ಕಲೂಗಾಸೋವಿಯತ್ ದೇಶದ ರಷ್ಯನ್ ಸೋವಿಯತ್ ಫೆಡರೇಟೆಡ್ ಸಮಾಜವಾದಿ ಗಣರಾಜ್ಯದ ಒಂದು ಪಟ್ಟಣ ಮತ್ತು ಆಬ್ಲಾಸ್ಟ್‌ (ಪ್ರದೇಶ). ಮಾಸ್ಕೋದ ನೈಋತ್ಯಕ್ಕೆ ೧೬೦ ಕಿಮೀ ದೂರದಲ್ಲಿ ಅಕ ನದಿ ಎಡದಂಡೆಯ ಮೇಲಿದೆ. ಜನಸಂಖ್ಯೆ ೧೦,೪೧,೬೪೧ (೨೦೦೨). ವಾಜ಼್ಮ-ಟೂಲ ರೈಲುಮಾರ್ಗದಲ್ಲಿ, ಅದು ಮಾಸ್ಕೋ-ಕಿಯೆಫ್ ರೈಲುಮಾರ್ಗವನ್ನು ಸಂಧಿಸುವ ಸ್ಥಳಕ್ಕೆ ಹತ್ತಿರದಲ್ಲಿದೆ. == ಇತಿಹಾಸ == ಕಲೂಗಾದ ಸ್ಥಾಪನೆಯಾದದ್ದು ೧೪ನೆಯ ಶತಮಾನದಲ್ಲಿ. ಮಸ್ಕೊವಿನ ದಕ್ಷಿಣ ಗಡಿಯಲ್ಲಿ ಟಾಟರುಗಳ ವಿರುದ್ಧವಾದ ಆಯಕಟ್ಟಿನ ಸ್ಥಳದಲ್ಲಿತ್ತು. ೧೬೦೭ರಲ್ಲಿ ಆಕ್ರಮಣಕ್ಕೊಳಗಾಗಿದ್ದು, ಅನಂತರ ಪ್ರಾಂತ್ಯಾಡಳಿತಕೇಂದ್ರವಾಗಿದ್ದ ಈ ಪಟ್ಟಣ ಕ್ರಾಂತಿಪೂರ್ವಕಾಲದ ಆಹಾರ ಧಾನ್ಯ ಮಾರಾಟ ಕೇಂದ್ರವೆನಿಸಿತ್ತು. ಇಲ್ಲಿಂದ ಮಾಸ್ಕೋಗೆ ಧಾನ್ಯ ಸಾಗುತ್ತಿತ್ತು. ೧೮೫೦ರ ದಶಕದಲ್ಲಿ ನಡೆದ ಕಾಕೇಷಿಯನ್ ದಂಗೆಯ ನಾಯಕನಾಗಿದ್ದ ಷಾಮಿಲ್ ದೇಶಭ್ರಷ್ಟನಾಗಿ ಸ್ವಲ್ಪಕಾಲ ಇಲ್ಲಿದ್ದ. ೧೯೧೪ರಲ್ಲಿ ಜರ್ಮನ್ ಸೈನಿಕರು ಮಾಸ್ಕೋ ಕಡೆಗೆ ಮುನ್ನುಗ್ಗುತ್ತಿದ್ದಾಗ ಕೆಲಕಾಲ ಈ ನಗರ ಅವರ ಆಕ್ರಮಣಕ್ಕೊಳಗಾಗಿತ್ತು. == ವಾಣಿಜ್ಯ == ಯಂತ್ರೋಪಕರಣ, ಬೆಂಕಿಪೆಟ್ಟಿಗೆ, ಗಾಜು, ಪಾದರಕ್ಷೆ, ರಾಗಮಾಲಿಕೆ, ಬಟ್ಟೆ, ಪ್ಲಾಸ್ಟಕ್ ವಸ್ತುಗಳು, ಆಹಾರ ಪದಾರ್ಥಗಳು ಮುಂತಾದ ಅನೇಕ ಪದಾರ್ಥಗಳ ಕಾರ್ಖಾನೆಗಳಿವೆ. == ಹವಾಮಾನ == ಕಲೂಗವು ಸಮಶೀತೋಷ್ಣ ಹವಾಮಾನವನ್ನು ಹೊಂದಿದೆ.ಬೆಚ್ಚಗಿನ ಮತ್ತು ತೇವಾಂಶಭರಿತ ಬೇಸಗೆ ಮತ್ತು ದೀರ್ಘ ಹಿಮಾಚ್ಛಾದಿತ ಚಳಿಗಾಲ ಇಲ್ಲಿಯ ಚೈಶಿಷ್ಠ್ಯ. == ಪ್ರೇಕ್ಷಣೀಯ ಸ್ಥಳಗಳು == ಇಲ್ಲಿ ೧೮ ಮತ್ತು ೧೯ನೆಯ ಶತಮಾನಗಳ ಅನೇಕ ಅಪೂರ್ವ ಕಟ್ಟಡಗಳಿವೆ. ೧೭೭ರಲ್ಲಿ ನಿರ್ಮಾಣವಾದ ರಂಗಮಂದಿರವೂ ವಸ್ತುಸಂಗ್ರಹಾಲಯವೂ ಮುಖ್ಯವಾದವು. == ಬಾಹ್ಯ ಸಂಪರ್ಕಗಳು == () () 2009-01-29 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==