, 1939 2005 2017-08-18 ವೇಬ್ಯಾಕ್ ಮೆಷಿನ್ ನಲ್ಲಿ. () () & 2013-02-06 ವೇಬ್ಯಾಕ್ ಮೆಷಿನ್ ನಲ್ಲಿ. 2018-03-12 ವೇಬ್ಯಾಕ್ ಮೆಷಿನ್ ನಲ್ಲಿ. () () : . 2014-10-25 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==