ಕಾಂಗರೂ ಮ್ಯಾಕ್ರೊ ಪೋಡಿಡೀ ಕುಟುಂಬದ (ಮ್ಯಾಕ್ರೊಪಾಡ್ ಎಂದರೆ ದೊಡ್ಡ ಪಾದ) ಒಂದು ಹೊಟ್ಟೆಚೀಲದ ಪ್ರಾಣಿ. ಸಾಮಾನ್ಯ ಬಳಕೆಯಲ್ಲಿ ಈ ಪದವನ್ನು ಈ ಕುಟುಂಬದ ಅತಿ ದೊಡ್ಡ ಪ್ರಜಾತಿಗಳನ್ನು, ವಿಶೇಷವಾಗಿ ಮ್ಯಾಕ್ರೊಪಸ್ ಜಾತಿಯವುಗಳನ್ನು, ಅಂದರೆ ಕೆಂಪು ಕಾಂಗರೂ, ಆಂಟಿಲೋಪಿನ್ ಕಾಂಗರೂ, ಪೌರ್ವಾತ್ಯ ಬೂದು ಕಾಂಗರೂ ಮತ್ತು ಪಾಶ್ಚಾತ್ಯ ಬೂದು ಕಾಂಗರೂವನ್ನು, ವಿವರಿಸಲು ಬಳಸಲಾಗುತ್ತದೆ. ಈ ಕುಟುಂಬವು ವಾಲಬಿಗಳು, ವೃಕ್ಷ ಕ್ಯಾಂಗರೂಗಳು, ವಾಲರೂಗಳು, ಪ್ಯಾಡಿಮೆಲನ್‍ಗಳು ಮತ್ತು ಕ್ವಾಕಾ, ಎಲ್ಲ ಸೇರಿ ಕೆಲವು ೬೩ ಜೀವಂತ ಪ್ರಜಾತಿಗಳನ್ನು ಒಳಗೊಂಡಂತೆ, ಅನೇಕ ಚಿಕ್ಕದಾದ ಪ್ರಜಾತಿಗಳನ್ನು ಕೂಡ ಒಳಗೊಳ್ಳುತ್ತದೆ. == ವೈಜ್ಞಾನಿಕ ವರ್ಗೀಕರಣ == ಮ್ಯಾಕ್ರೋ ಪೋಡಿಡೀ ಕುಟುಂಬಕ್ಕ ಸೇರಿದ್ದು,ಮ್ಯಾಕ್ರೋಪಸ್ ಪಂಗಡಕ್ಕೆ ಸೇರಿದೆ.ಮುಖ್ಯವಾಗಿ ನಾಲ್ಕು ಪ್ರಭೇದಗಳನ್ನು ಗುರುತಿಸಲಾಗಿದೆ. == ಶಾರೀರಿಕ ಲಕ್ಷಣಗಳು == ನೆಗೆಯಲು ಅನುಕೂಲವಾಗುವ ಬಲಿಷ್ಠವಾದ,ಉದ್ದವಾದ ಹಿಂಗಾಲುಗಳನ್ನು ಹೊಂದಿವೆ.ಉದ್ದ ಬಾಲವಿರುತ್ತದೆ.ಮರಿಗಳನ್ನು ಹೊತ್ತು ಸಾಗಿಸಲು ಹೊಟ್ಟೆಯಲ್ಲಿ ಚೀಲಗಳಿರುವುದು ಇದರ ಮುಖ್ಯ ವೈಶಿಷ್ಟ್ಯ. ಚೀಲದೊಳಗೆ ನಾಲ್ಕು ಮೊಲೆತೊಟ್ಟುಗಳಿದ್ದು ಮರಿಗಳಿಗೆ ಹಾಲೂಡಿದಲು ಅನುಕೂಲವಾಗಿದೆ. == ಭೌಗೋಳಿಕ ವಿತರಣೆ == ಕಾಂಗರೂಗಳು ಆಸ್ಟ್ರೇಲಿಯಾ ಖಂಡಕ್ಕಷ್ಟೇ ಸೀಮಿತವಾದ ಪ್ರಾಣಿ.ವೃಕ್ಷ ಕಾಂಗರೂವಿನ ಒಂದು ಪ್ರಭೇದ ಮಾತ್ರ ಪಾಪುವ ನ್ಯೂಗಿನಿಯಲ್ಲಿ ಕಂಡುಬರುತ್ತದೆ. == ಬಾಹ್ಯ ಸಂಪರ್ಕಗಳು == 2008-12-01 ವೇಬ್ಯಾಕ್ ಮೆಷಿನ್ ನಲ್ಲಿ. ಟೆಂಪ್ಲೇಟು: