ಕಸೊಲ್ ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲಿರುವ ಕುಲ್ಲು ಜಿಲ್ಲೆಯಲ್ಲಿರುವ ಒಂದು ಗ್ರಾಮ. ಇದು ಪಾರ್ವತಿ ಕಣಿವೆಯ, ಪಾರ್ವತಿ ನದಿ ದಂಡೆಯಲ್ಲಿ [ಭುನ್ಟರ್]ನಿಂದ ಮನಿಕರನ್ಗೆ ಹೊಗುವ ದಾರಿಯಲ್ಲಿ ನೆಲೆಗೊಂಡಿದೆ. ಕುಲ್ಲುನಿಂದ ೪೨ಕಿ.ಮಿ. ಹಾಗು ಭುನ್ಟರ್ ನಿಂದ ೩೦ ಕಿಮೀ ದೂರದಲ್ಲಿ ದೂರದಲ್ಲಿರುವ ಈ ಜಾಗವು ಸಮುದ್ರ ಮಟ್ಟದಿಂದ ೧೬೪೦ ಮೀ ಎತ್ತರದಲ್ಲಿದೆ. ಕಸೊಲ್ ಗ್ರಾಮವು ತೋಶ್ ಗ್ರಾಮಕ್ಕೆ ಭೇಟಿ ನೀಡುವ ಪ್ರವಾಸಿಗರಲ್ಲಿ ಹೆಚ್ಚು ಪ್ರಸಿದ್ಧಿ. ಈ ಗ್ರಾಮವು ಹೆಚ್ಚು ಇಸ್ರೇಲ್ ಪ್ರವಾಸಿಗಾರನ್ನು ಆಕರ್ಷಿಸುತ್ತಿದೆ. == ಸಾರಿಗೆ == ಕಸೊಲ್ ಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಭುನ್ಟರ್ ಪಟ್ಟಣದಲ್ಲಿರುವ ಕುಲ್ಲು-ಮನಲಿ ವಿಮಾನ ನಿಲ್ದಾಣ(: , : ). ಇದು ಮನಾಲಿಗೆ ಸಂಪರ್ಕ ಕಲ್ಪಿಸುವ ಹತ್ತಿರದ ಸಾರಿಗೆ ನಿಲ್ದಾಣವು ಕೂಡ. ಕಸೋಲ್ ತಲುಪಲು ಮೊದಲು ಭುನ್ಟರ್ ಪಟ್ಟಣ ತಲುಪಿ ಅಲ್ಲಿಂದ ಬೆಳಿಗ್ಗೆ ೮ - ಸಂಜೆ ೬ ರ ವರೆಗೂ ಪ್ರತಿ ಘಂಟೆಗೊಮ್ಮೆ ಲಭ್ಯವಿರುವ ಸಾರಿಗೆ ಸೌಲಭ್ಯ ಉಪಯೋಗಿಸಿಕೊಳ್ಳಬಹುದು. ಆದಾಗ್ಯೂ, ಸ್ಥಳೀಯ ಟ್ಯಾಕ್ಸಿ ಸೇವೆ ಸದಾ ಕಾಲ ಲಭ್ಯವಿರುತ್ತದೆ. ಆ ಪ್ರದೇಶದಲ್ಲಿ ಕಸೋಲ್ ಪ್ರಸಿದ್ಧ ಪ್ರವಾಸಿ ತಾಣ ಆಗಿರುವುದರಿಂದ, ಹತ್ತಿರದ ಮನಾಲಿ ನಗರದಿಂದಲು ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. == ಹತ್ತಿರದ ವೀಕ್ಷಣಾ ತಾಣಗಳು == ಪಾರ್ವತಿ ನದಿ ಮಣಿಕರನ್ ಗುರುದ್ವಾರ ತೋಶ್ ಮಲಾನ ಖೀರ್ ಗಂಗಾ == ಹಬ್ಬ == ಪ್ರತಿ ಹೊಸ ವರ್ಷದಂದು,ಕಸೋಲ್ ನಲ್ಲಿ ನಡೆಯುವ ಕಸೋಲ್ ಸಂಗೀತ ಹಬ್ಬ ಬಹಳ ಪ್ರಸಿದ್ಧವಾದದ್ದು. ಈ ಹಬ್ಬವನ್ನು ನೋಡಲು ಪ್ರವಾಸಿಗರು ವಿಶ್ವದೆಲ್ಲೆಡೆ ಇಂದ ಬರುತ್ತಾರೆ. == ಗ್ಯಾಲರಿ == == ಉಲ್ಲೇಖನಗಳು ==