ಕಾಕಟೂ ಕಾಕಟೂಡೀ ಪಂಗಡದ ಸಿಟಾಸಿಟೀ ಕುಟುಂಬದ ಗಿಳಿಗಳ ೨೫ ಪ್ರಭೇದಕ್ಕೆ ಸೇರಿದ ಹಕ್ಕಿಗಳು.ಇವುಗಳು ಮುಖ್ಯವಾಗಿ ಆಸ್ಟೇಲಿಯ ಮತ್ತು ಏಷಿಯಾ ಖಂಡಗಳ ನಿವಾಸಿಗಳು. == ವೈಜ್ಞಾನಿಕ ವರ್ಗೀಕರಣ == ಸಿಟಾಸಿಫಾರ್ಮಿಸ್ಗಣ ಮತ್ತು ಸಿಟಾಸಿಟೀ ಕುಟುಂಬಕ್ಕೆ ಸೇರಿದೆ. == ಭೌಗೊಳಿಕ ಹಂಚಿಕೆ == ಇವುಗಳು ಫಿಲಿಪೈನ್ಸ್, ಇಂಡೋನೇಷಿಯಾದ ಕೆಲವು ದ್ವೀಪಗಳು,ನ್ಯೂ ಗಿನಿಯ,ಸೊಲೋಮನ್ ದ್ವೀಪಗಳು ಮತ್ತು ಆಸ್ತ್ರೇಲಿಯಾಗಳಲ್ಲಿ ಹರಡಿಕೊಂಡಿವೆ. == ಲಕ್ಷಣಗಳು == ಕಾಕಟೂಗಳು ತನ್ನ ಆಕರ್ಷಕ ಗರಿಗಳಿಂದ ಇತರ ಗಿಳಿಗಳಿಂದ ವಿಭಿನ್ನವಾಗಿವೆ.ಬಾಲ ಅಷ್ಟೇನೂ ಆಕರ್ಷಕವಾಗಿರುವುದಿಲ್ಲ. ಸಾಮಾನ್ಯವಾಗಿ ಬಿಳಿ,ಕಂದು ಮತ್ತು ಕಪ್ಪು ಬಣ್ಣಗಳಿಂದ ಕೂಡಿರುತ್ತದೆ.ಇತರ ಗಿಳಿಗಳಿಗಿಂತ ಗಾತ್ರದಲ್ಲಿ ದೊಡ್ಡದಿರುತ್ತವೆ.ಸುಮಾರು ೩೦ ರಿಂದ ೬೦ ಸೆಂಟಿಮೀಟರ್ ಉದ್ದವಿದ್ದು,ಸುಮಾರು ೩೦೦ ರಿಂದ ೧೨೦೦ ಗ್ರಾಂ.ಗಳಷ್ಟು ಭಾರವಿರುತ್ತವೆ .ಉಳಿದ ಗಿಳಿಗಳಂತೆ ಕಾಕಟೂಗಳಿಗೆ ಗಿಡ್ಡ ಕಾಲುಗಳು,ಬಲಿಷ್ಠ ಉಗುರುಗಳಿವೆ. == ಪ್ರಭೇದಗಳು == ಕಾಕಟೂಗಳಲ್ಲಿ ೪೪ ಪ್ರಭೇದಗಳನ್ನು ಗುರುತಿಸಲಾಗಿದೆ. == ಬಾಹ್ಯ ಸಂಪರ್ಕಗಳು == 2009-07-01 ವೇಬ್ಯಾಕ್ ಮೆಷಿನ್ ನಲ್ಲಿ. . 2016-05-31 ವೇಬ್ಯಾಕ್ ಮೆಷಿನ್ ನಲ್ಲಿ. – 2016-04-25 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==