ಕಲ್ಲಡ್ಕ ಭಾರತದ ಕರ್ನಾಟಕ ರಾಜ್ಯದ ಬಂಟ್ವಾಳ ತಾಲ್ಲೂಕಿನಲ್ಲಿರುವ ಒಂದು ಹಳ್ಳಿ. ಇದು ಕೆಟಿ (ಕಲ್ಲಡ್ಕ ಟೀ ಅಥವಾ ಕಡಕ್ ಟೀ) ಗೆ ಪ್ರಸಿದ್ಧವಾಗಿದೆ. ಕಲ್ಲಡ್ಕ ಮಂಗಳೂರು ನಗರದಿಂದ ಪೂರ್ವಕ್ಕೆ ೩೨ ಕಿ.ಮೀ. ದೂರದಲ್ಲಿದೆ. ಇದು ಸಮುದ್ರ ಮಟ್ಟದಿಂದ ೨೩ ಮೀ. ಎತ್ತರದಲ್ಲಿದೆ. ಇದು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಒಂದು ಗ್ರಾಮ. ಕಲ್ಲಡ್ಕಕ್ಕೆ ಹತ್ತಿರದ ರೈಲು ನಿಲ್ದಾಣ ಬಂಟ್ವಾಳದಲ್ಲಿದೆ. == ಉಲ್ಲೇಖ ==