ಕಾಂತಾಮಣಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೬೧ ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಕುಂತಳಮ್ ಎಂದು ಹೆಸರಿಸಿದ್ದಾರೆ. . == ರಾಗ ಸ್ವರೂಪ ಮತ್ತು ಲಕ್ಷಣ == ಇದು ಹನ್ನೊಂದನೆಯ ರುದ್ರ ಚಕ್ರದ ಮೊದಲನೆಯ ರಾಗ.ಇದರ ನೆನೆಪಿನ ಹೆಸರು ರುದ್ರ-ಪಾ ನೆನಪಿನ ನುಡಿಕಟ್ಟು:ಸ ರಿ ಗು ಮಿ ಪ ಧ ನ ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ. ಆರೋಹಣ ಸ ರಿ೨ ಗ೩ ಮ೨ ಪ ದ೧ ನಿ೧ ಸ ಅವರೋಹಣ ಸ ನಿ೧ ದ೧ ಪ ಮ೨ ಗ೩ ರಿ೨ ಸ ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಅಂತರ ಗಾಂಧಾರ,ಪ್ರತಿಮಧ್ಯಮ,ಪಂಚಮ,ಶುದ್ಧ ಧೈವತಮತ್ತು ಶುದ್ಧ ನಿಷಾಧ.ಇದು ೨೫ನೆಯ ಮೇಳಕರ್ತ ರಾಗವಾದ ಮಾರರಂಜನಿಗೆ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ. == ಜನಪ್ರಿಯ ರಚನೆಗಳು == ಕಾಂತಾಮಣಿ ರಾಗದಲ್ಲಿ ಹೆಚ್ಚು ಪ್ರಚಲಿತವಿರುವ ಕೆಲವು ಕೃತಿಗಳು ಶ್ರೀ ಸುಗಂಧಿ ಕುಂತಳಾಂಬಿಕೆ- ಮುತ್ತುಸ್ವಾಮಿ ದೀಕ್ಷಿತರು ನಾದಸುಖಮ್- ಕೊಟೀಶ್ವರ ಅಯ್ಯರ್ ಭುವನೇಶ್ವರಿ ಪಾಹಿ- ಎಮ್.ಬಾಲಮುರಳಿ ಕೃಷ್ಣ ಪಾಲಿಂತುವೊ- ತ್ಯಾಗರಾಜ == ಸಂಬಂಧಿತ ರಾಗಗಳು == ಗ್ರಹಭೇದಮ್ ಸೂತ್ರವನ್ನು ಕಾಂತಾಮಣಿ ರಾಗಕ್ಕೆ ಅನ್ವಯಿಸಿದಾಗ ಮಾನವತಿ ಎಂಬ ಒಂದು ರಾಗ ದೊರೆಯುತ್ತದೆ. == ಉಲ್ಲೇಖಗಳು ==