ಕಾಂಭೋಜಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೨೮ನೇ ರಾಗ ಹರಿಕಾಂಭೋಜಿ ಜನ್ಯ. ಇದು ಷಾಡವ ಸಂಪೂರ್ಣ ರಾಗವಾಗಿದೆ. ಇದು ಶುಭಕರವಾದ ರಾಗ ಹಾಗಾಗಿ ಸಾಮಾನ್ಯವಾಗಿ ಈ ರಾಗವನ್ನು ವಾದ್ಯಗೋಷ್ಠಿಯನ್ನು ಪ್ರಾರಂಭ ಮಾಡುವಾಗ ನುಡಿಸುತ್ತಾರೆ. == ರಾಗ ಲಕ್ಷಣ ಮತ್ತು ಸ್ವರೂಪ == ರಂಜನೀಯವಾದ ರಕ್ತಿ ರಾಗ, ವರ್ಜ್ಯ ರಾಗ ಭಾಷಾಂಗ ರಾಗ. ತ್ರಿಸ್ಥಾಯಿಯಲ್ಲಿಯೂ ಸಂಚಾರವಿರುವ ಪ್ರಸಿದ್ಧ ರಾಗ. ಈ ರಾಗದ ಆರೋಹಣ ಮತ್ತು ಅವರೋಹಣದ ಸ್ವರಗಳು ಈ ಕೆಳಗಿನಂತಿವೆ. ಆರೋಹಣ ಸ ರಿ೨ ಗ೩ ಮ೧ ಪ ದ೨ ಸ' ಅವರೋಹಣ ಸ' ನಿ೨ ದ೨ ಪ ಮ೧ ಗ೩ ರಿ೨ ಸ ಸ ನಿ ಪ ಎಂಬ ಸಂಚಾರ ಬಂದಾಗ ಕಾಕಲಿನಿಷಾದ ಪ್ರಯೋಗವಿದೆ. ಆರೋಹಣದಲ್ಲಿ ನಿಷಾದ ವರ್ಜ್ಯ. == ಜನಪ್ರಿಯ ರಚನೆಗಳು == ಈ ರಾಗದಲ್ಲಿರುವ ಜನಪ್ರಿಯ ರಚನೆಗಳು . == ಉಲ್ಲೇಖಗಳು == 1) ಕರ್ನಾಟಕ ಸಂಗೀತ : ಮಾಧ್ಯಮಿಕ ಹಂತ - ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ.