ಕೋರ್ವಿಡೇ ಪಕ್ಷಿ ಸಂತತಿ ಕುಲಕ್ಕೆ ಸೇರಿದ ಒಂದು ಹಕ್ಕಿ. ಈ ಹಕ್ಕಿಗಳು ದಕ್ಷಿಣ ಅಮೇರಿಕಾದ ದಕ್ಷಿಣದ ಭಾಗ ] ಬಿಟ್ಟರೆ, ಜಗತ್ತಿನ ಮತ್ತೆಲ್ಲ ಕಡೆಗಳಲ್ಲೂ ಕಾಣಸಿಗುತ್ತವೆ. ಅದರಲ್ಲಿಯೂ ದಕ್ಷಿಣ ಅಮೇರಿಕಾ, ಮಧ್ಯ ಅಮೇರಿಕಾ, ಯೂರೋಪ್ ಮತ್ತು ಏಷಿಯಾಗಳಲ್ಲಿ ಇವು ಪ್ರಧಾನವಾಗಿ ಕಂಡು ಬರುತ್ತವೆ. ಕಾಗೆಗಳಲ್ಲಿ ಕ್ರೋ (ಭಾರತದ ಕಾಗೆ), ರೂಕ್, ಜಾಕ್ ಡಾ, ಜೇ, ಮ್ಯಾಗ್ ಪೈ, ಟ್ರೀ ಪೈ ಇತ್ಯಾದಿ ಒಟ್ಟು ನೂರಿಪ್ಪತ್ತು ಪ್ರಭೇದಗಳಿವೆ. ಪ್ರತಿ ಖಂಡದಲ್ಲಿ ಸುಮಾರು ಹತ್ತು ಪ್ರಭೇದಗಳು ಕಾಣಸಿಕ್ಕರೆ, ಇಥಿಯೋಪಿಯಾ ದ ಮೇಲ್ಭಾಗದ ಪಕ್ಷಿಗಳ ತಾಣ ರೆವೆನ್ ನಲ್ಲಿ ೪೦ಕ್ಕೂ ಹೆಚ್ಚಿನ ಪ್ರಬೇಧಗಳು ಇಲ್ಲಿ ವಾಸಿಸುತ್ತವೆ. ಕಾಗೆಗಳನ್ನು ಹಕ್ಕಿ ಜಗತ್ತಿನಲ್ಲಿಯೇ ಅತಿ ಬುದ್ಧಿವಂತ ಪಕ್ಷಿ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಇವು ಪ್ರಾಣಿಜಗತ್ತಿನಲ್ಲಿಯೂ ಅತಿ ಬುದ್ಧಿವಂತ ಪ್ರಾಣಿಗಳಲ್ಲಿ ಒಂದು. ಇದು ವರ್ಷವಿಡೀ ಕಾಣಲು ಸಿಗುವ ಪಕ್ಷಿ. == ಹೆಚ್ಚಿನ ವಿವರಗಳು == ಸಾಧಾರಣವಾಗಿ ಕಾಗೆಗಳ ಬಣ್ಣ ಕಪ್ಪು. ಕನ್ನಡದಲ್ಲಿ ಕಪ್ಪು ಬಣ್ಣಕ್ಕೆ ಕಾಗೆಯ ಉದಾಹರಣೆ ಕೊಡುವುದು ಸಾಮಾನ್ಯ. ಆದರೆ ಕರಿ/ ಬಿಳಿ, ನೀಲಿ/ಹಸಿರು, ಅಥವಾ ಕಂದು ಬಣ್ಣದ ಕಾಗೆಗಳೂ ಇವೆ (ಉದಾ: ಮ್ಯಾಗ್ ಪೈ, ಟ್ರೀ ಪೈ). ಜೇ ಎನ್ನುವ ಪ್ರಭೇದದ ಬಣ್ಣ ನೀಲಿ/ಬಿಳಿ. ಕಾಗೆಗಳು ಬುದ್ಧಿವಂತ ಪಕ್ಷಿಗಳು. ಇವುಗಳಲ್ಲಿ ಕೆಲವು ಪ್ರಭೇದಗಳು ಕಡ್ಡಿ, ಟೊಂಗೆಗಳಿಂದ ಗೂಡು ಕಟ್ಟಬಲ್ಲವು. ಮ್ಯಾಗ್ ಪೈ ಕಾಗೆ ಕನ್ನಡಿಯಲ್ಲಿನ ತನ್ನ ಚಿತ್ರವನ್ನು ಪ್ರತಿಫಲನ ಎಂದು ಗುರುತಿಸಬಲ್ಲದು. ಬಹುತೇಕ ಕಾಗೆಗಳು ಜನವಸತಿಗೆ ಸಮೀಪವಾಗಿ ವಾಸ ಮಾಡುತ್ತವೆ. ಟ್ರೀ ಪೈ ಇತ್ಯಾದಿ ಕೆಲವು ಪ್ರಭೇದಗಳು ಕಾಡಿನಲ್ಲಿ ವಾಸಿಸುತ್ತವೆ. ಇವು ಸಾಧಾರಣವಾಗಿ ಇದ್ದಲ್ಲೇ ಇರುವ ಹಕ್ಕಿಗಳಾದರೂ, ಬೇಸಿಗೆ ಮತ್ತು ಚಳಿಗಾಲಗಳಲ್ಲಿ ವಲಸೆ ಹೋಗುವ ಪ್ರವೃತ್ತಿ ಯೂರೋಪ್, ಉತ್ತರ ಅಮೇರಿಕಾ ಮತ್ತು ಉತ್ತರ ಏಷಿಯಾದ ಕೆಲ ಪ್ರಭೇದಗಳಲ್ಲಿ ಕಂಡು ಬರುತ್ತದೆ. ಕಾಗೆಗಳು ಸಮೂಹಜೀವಿಗಳು. ಬೆಳಗಿನ ಹಾಗೂ ಸಂಜೆಯ ಹೊತ್ತು ಸದ್ದು ಮಾಡುತ್ತಾ ಗುಂಪುಗೂಡುವುದು ನಮ್ಮ ಪರಿಸರದಲ್ಲಿ ಸಾಧಾರಣವಾಗಿ ಕಾಣಸಿಗುತ್ತದೆ. == ಆಹಾರ ಪದ್ಧತಿ == ಕಾಗೆಗಳ ಆಹಾರ ವೈವಿಧ್ಯಮಯವಾದದ್ದು. ಹಕ್ಕಿಗೂಡುಗಳಿಂದ ಹಕ್ಕಿ ಮರಿಗಳು, ಮೊಟ್ಟೆಗಳು, ಇಲಿಗಳೇ ಮೊದಲಾದ ಸಣ್ಣ ಪ್ರಾಣಿಗಳು ಹಾಗೂ ಇತರ ಸತ್ತ ಪ್ರಾಣಿಗಳು, ತರಕಾರಿಗಳು, ತ್ಯಾಜ್ಯವಸ್ತುಗಳು ಇವುಗಳ ಆಹಾರದಲ್ಲಿ ಸೇರುತ್ತವೆ. ಇವು ಹಕ್ಕಿ ಮರಿಗಳನ್ನು, ಮೊಟ್ಟೆಗಳನ್ನು ತಿನ್ನುವುದರಿಂದ ಇತರೆ ಹಕ್ಕಿಗಳು ಗುಂಪುಗೂಡಿ ಕಾಗೆಗಳನ್ನು ಓಡಿಸುವುದನ್ನು ಕಾಣಬಹುದು. ಹೊಲಗಳಲ್ಲಿ ಇವು ತರಕಾರಿ ಮತ್ತು ಧಾನ್ಯಗಳನ್ನು ತಿನ್ನುವುದನ್ನು ತಪ್ಪಿಸಲು ರೈತರು ಹುಲ್ಲಿನಿಂದ ಮಾಡಿದ ಮನುಷ್ಯ ರೂಪದ ಬೆರ್ಚಪ್ಪಗಳನ್ನು ನಿಲ್ಲಿಸುತ್ತಾರೆ. ಇಂಗ್ಲೀಷಿನಲ್ಲಿ ಇದಕ್ಕೆ ಎಂದೇ ಹೆಸರಿದೆ. == ಕುಟುಂಬ ಪದ್ಧತಿ == ಕಾಗೆಗಳು ಎಲ್ಲಾ ತರಹದ ಮರಗಳಲ್ಲಿಯೂ ಗೂಡು ಕಟ್ಟುತ್ತವೆ. ಟೊಂಗೆಗಳನ್ನು ಉಪಯೋಗಿಸಿ ಗೂಡು ತಯಾರಿಸುತ್ತವೆ. ಕಾಗೆ ೩-೮ ಮೊಟ್ಟೆಗಳನ್ನು ಇಡುತ್ತದೆ. ಮರಿಗಳನ್ನು ತಂದೆ ಹಾಗೂ ತಾಯಿ ಕಾಗೆ ಎರಡೂ ಸಲಹುತ್ತವೆ. === ಬುದ್ಧಿಶಕ್ತಿ === ಗುಂಪಿನಲ್ಲಿದ್ದಾಗ ಕಾಗೆಗಳು ಅತ್ಯಂತ ಹೆಚ್ಚು ಜಾಣ್ಮೆಯನ್ನು ಪ್ರದರ್ಶಿಸುತ್ತವೆ ಎನ್ನಲಾಗುತ್ತದೆ.(ಉದಾಹರಣೆಗೆ ಈಸೋಪನ ಕಥೆಗಳಲ್ಲಿ ಬರುವ ಕಾಗೆ ಮತ್ತು ಗಡಿಗೆ(ಹೂಜಿ) ಕಥೆ). ಕಾಗೆಗಳು ಮತ್ತು ರಾವೆನ್ ಗಳು ಜಾಣ್ಮೆಯ ಪರೀಕ್ಷೆಯಲ್ಲಿ ಮೊದಲ ಶ್ರೇಣಿಯಲ್ಲಿ ನಿಲ್ಲುತ್ತವೆ. ಇಸ್ರೇಲಿನ ಕಾಡು ಕಾಗೆಗಳು ಮೀನುಗಳ ಬೇಟೆಯಾಡಲು ಕೆಲವು ಬಾರಿ ರೊಟ್ಟಿ ತುಣುಕುಗಳನ್ನು ಬಳಸುತ್ತವೆ. ಕಾಗೆಗಳು ವಾಯುಮಂಡಲದ ಮಧ್ಯೆ ಹಾರುವಾಗ ಸಹ ತಮ್ಮ ಸಮತೋಲನ ಕಳೆದುಕೊಳ್ಳುವುದಿಲ್ಲ. ಕಾಗೆಯ ಒಂದು ಪ್ರಭೇದ ನಿವ್ ಕ್ಯಾಲೆಡೊನಿಯನ್ ಕಾಗೆಯ ಬಗ್ಗೆ ತೀವ್ರವಾಗಿ ಅಧ್ಯಯನ ನಡೆಯುತ್ತಿದ್ದು ಅದು ತನ್ನ ಪ್ರತಿನಿತ್ಯದ ಆಹಾರ ಹುಡುಕಲು ಉಪಯೋಗಿಸುವ ಸಲಕರಣೆ ಸಾಧನಗಳ ಬಗ್ಗೆ ಕುತೂಹಲಕಾರಿ ಅಂಶಗಳನ್ನು ಪರೀಕ್ಷಿಸಲಾಗುತ್ತಿದೆ. ಈ ಕಾಗೆಗಳು "ಚೂರಿಗಳ "ರೂಪದ ಒರಟು ಎಲೆಗಳು ಹಾಗೂ ಬಿರುಸು ಹುಲ್ಲುಗಳನ್ನು ಬಳಸುವುದು ಕಂಡು ಬಂದಿದೆ. ಇನ್ನೊಂದು ಇವುಗಳ ಜಾಣ್ಮೆ ಎಂದರೆ ಗಡುಸಾದ ಕಾಯಿಗಳನ್ನು ರಸ್ತೆಯ ಮೇಲೆ ಬೀಳಿಸಿ, ಅದು ಕಾರು ಅಥವಾ ಇನ್ನ್ಯಾವುದೇ ವಾಹನ ಹಾಯ್ದು ಪುಡಿ ಮಾಡುವುದನ್ನು ಕಾಯುವುದು. ನಂತರ ಪಾದಚಾರಿಗಳ ಹಸಿರು ಲೈಟ್ ಹತ್ತಿದ ನಂತರ ಅದನ್ನು ತನ್ನ ಸ್ಥಾನಕ್ಕೆ ಕೊಂಡೊಯ್ಯುವುದು. ಇಂಗ್ಲೆಂಡಿನ ಯುನಿವರ್ಸಿಟಿ ಆಫ್ ಆಕ್ಸ್ ಫರ್ಡ್ ನ ಸಂಶೋಧಕರು ಅಕ್ಟೋಬರ್ ೫, ೨೦೦೭ ರಲ್ಲಿ ನಿವ್ ಕ್ಯಾಲೆಡೊನಿಯನ್ ಕಾಗೆಗಳ ಬಾಲದಲ್ಲಿ ಸಣ್ಣ ವಿಡಿಯೊ ಕ್ಯಾಮರಾವೊಂದನ್ನು ಅಳವಡಿಸಿ ಮಾಡಿದ ಪ್ರಯೋಗದ ಪ್ರಕಾರ, ಈ ಕಾಗೆಗಳು ಹಳೆಯ ಕಾಲದ್ದಕ್ಕಿಂತ ವಿಶಾಲ ವಿಧದ ಸಲಕರಣೆಗಳನ್ನು ಕಿತ್ತುಕೊಳ್ಳಲು, ಮೆದುಗೊಳಿಸಲು ಮತ್ತು ಟೊಂಗೆಗಳನ್ನು ಮಣಿಸಲು ಉಪಯೋಗಿಸುತ್ತವೆ. ಇದರಿಂದ ವಿವಿಧ ಆಹಾರ ಪಡೆಯಲು ಅನುಕೂಲವಾಗುತ್ತದೆ. ಕ್ವೀನ್ಸ್ ಲ್ಯಾಂಡ್ ಮತ್ತು ಆಸ್ಟ್ರೇಲಿಯಾದಲ್ಲಿನ ಕಾಗೆಗಳಿಗೆ ವಿಷಕಾರಿಯಾದ ನೆಲಗಪ್ಪೆಯನ್ನು ಹೇಗೆ ತಿನ್ನಬೇಕೆಂಬ ಸಂಪೂರ್ಣ ಅರಿವಿದೆ. ನೆಲಗಪ್ಪೆಯ ಗಂಟಲಿನ ತೆಳುಚರ್ಮವನ್ನು ಹುಷಾರಾಗಿ ಬಗೆದು, ಅದರಲ್ಲಿನ ವಿಷಕಾರಿಯಲ್ಲದ ಕರುಳನ್ನು ತಿನ್ನುತ್ತವೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಯ ನಡುವಿನ ಭಿನ್ನತೆ, ಅಂತರವನ್ನು ಕಂಡು ಹಿಡಿಯಲು ಕಾಗೆಗಳು ಸಮರ್ಥವಾಗಿವೆ. == ಸಿಸ್ಟಮ್ಯಾಟಿಕ್ಸ್(ವಿಭಿನ್ನತೆಯ ವಿಧಾನಗಳು) == ಇದರ ವಂಶವಾಹಿನಿಯನ್ನು ಲಿನ್ನಾಯುಸ್ ಎಂಬಾತ ತನ್ನ ೧೮ ನೆಯ ಶತಮಾನದ ಕೃತಿ ಸಿಸ್ಟೆಮಾ ನೇಚರಾ ಎಂಬುದರಲ್ಲಿ ವಿವರಿಸಿದ್ದಾನೆ. ಈ ಹೆಸರನ್ನು ಲ್ಯಾಟಿನ್ ನ ಕೊರ್ವಸ್ ಅಂದರೆ "ದೊಡ್ಡ ಕಾಗೆ" ಎಂಬುದರಿಂದ ಪಡೆಯಲಾಗಿದೆ. ಇದರ ವಿವಿಧ ಜೀವಿಗಳು ಅಂದರೆ ಸಾಮಾನ್ಯ ದೊಡ್ಡ ಕಾಗೆ (ಕೊರ್ವಸ್ ಕೊರಾಕ್ಸ್ ); ಇವುಗಳಲ್ಲದೇ ಇನ್ನು ಕೆಲವನ್ನು ಇದರಲ್ಲಿ ಅಳವಡಿಸಲಾಗಿದೆ. ಕ್ಯಾರಿಯಾನ್ ಕ್ರೌ ( ಸಿ .ಕೊರೊನೆ), ದಿ ಹೂಡೆಡ್ ಕ್ರೌ(. ಕೊರ್ನಿಕ್ಸ್), ಚಿಲಿಪಿಲಿಗುಟ್ಟವ ರುಕ್(. ಫ್ರುಜಿಲೆಗಸ್ ) ಮತ್ತು ಜಾಕ್ ಡಾವ್ (. ಮೊನೆಡುಲಾ ) ಇತ್ಯಾದಿ. ಸದ್ಯ ಈ ಜಾತಿಯ ಪಕ್ಷಿ ಉತ್ತಮ ಪದ್ದತಿಯ ಅಧ್ಯಯನಗಳು ಈ ನಿಟ್ಟಿನಲ್ಲಿ ನಡೆದಿಲ್ಲ. ವ್ಯಾವಹಾರಿಕವಾಗಿ ಹತ್ತಿರದ ಪ್ರದೇಶಗಳಲ್ಲಿನ ಕಾಗೆ ಜಾತಿಯ ಪಕ್ಷಿಗಳು ಒಂದೇ ತೆರನಾಗಿರುತ್ತವೆ. ಆದರೆ ಆಯಾ ಪ್ರದೇಶಗಳ ಬಗ್ಗೆ ಕೂಲಂಕಷವಾಗಿ ನೋಡಿದಾಗ ಹಾಗು ಕಾಣುವುದು ಅಪರೂಪ. ಇದು ಸಮಂಜಸವಾಗಿಲ್ಲ ಎನ್ನಬಹುದು. ಉದಾಹರಣೆಗೆ ಕಾರಿಯನ್ /ಕೊಲಾರ್ಡ್ /ಹೌಸ್ ಕ್ರೊ ಕಾಂಪ್ಲೆಕ್ಸ್ ಒಂದೊಕ್ಕೊಂದು ಸಂಬಂಧಿಸಿದೆಯಾದರೂ ಯಾವಾಗಲೂ ಇದೇ ಪರಿಸ್ಥಿತಿಯನ್ನು ಆಸ್ಟ್ರ್ತ್ಫೇಲಿಯನ್ /ಮೆಲಾನಿಸಿಯನ್ ಬಗೆಗೆ ನಾವು ಕಾಣಲು ಸಾಧ್ಯವಿಲ್ಲದಾಗಿದೆ. ಇದಲ್ಲದೇ ಕೆಲವು ಪಕ್ಷಿಗಳು ಒಂದೇ ತೆರನಾಗಿ ಕಂಡರೂ ಅವುಗಳ ಗೋಚರತೆ ಮತ್ತು ಆಕಾರ ಗುಣಲಕ್ಷಣ ಮತ್ತು ಅವುಗಳ ಗಾತ್ರದ ಶ್ರೇಣಿಗಳಲ್ಲಿ ವ್ಯತ್ಯಾಸ ಕಾಣುತ್ತದೆ. ಆಸ್ಟ್ರೇಲಿಯಾದಲ್ಲಿ ಇಂತಹ ಒಟ್ಟು ಐದು ಪ್ರಭೇದಗಳನ್ನು ಕಾಣಬಹುದಾಗಿದೆ.(ಬಹುಶಃ ಆರಿರಬಹುದು) ಇವುಗಳ ಪಳೆಯುಳೆಕೆಗಳ ದಾಖಲೆ ಗಮನಿಸಿದರೆ ಯುರೋಪಿನಲ್ಲಿ ಇವುಗಳ ಸಂಖ್ಯೆ ದೊಡ್ಡದಿದೆ. ಆದರೆ ಇನ್ನುಳಿದ ಜೀವ ಸಂಕುಲಗಳಿಗೆ ಹೋಲಿಸಿದರೆ ಸಂಬಂಧ ಕಡಿಮೆ. ಜಾಕ್ ಡೊವ್, ಕಾಗೆ-ಮತ್ತು ದೊಡ್ಡ ರಾವೆನ್ ಗಾತ್ರದ ಪಕ್ಷಿಗಳು ಬಹುಕಾಲದಿಂದಲೂ ಇಲ್ಲಿವೆ.ಶಿಲಾಯುಗದ ಕಾಲದಿಂದಲೂ ಮನುಷ್ಯರ ಬೇಟೆಗೆ ಇವು ತುತ್ತಾಗುತ್ತಾ ಬಂದಿವೆ. ಇವುಗಳ ದಾಖಲಿಸುವಿಕೆ ಮತ್ತು ಆಧುನಿಕ ಟಾಕ್ಸಾ ಬದಲಾವಣೆಯು ನಡೆದುಕೊಂಡು ಬರುತ್ತಿದೆ. ಅಮೆರಿಕನ್ ಕಾಗೆಗಳು ಅಷ್ಟು ಸುವ್ಯವಸ್ಥಿತವಾಗಿ ದಾಖಲಾಗಿಲ್ಲ. ಆಶ್ಚರ್ಯವೆಂದರೆ ಮನುಷ್ಯರ ವಸಾಹತುಕರಣದಿಂದಾಗಿ ಇವುಗಳ ಸಂಖ್ಯೆ ಕ್ಷೀಣಿಸುತ್ತಾ ಅವನತಿಗೆ ಬಂದಿದೆ. ಅದರಲ್ಲೂ ದ್ವೀಪಗಳಾದ ನಿವ್ಜಿಲ್ಯಾಂಡ್ ಹವಾಯಿ ಮತ್ತು ಗ್ರೀನ್ ಲ್ಯಾಂಡ್ ಇತ್ಯಾದಿ. === ವಿಭಿನ್ನ ಜೀವಸಂಕುಲ === ಬದುಕಿರುವ ಮತ್ತು ಅಳಿವಿನಂಚಿನ ಜೀವಿಗಳು ಪಕ್ಷಿ ಸಂಕುಲದ ಹೆಸರು - ಸಾಮಾನ್ಯ ಹೆಸರುಗಳು(ಶ್ರೇಣಿ) ಉಪಜೀವಿ ಸಂಕುಲದ ಜೀವಿಗಳು. ಕೊರ್ವಸ್ ಅಲ್ಬೆರಿಕುಲಸ್ - ವ್ಹೈಟ್ -ನೆಕ್ಡ್ ರಾವೆನ್ ಅಥವಾ ಕೇಪ್ ರಾವೆನ್ (ದಕ್ಷಿಣ ಕೇಂದ್ರ ಮತ್ತು ಉತ್ತರ ಆಫ್ರಿಕಾ) ಕೊರ್ವಸ್ ಅಲ್ಬಸ್ - ಪೈಡ್ ಕ್ರೌ (ಸೆಂತ್ರಲ್ ಆಫ್ರಿಕನ್ ಕೋಸ್ಟ್ಸ್ ದಿಂದ ದಕ್ಷಿಣ ಆಫ್ರಿಕಾ) ಕೊರ್ವಸ್ ಅಲ್ಬಸ್ -ಪೈಡ್ ಕೊರ್ವುಸ್ ಬೆನ್ನೆಟ್ಟಿ - ಲಿಟಲ್ ಕ್ರೌ (ಆಸ್ಟ್ರೇಲಿಯಾ) ಕೊರ್ವುಸ್ ಬ್ಫ್ರಾಚಿಂಚೊಸ್ - ಅಮೆರಿಕನ್ ಕ್ರೌ (ಯುನೈಟೆಡ್ ಸ್ಟೇಟ್ಸ್, ಸದರ್ನ್ ಕೆನಡಾ, ನಾರ್ದರ್ನ್ ಮೆಕ್ಸಿಕೊ) ಕೊರ್ವುಸ್ ಕೆಪೆನ್ಸಿಸ್ - ಕೇಪ್ ಕ್ರೌ ಅಥವಾ ಬ್ಲ್ಯಾಕ್ ಕ್ರೌ ಅಥವಾ ಕೇಪ್ ರುಕ್ (ಪೂರ್ವ ಮತ್ತು ಸದರ್ನ್ ಆಫ್ರಿಕಾ) ಕೊರ್ವುಸ್ ಕೌರಿನಸ್ - ನರ್ಥ್ ವೆಸ್ಟರ್ನ್ ಕ್ರೌ (ಒಲಿಂಪಿಕ್ ಪಿನುಸುಲಾದಿಂದ ಸೌತ್ ವೆಸ್ಟರ್ನ್ ಅಲಾಸ್ಕಾ ) ಕೊರ್ವುಕ್ಸ್ ಕೊರಾಕ್ಸ್ - ಕಾಮಾನ್ ರಾವೆನ್ ಅಥವಾ ನಾರ್ದರ್ನ್ ರಾವೆನ್ (ದಿ ಹೊಲಾರ್ಕಿಕ್ಟ್ ಸೌತ್ ಥ್ರೊಔಟ್ ಮಿಡಲ್ ಯುರೊಪ್, ಏಷಿಯಾ ಮತ್ತು ನಾರ್ತ್ ಅಮೆರಿಕಾದಿಂದ ನಿಕಾರ್ಗುವಾ ) ಕೊರ್ವುಸ್ (ಕೊರಾಕ್ಸ್) ಸೈನುಟಸ್ - ವೆಸ್ಟರ್ನ್ ರಾವೆನ್ (ಹೊಲಾರ್ಕ್ಟಿಕ್; ಆರ್ಕ್ಟಿಕ್, ನಾರ್ತ್ ಅಮೆರಿಕಾ , ಯುರೆಸಿಯಾ, ನಾರ್ದರ್ನ್ ಆಫ್ರಿಕಾ, ಪ್ಯಾಸಿಸ್ಫಿಕ್ ಐಲೆಂಡ್ಸ್ ಮತ್ತು ಬ್ರಿಟ್ಶ್ ಐಸ್ಲೇಸ್) ಕೊರ್ವುಸ್ಸ್(ಕೊರಾಕ್ಸ್) ವಿವಿಧ ಮೊರ್ಫಾಲುಕೊಫೆಯಸ್ - ಪೈಡ್ ರಾವೆನ್ ಒಂದು ಅಳಿವಿನಂಚಿನ ವಿವಿಧ ಪಕ್ಷಿಗಳು (ಹೊಲಾರ್ಕ್ಟಿಕ್) ಕೊರ್ವಸ್ ಕೊರೊನ್ - ಕಾರಿಯೊನ್ ಕ್ರೌ ಅಥವಾ ಯುರೇಸಿಯನ್ ಕ್ರೌ (ವೆಸ್ಟರ್ನ್ ಯುರೊಪ್ ಫ್ರಾಮ್ ಬ್ರಿಟೀಷ್ ಐಸ್ಲೆಸ್ ಜರ್ಮನಿಗೆ, ಈಸ್ಟರ್ನ್ ಏಷಿಯಾ ) ಕೊರ್ವುಸ್(ಕೊರೊನೆ) ಕೇಪಲ್ ನೆಸ್ - ಮೆಸೊಪೊಟಿಯಮನ್ ಕ್ರೌ ಅಥವಾ ಇರಾಕ್ ಪೈಡ್ ಕ್ರೌ (ಸದರ್ನ್ ಇರಾಕ್ ಗೆ ಕೊನೆಯ ಸೌಟ್ ವೆಸ್ಟ್ ಇರಾನ್) ಕೊರ್ವುಸ್(ಕೊರೊನೆ) ಕೊರೊನಿಕ್ಸ್ - ಹೂಡೈಡ್ ಕ್ರೌ (ನಾರ್ದರ್ನ್ ಮತ್ತು ವೆಸ್ಟರ್ನ್ ಯುರೊಪಿಯನ್ ಮೂಲಕ ಟರ್ಕಿ ಮತ್ತು ಸ್ಕಾಟ್ ಲ್ಯಾಂಡ್ ನ ವಾಯುವ್ಯ ಮತ್ತು ಇಂಗ್ಲೆಂಡನ್ ಉತ್ತರ ಐರ್ಲೆಂಡ್ ಭಾಗದಲ್ಲಿ ಈ ದೊಡ್ಡ ಕಾಗೆ ಸಾಮಾನ್ಯವಾಗಿದೆ. ಇದು ಬ್ರಿಟೀಷ್ ರ ಪ್ರಮುಖ ಭೂ ಪ್ರದೇಶದಲ್ಲಿ ದೊರೆಯುತ್ತದೆ. ಇರಾನ್, ಸಿರುಯಾ, ಇರಾನ್ ಮತ್ತು ಇರಾಕ್) ಕೊರ್ವುಸ್ಸ್ (ಕೊರೊನೆ) ಮೂಲದ - ಈಸ್ಟರ್ನ್ ಕಾರಿಯೊನ್ ಕ್ರೌ (ಯುರೆಸಿಯಾ ಮತ್ತು ನಾರ್ದರ್ನ್ ಆಫ್ರಿಕಾ) ಕೊರ್ವುಸ್ ಕೊರೊನೈಡ್ಸ್ - ಆಸ್ಟ್ರೇಲಿಯನ್ ರಾವೆನ್ (ಈಸ್ಟರ್ನ್ ಮತ್ತು ಸದರ್ನ್ ಆಸ್ಟ್ರೇಲಿಯಾ) ಕೊರ್ವುಸ್ ಕ್ರಾಸಿರೊಸ್ಟ್ರಿಯಸ್ - ದಪ್ಪ-ಚೊಂಚಿನ ರಾವೆನ್ (ಎತಿಯೊಪಿಯಾ) ಕೊರ್ವುಸ್ ಕ್ರಿಸ್ಟೊಲಿಕಸ್ - ಚಿಹೊ ಹೌ ರಾವೆನ್ (ವಾಯು ವ್ಯU.., ನೈಋತ್ಯ ಮೆಕ್ಸಿಕೊ) ಕೊರ್ವುಸ್ ದೌರಿಕಸ್ - ಡೌರಿಯನ್ ಜಾಕ್ ಡಾವ್ (ಪೂರ್ವ ಯುರೊಪ್ ಪೂರ್ವ ಜಪಾನ್, ಆಗಾಗ ಸ್ಕ್ಯಾಂಡೇವಿನಿಯಾ) ಕೊರ್ವುಸ್ ಎನಕಾ - ಉದ್ದ-ಚೊಂಚಿನ ಕಾಗೆ (ಮಲೆಸಿಯಾ, ಬೊರ್ನಿಯೊ, ಇಂಡೊನೇಶಿಯಾ) ಕೊರ್ವುಸ್ (ಎನಕಾ) ವಯೊಲಿಸಿಯಸ್ - ವಯೊಲಿಸಿಯಸ್ ಕಾಗೆ(ಫಿಲಿಪೈನ್ಸ್, ಸೆರೆಮ್, ಮೊಲುಕುಎಸ್) ಕೊರ್ವುಸ್ ಫ್ಲೊರೆನ್ಸಿಸ್ - ಫ್ಲೊಸ್ರ್ಸ್ ಕಾಗೆ (ಫ್ಲೊರೆಸ್ ದ್ವೀಪ) ಕೊರ್ವುಸ್ ಫ್ರಾಗುಲಿಗಸ್ - ರುಕ್ (ಯುರೊಪ್, ಏಷಿಯಾ, ನಿವ್ಜಿಲ್ಯಾಂಡ್ ) ಕೊವುಸ್ ಫುಸಿಕ್ಯಾಪಿಲಿಯಸ್ - ಕಂದು-ತಲೆಯ ಕಾಗೆ (ನಿವ್ ಗೈನಾ) ಕೊರ್ವುಸ್ ಹವಾಯೈನಿಸಿಸ್ (ಸಾಮಾನ್ಯವಾಗಿ . ಟ್ರೊಪಿಕಸ್ ) - 'ಅಲಾಲಾ' ಹವೆಯಿನ್ ಕಾಗೆ(ಹವಾಯಿ ದ್ವೀಪ ) ಕೊರ್ವುಸ್ ಇಂಪರೇಟಸ್ - ತಮೌಲಿಪಾಸ್ ಕಾಗೆ (ಮಿಕ್ಸಿಕೊ ಕೊಲ್ಲಿ ಕರಾವಳಿ ನಿವೊದಿಂದ ಲಿಯಾನ್ ಪೂರ್ವಕ್ಕೆ ಅದರಿಂದ ರಿಯೊ ಗ್ರಾಂಡೆ ಡೆಲ್ಟಾ ದಕ್ಷಿಣಕ್ಕೆ ಟ್ಯಾಂಪಿಕೊ ಟ್ಯಮೊಲಿಪಸ್ ) ಕೊರ್ವುಸ್ ಜಮೈಕೆನಿಸಿಸ್ - ಜಮೈಕಿನ್ ಕಾಗೆ (ಜಮೈಕಾ) ಕೊರ್ವುಸ್ ಕುಬಾರಿಯೊ - ಮರಿಯಾನಾ ಕಾಗೆ ಅಥವಾ ಅಗಾ(ಗೌಮ್, ರೊಟಾ) ಕೊರ್ವುಸ್ ಲಿಕೊಘ್ನಾಪಾಲ್ಸಸ್ - ಬಿಳಿ-ಕತ್ತಿನ ಕಾಗೆ (ಹೈಟಿ, ಡೊಮೆನಿಕನ್ ರಿಪಬ್ಲಿಕನ್, ಪುರುಟೊ ರಿಕೊ) ಕೊರ್ವುಸ್ ಮ್ಯಾಕ್ರೊರಿಚಂಚೊಸ್ - ದೊಡ್ಡ -ಚೊಂಚಿನ ಕಾಗೆ (ಪೂರ್ವ ಏಷಿಯಾ, ಹಿಮಾಲಯಾಸ್, ಫಿಲಿಪೈನ್ಸ್) ಕೊರ್ವುಸ್ (ಮ್ಯಾಕ್ರೊರಿಂಚೊಸ್) ಲೆವಿಲ್ಲಂಟಿಲ್ - ಕಾಡು ಕಾಗೆ (ಭಾರತ, ಬರ್ಮಾ) ಕೊರ್ವುಸ್ ಮೀಕಿ - ಬೌಗಿನ್ ವಿಲ್ಲೆ ಕಾಗೆ ಅಥವಾ ಸೊಲೊಮನ್ ದ್ವೀಪಗಳ ಕಾಗೆ(ಉತ್ತರ ಸೊಲೊಮನ್ ದ್ವೀಪಗಳು) ಕೊರ್ವುಸ್ ಮೆಲ್ಲೊರಿ - ಲಿಟಲ್ ರಾವೆನ್ (ವಾಯುವ್ಯ ಆಸ್ಟ್ರೇಲಿಯಾ) ಕೊರ್ವುಸ್ ಮೊನೆಡುಲಾ - ಜಾಕ್ ಡಾವ್ ಅಥವಾ ಪಸ್ಗ್ಚಿಮ ಜಾಕ್ ಡಾವ್ (ಬ್ರಿಟಿಶ್ ಐಸ್ಲೆ ಮತ್ತು ಪಶ್ಚಿಮ ಯುರೊಪ್, ಸ್ಕ್ಯಾಂಡೇವಿನಿಯಾ, ನಾರ್ದರ್ನ್ ಏಷಿಯಾ, ನಾರ್ದರ್ನ್ ಆಫ್ರಿಕಾ) ಕೊರ್ವುಸ್ ಮೊನೊಡುಡ್ಲೆಸ್ - ನಿವ್ ಕ್ಯಾಲೆಡೊನಿಯನ್ ಕಾಗೆ (ನಿವ್ ಕ್ಯಾಲೆಡೊನಿಯಾ, ಲಾಯಲ್ಟಿ ದ್ವೀಪಗಳು) ಕೊರ್ವುಸ್ ನಾಸಿಕಸ್ - ಕುಬನ್ ಕಾಗೆ (ಕ್ಯುಬಾ, ಐಸ್ಲಾ ಡೆ ಲಾ ಜುವೆಂಟುಡ್, ಗ್ರಾಂಡ್ ಕೈಕೊಸ್ ದ್ವೀಪ) ಕೊರ್ವುಸ್ ಒರು - ಟ್ರೆಸಿಯನ್ ಕಾಗೆ ಅಥವಾ ಆಸ್ಟ್ಯ್ರೇಲಿಯನ್ ಕಾಗೆ (ಆಸ್ಟ್ರೇಲಿಯಾ, ನಿವ್ ಗೈನಾ ಮತ್ತು ಹತ್ತಿರದ ದ್ವೀಪಗಳು) ಕೊರ್ವುಸ್ ಒಸಿಫ್ರಾಗಸ್ - ಮೀನು ಕಾಗೆ (ಪೂರ್ವ .. ಕರಾವಳಿ, ಈಶಾನ್ಯ .. ಫ್ಲೊರಿಡಾ, ಮೂಲಕ ಪಶ್ಚಿಮದ ಪ್ರಮುಖ ನದಿಗಳು ಒಕ್ಲೊಮಾ ಮತ್ತು ಟೆಕ್ಸಾಸ್ ) ಕೊರ್ವುಸ್ ಪಾಮಾರಮ್ - ಪಾಮ್ ಕಾಗೆ (ಕ್ಯುಬಾ, ಹೈಟಿ, ಡೊಮೊನಿಕನ್ ರಿಪಬ್ಲಿಕನ್) ಕೊರ್ವುಸ್ ರಿಪಿಡ್ಸುರಸ್ - ರೆಕ್ಕೆ-ಬಾಲದ ರಾವೆನ್ (ನೈಋತ್ಯ ಆಫ್ರಿಕಾ, ಮಧ್ಯ ಪೂರ್ವ) ಕೊರ್ವುಸ್ ರಫಿಕೊಲಿಸ್ - ಕಂದು-ಕೊರಳಿನ ರಾವೆನ್ ಅಥವಾ ಮರಭೂಮಿ ರಾವೆನ್ (ಉತ್ತರ ಅಫ್ರಿಕಾ, ಅರೇಬಿಯಾ, ಆಗ್ನೇಯದಿಂದ ಪೂರ್ವದ ಏಷಿಯಾ) ಕೊರ್ವುಸ್ (ರಫಿಕೊಲಸ್) ಎಡಿಥೆಯ್ - ಸೊಮಾಲಿ ಕಾಗೆ ಅಥವಾ ಗಿಡ್ಡ ರಾವೆನ್ (ಆಗ್ನೇಯ ಆಫ್ರಿಕಾ) ಕೊರ್ವುಸ್ ಸಿನಾಲೊಯ್ - ಸಿನಾಲೊಯನ್ ಕಾಗೆ (ಪ್ಯಾಸಿಫಿಕ್ ಕರಾವಳಿ ಸೊನೊರಾದಿಂದ ಕೊಲಿಮಾ ) ಕೊರ್ವುಸ್ ಸ್ಪ್ಲೆಂಡೆನ್ಸ್ - ಮನೆ ಕಾಗೆ ಅಥವಾ ಭಾರತೀಯ ಮನೆ ಕಾಗೆ(ಭಾರತ ಉಪಖಂಡ, ಮಧ್ಯಪೂರ್ವ, ಪೂರ್ವ ಆಫ್ರಿಕಾ) ಕೊರ್ವುಸ್ ಟ್ಯಾಸ್ ಮಎನಿಕಸ್ - ಅರಣ್ಯದ ರಾವೆನ್ ಅಥವಾ ಟ್ಯಾ ಮೆನಿಯನ್ ರಾವೆನ್ (ಟಾಸ್ಮೆನಿಯಾ ಮತ್ತು ಹತ್ತಿರದ ದಕ್ಷಿಣ ಆಸ್ಟ್ರೇಲಿಯಾ ಕರಾವಳಿ) ಕೊರ್ವುಸ್ (ಟಾಸ್ ಮೆನಿಕಸ್) ಬೊರಿಯಸ್ - ರಿಲಿಕ್ಟ್ ರಾವೆನ್ (ಈಶಾನ್ಯ ನಿವ್ ಸೌತ್ ವೇಲ್ಸ್) ಕೊರ್ವುಸ್ ಟೊರ್ಕ್ವ್ಟಸ್ - ಕ್ಲೆರ್ಡ್ ಕಾಗೆ (ಪೂರ್ವ ಚೀನಾ, ದಕ್ಷಿಣದೊಳಗಿನ ವಿಯಟ್ನಾಮ್) ಕೊರ್ವುಸ್ ಟ್ರಿಸ್ಟಿಸ್ - ನೇರಳೆ ಕಾಗೆ ಅಥವ ಬರಿ-ಮುಖದ ಕಾಗೆ(ನಿವ್ ಗಯನಾ ಮತ್ತು ನೆರೆಯ ದ್ವೀಪಗಳು ) ಕೊರ್ವುಸ್ ಟಿಪಿಕಸ್ - ಉದ್ದದ ಕಾಗೆ ಅಥವಾ ಸೆಲೆಬೆಯ ಪೈಡ್ ಕಾಗೆ (ಉದ್ದ ಮೂತಿಯ)(ಸಲ್ವೆಸಿ, ಮುನಾ, ಬುಟುಂಗ್) ಕೊರ್ವುಸ್ ಯುನಿಕಲರ್ - ಬಾಂಗೈ ಕಾಗೆ (ಬಾಂಗೈ ದ್ವೀಪ) - ಸುಮಾರಾಗಿ ಅಳಿವಿನಂಚಿನ) ಕೊರ್ವುಸ್ ವ್ಯಾಳಿಡಸ್ - ಉದ್ದ-ಚೊಂಚಿನ ಕಾಗೆ (ನಾರ್ದರ್ನ್ ಮೊಲುಕ್ಕೆಸ್) ಕೊರ್ವುಸ್ ವುಡ್ ಫೊರ್ಡಿ - ಬಿಳಿ-ಚೊಂಚಿನ ಕಾಗೆ ಅಥವಾ ಸೊಲೊಮನ್ ದ್ವೀಪಗಳ ಕಾಗೆ(ದಕ್ಷಿಣ ಸೊಲೊಮನ್ ದ್ವೀಪಗಳು)ಪಟ್ಟಿ ಮೂಲಗಳು === ಇತಿಹಾಸಪೂರ್ವ ಮತ್ತು ಪಳೆಯುಳಿಕೆಯ ಜಾತಿಗಳು === ನಿವ್ ಐರ್ಲೆಂಡ್ ಕಾಗೆ, ಕೊರ್ವುಸ್ . (ಇತಿಹಾಸ ಪೂರ್ವ) ಚಟಾಮ್ ದ್ವೀಪಗಳ ರಾವೆನ್, . ಮೊರಿಯೊರಮ್ (ಇತಿಹಾಸ ಪೂರ್ವ) ನಿವ್ ಜಿಲ್ಯಾಂಡ್ ರಾವೆನ್, . ಆಂಟಿಪೊಡಿಯಮ್ (ಇತಿಹಾಸ ಪೂರ್ವ) ಎತ್ತರದ-ಚೊಂಚಿನ ಕಾಗೆ, . ಇಂಪ್ಲುವಿಯಎಟಸ್ (ಇತಿಹಾಸ ಪೂರ್ವ) ರೊಬಸ್ಟ ಕಾಗೆ, . ವಿರೊಸಸ್ (ಇತಿಹಾಸ ಪೂರ್ವ) ಕೊರ್ವುಸ್ ಲಾರ್ಟೆಟಿ (ಪಳೆಯುಳಿಕೆ: ಫ್ರಾನ್ಸ್ ನ ಹಿಂದಿನ ಮಿಯಿಸೆನೆ ಅಥವಾ ಯುರೊಪ್?) ಕೊರ್ವುಸ್ ಪ್ಲಿಯೊಕೆಯನ್ಸ (ಪಳೆಯುಳಿಕೆ: ಹಿಂದಿನ ಪ್ಲಿಯೊಕೆಯನ್ಸ–? ಆರಂಭಿಕ ಪ್ಲಿಯೊಕೆಯನ್ಸ ನ ವಾಯುವ್ಯ ಯುರೊಪ್ ) ಕೊರ್ವುಸ್ ಆಂಟಾಕೊರೆಕ್ಸ್ (ಪಲೆಯುಳಿಕೆ: ಹಿಂದಿನ ಪ್ಲಿಯೊಕೆಯನ್ಸ/ಆರಂಭಿಕ– ಹಿಂದಿನ ಯುರೊಪಿನ ಪ್ಲಿಯೊಕೆಯನ್ಸ; ಇವು ಕೊರ್ವುಸ್ ಕೊರಾಕ್ಸ್ ನ ಉಪವರ್ಗವಾಗಿರಬಹುದು. ಕೊರ್ವುಸ್ ಬೆಟ್ ಫಿಯಾನ್ಸಸ್ (ಪಳೆಯುಳಿಕೆ) ಕೊರ್ವುಸ್ ಪ್ರೆಯೊಕ್ಸ್ (ಪಳ್ಕೆಯುಳಿಕೆ) ಕೊರ್ವುಸ್ ಸಿಮಿನೊಯಿಸ್ಕಿ (ಪಳೆಯುಳಿಕೆ) ಕೊರ್ವುಸ್ ಫಾಸಿಲಿಯಸ್ (ಪಳೆಯುಳಿಕೆ) ಕೊರ್ವುಸ್ ಮೊರವಿಕ್ಸ (ಪಳೆಯುಳಿಕೆ) ಕೊರ್ವುಸ್ ಹಂಗೇರಿಕಸ್ (ಪಳೆಯುಳಿಕೆ) ಪುರೆಟೊ ರಿಕಾನ್ ಕಾಗೆ . ಅಥವಾ"ಚಾಂಗೊ" "ಮೊಜಾಂಬಿಕ್" ಪಮಿಲಿಸ್ (ಇತಿಹಾಸಪೂರ್ವ;ಬಹುಶಃನಾಸಿಕಸ್ /ಪಾಮರಮ್ ಉಪಜಾತಿ . / ) ಕೊರ್ವುಸ್ ಗಲುಶಾಯಿ (ಪಳೆಯುಳಿಕೆ: ದೊಡ್ಡ ಸ್ಯಾಂಡಿ ಹಿಂದಿನ ಮಿಯೊಸೆನೆ ಆಫ್ ವಿಕಿಅಪ್, ) ಕೊರ್ವುಸ್ ನಿಯೊಮೆಕ್ಸಿಕಸ್ (ಪಳೆಯುಲಳಿಕೆ: ಹಿಂದಿನ ಡ್ರಾಯ್ ಕೇವ್ ನ ಪ್ಲೆಸ್ಟೊಸೆನೆ, ) ಇನ್ನು ಹೆಚ್ಚೆಂದರೆ ಇತಿಹಾಸ ಪೂರ್ವದ ರೂಪಗಳನ್ನು ಪಟ್ಟಿ ಮಾಡಲಾಗಿದೆ. ಬಹಳಷ್ಟು ಬಾರಿ ಕ್ರೊನೊಸುಬಸ್ಪೀಸಿಸ್ ಎಂದು ವರ್ಣಿಸಲಾಯಿತು. ಇವುಗಳು ಆಯಾ ಪಕ್ಷಿ ಜೀವಸಂಕುಲದ ಜೊತೆಗೆ ಅನುಕ್ರಮವಾಗಿರುತ್ತವೆ. == ಕಾಗೆಗಳು ಮತ್ತು ಮನುಷ್ಯರು == ವಿಶೇಷವಾಗಿ ಕಾಮನ್ ರಾವೆನ್, ಆಸ್ಟ್ರೇಲಿಯನ್ ರಾವೆನ್ ಮತ್ತು ಕ್ಯಾರಿಯೊನ್ ಕ್ರೌ ಜಾತಿಯವುಗಳೆಲ್ಲಾ ದುರ್ಬಲ ಕುರಿಮರಿ ಜಾತಿಯ ಪ್ರಾಣಿಗಳನ್ನು ಮತ್ತು ತಾಜಾ ಎನ್ನುವ ಪ್ರಾಣಿಗಳ ಸತ್ತ ದೇಹಗಳನ್ನು ತಿನ್ನುತ್ತವೆ. ಅಂದರೆ ಬಹುತೇಕವಾಗಿ ಬೇರೆ ಪ್ರಾಣಿಗಳು ಕೊಂದು ಹಾಕಿದ ಪ್ರಾಣಿಗಳ ಅವಶೇಷಗಳನ್ನು ಅವು ತಿನ್ನುತ್ತವೆ. ಒರಟು ದನಿಯ ಕಾಗೆ ಜಾತಿಯ ರೂಕ್ಸ್ ಗಳು ನಲ್ಲಿ ಧಾನ್ಯಗಳನ್ನು ತಿಂದು ನಾಶ ಮಾಡಿದರೆ,ಕಂದು-ಕತ್ತಿನ ರಾವೆನ್ ಗಳು ಮರಳುಗಾಡಿನ ದೇಶಗಳಲ್ಲಿನ ಖರ್ಜೂರದ ಬೆಳೆಗೆ ದಾಳಿ ಇಟ್ಟು ನಾಶ ಪಡಿಸುತ್ತವೆ ಎಂಬ ದೂರುಗಳಿವೆ. ನ್ಯೂಯಾರ್ಕ್ ನ ಔಬುರ್ನ್ (), ನಲ್ಲಿ ಸುಮಾರು ೨೫,೦೦೦ ದಿಂದ ೫೦,೦೦೦ ಅಮೆರಿಕನ್ ಕಾಗೆಗಳು (. ಬ್ರ್ಯಾಚಿ ರಿಕೊಸ್)ಆ ಪುಟ್ಟ ನಗರದಲ್ಲಿನ ವಿಶಾಲ ಮರಗಳಲ್ಲಿ ಸುಮಾರು ೧೯೯೩ ರಿಂದಲೂ ತಮ್ಮ ವಾಸಸ್ಥಾನ ಕಂಡು ಕೊಂಡಿವೆ. ಆದರೆ ಇವುಗಳಿಂದ ಶಬ್ದ ಮಾಲಿನ್ಯ ತಡೆಯಲು ಇವುಗಳ ಸಂಖ್ಯೆ ಕಡಿಮೆ ಮಾಡುವ ಒಂದು ಸಂಘಟಿತ ಕಾಗೆ ಬೇಟೆಯ ವಿಷಯವು ೨೦೦೩ ರಲ್ಲಿ ವಿವಾದ ಸೃಷ್ಟಿಸಿತು.(ಸಾರ್ವಜನಿಕಮ್ ಆರೋಗ್ಯ ಸ್ಥಿತಿ ಹಾಗು ಕರ್ಕಶವಾದ ಕಾಗೆಗಳ ಕೂಗು) ಸುಮಾರು 2008 ಮಾರ್ಚ್ ನಲ್ಲಿ ನಡೆದ ಟೆಕ್ನಾಲಾಜಿ ಎಂಟರ್ ಟೇನ್ಮೆಂಟ್ ಡಿಸೈನ್ ಕಾನ್ ಫೆರೆನ್ಸಲ್ಲಿಜೊಶುವಾ ಕ್ಲೆನ್ ಎಂಬಾತ ಇವುಗಳ ಸಮರ್ಪಕ ಬಳಕೆಗಾಗಿ ವೆಂಡಿಂಗ್ ಮಶಿನ್ ವಿಧಾನವನ್ನು ಸೂಚಿಸಿದ. ಕಾಗೆಗಳಿಗೆ ಕಚಡಾವಸ್ತುಗಳನ್ನು ಸಾಗಿಸುವ ತರಬೇತಿ ನೀಡಿ ಈ ವೆಂಡಿಂಗ್ ಮಶಿನ್ ನ್ನು ಕಸದ ವಿಲೇವಾರಿಯ ಪರ್ಯಾಯಕ್ಕೆ ಬಳಸಬಹುದಾಗಿದೆ. ಕಾಗೆಗಳು ಸಹ ಮನುಷ್ಯರ ಧ್ವನಿಯನ್ನು ಗಿಳಿಗಳಂತೆ ಅನುಕರಿಸಿ ಅನುಸರಿಸುತ್ತವೆ. ಪೂರ್ವ ಏಷ್ಯಾದಲ್ಲಿ "ಮಾತನಾಡುವ" ತರಬೇತು ಪಡೆದ ಕಾಗೆಗಳಿಗೆ ಹೆಚ್ಚು ಬೇಡಿಕೆ ಇದ್ದು, ಇಲ್ಲಿ ಕಾಗೆಗಳನ್ನು ಅದೃಷ್ಟ ಎಂದೂ ಪರಿಗಣಿಸಲಾಗುತ್ತದೆ. ಕೆಲವರು ಕಾಗೆಗಳನ್ನು ಸಾಕು ಪಕ್ಷಿ-ಪ್ರಾಣಿಗಳಂತೆ ಪರಿಗಣಿಸುತ್ತಾರೆ. ಮನುಷ್ಯರು ಸಾಮಾನ್ಯವಾಗಿ ಕಾಗೆಗಳನ್ನು ವೈಯಕ್ತಿಕ ನೆಲೆಯಲ್ಲಿ ನೋಡದಿದ್ದರೂ ಅವುಗಳಲ್ಲಿ "ಕೆಟ್ಟ" ಮನುಷ್ಯರನ್ನು ಪತ್ತೆಹಚ್ಚುವ ಸಾಮರ್ಥ್ಯವಿದೆ. ಅವು ತಮ್ಮ ಕರ್ಕಶ ಕೂಗಿನಿಂದ ಕೆಟ್ಟದ್ದನ್ನು ಕಂಡು ಹಿಡಿಯಬಲ್ಲವು. === ಬೇಟೆ === ಯುನೈಟೆಡ್ ಸ್ಟೇಟ್ಸನಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಕಾಗೆಗಳನ್ನು ಎಲ್ಲಾ ರಾಜ್ಯಗಳಲ್ಲಿ ಬೇಟೆಯಾಡಲು ಕಾನೂನು ರೀತ್ಯ ಅನುಮತಿ ಇದ್ದು, ಇದು ಸಾಮಾನ್ಯವಾಗಿ ಆಗಸ್ಟ್ ನಿಂದ ಮಾರ್ಚ್ ವರೆಗೆ ನಡೆಯುತ್ತದೆ. "ಕಾಗೆಗಳ ಬೇಟೆ ಋತುವಿನಲ್ಲಿ" ಇವುಗಳ ಪ್ರಮಾಣದ ಮಿತಿ ಇಲ್ಲ. ನ ಕೋಡ್ ಆಫ್ ಫೆಡರಲ್ ರೆಗ್ಯುಲೇಶನ್ಸ್ ಪ್ರಕಾರ ಯಾವುದೇ ಸಂದರ್ಭದಲ್ಲಿ ಕಾಗೆಗಳನ್ನು ಯಾವುದೇ ಅನುಮತಿ ಇಲ್ಲದೇ ಪಡೆಯಬಹುದು. 50 ೨೧.೪೩ (ಸಾರ್ವಜನಿಕ ವಸ್ತು ನಾಶ ಮಾಡುವ ಕಪ್ಪು ಪಕ್ಷಿಗಳು, ಗೋಕಾಗೆಗಳು, ದೊಂಬ ಕಾಗೆಗಳು ಮತ್ತು ಅಮೆರಿಕನ್ ಕಾಗೆಗಳು)ಇಂತಹ ಕಾಗೆಗಳೋ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಇವುಗಳನ್ನು ಕೊಲ್ಲಲು ಯಾವುದೇ ಪರವಾನಿಗೆ ಬೇಡ. ಒಂದು ವೇಳೆ ಧ್ವಂಸ ಕಾರ್ಯದಲ್ಲಿ ತೊಡಗೊಡಗಿದರೆ" ಅಂದರೆ ಅಲಂಕಾರಿಕ ಅಥವಾ ನೆರಳಿನ ಗಿಡಗಳು, ಕೃಷಿ ಬೆಳೆಗಳು, ಪಶು-ಪ್ರಾಣಿಗಳು ಅಥವಾ ವನ್ಯ ಜೀವಿಗಳಿಗೆ ತೊಂದರೆ ನೀಡಿದರೆ ಅಥವಾ ಆರೋಗ್ಯಕ್ಕೆ ಹಾನಿ ಮಾಡುವ ಇಲ್ಲವೆ ಗದ್ದಲ ಎಬ್ಬಿಸುವ" ಕಾಗೆಗಳನ್ನು ನಿರ್ಧಾಕ್ಷಿಣ್ಯವಾಗಿ ಕೊಲ್ಲಬಹುದಾಗಿದೆ. ಆದರೆ ಇಂತಹ ಕಾಗೆಗಳ ಅಂಗಗಳ ಅಥವಾ ಪೂರ್ಣ ಪ್ರಮಾಣದಲ್ಲಿ ಮಾರಾಟ ಮಾಡುವುದು ನಿಷಿದ್ದವಾಗಿದೆ. ಈ ಹಕ್ಕುಗಳನ್ನು ಯಾವುದೇ ರಾಜ್ಯವು ಫೆಡರಲ್ ಅನುಮತಿ ಪಡೆದೇ ಕಾಗೆಗಳ ಕ್ರೀಡೆಗಳ ಬಗ್ಗೆ ಯಾವುದೇ ಕಟ್ಟು ಪಾಡುಗಳಿಲ್ಲ. ಆಯಾ ಕಟ್ಟಡ ಅಥವಾ ದೊಡ್ಡ ಇಮಾರತುಗಳ ಮೇಲೆ ಅವು ತಮ್ಮ ಜಾಗೆಗಳನ್ನು ಹುಡುಕುತ್ತವೆ. ಇದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಆಯಾ ವಿಭಾಗದ ಅಧಿಕಾರಿಗಳ ಆದೇಶದ ಮೇರೆಗೆ ನಡೆಯುತ್ತದೆ ಮತ್ತು ಹೀಗೆ ಇವುಗಳ ಗದ್ದಲ ಕಡಿಮೆ ಮಾಡಲು ರಾಜ್ಯವು ತನ್ನ ಫೆಡರಲ್ ಕಾನೂನುಗಳನ್ನು ಆಯಾ ರಾಜ್ಯಗಳಿಗೆ ಸಮಯ ಸಂದರ್ಭಗಳಿಗೆ ಅನುಗುಣವಾಗಿ ಕಾನೂನುಗಳನ್ನು ಪಾಲಿಸಿ ಅಲ್ಲಿನ ರಾಜ್ಯಗಳಲ್ಲಿನ ಅನುಮತಿ ಮೇರೆಗೆ ಈ ಪಕ್ಷಿಗಳ ಕಾಟವನ್ನು ತಪ್ಪಿಸಬಹುದಾಗಿದೆ. ಬ್ರಿಟನ್ ನಲ್ಲಿ ಕಾಗೆಯನ್ನು ಒಂದು ಉಪಟಳದ ಪಕ್ಷಿ ಎಂದು(ಬೆಳೆ ನಾಶಕ) ಪರಿಗಣಿಸಲಾಗುತ್ತದೆ. ಅಲ್ಲದೇ ಕೆಲವು ಬಾರಿ ಸಾಮಾನ್ಯ ಕಾನೂನಡಿ ಇದನ್ನು ಅನುಮತಿ ಪಡೆದು ಕೊಲ್ಲಬಹುದಾಗಿದೆ == ವಿಕಸನ == ಸಾಮಾನ್ಯವಾಗಿ ಕಾಗೆಗಳು ಕೇಂದ್ರ ಏಷ್ಯಾದಲ್ಲಿ ಬೆಳೆದು ನಂತರ ಉತ್ತರ ಅಮೆರಿಕಾ,ಆಫ್ರಿಕಾ,ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ವಿಕಸನ ಹೊಂದಿದವು. ಇತ್ತೀಚಿನ ಆಸ್ಟ್ರೇಲಿಯಾದಲ್ಲಿನ ಬೆಳವಣಿಗೆ ಅಂದರೆ ಅಲ್ಲಿನ ಕೊರ್ವೈಡ್ (ಕಪ್ಪು ಪಕ್ಷಿ ಜಾತಿ) ವರ್ಗದಿಂದ ಇದು ವಿಕಸನಗೊಂಡದ್ದು ಕಾಣಿಸುತ್ತದೆ. ಹೇಗೆಯಾದರೂ ಇದರ ಸಂಕುಲವು ಆಧುನಿಕ ಜಯ್ಸ್(ಚಿಲಿಪಿಲಿಗುಟ್ಟುವ),ದೊಂಬಕಾಗೆಗಳುಮತ್ತು ದೊಡ್ಡ ಕಪ್ಪು ಕೊರ್ವುಸ್ ಗಳು ಪ್ರಧಾನ ವರ್ಗ ವಾಗಿದ್ದು, ಇದೀಗ ಆಸ್ಟ್ರೇಲೇಸಿಯಾದಿಂದ ತೆರಳಿ ಏಷ್ಯಾದಲ್ಲಿ ತಮ್ಮ ವಿಕಸನ ಕಂಡು ಕೊಂಡಿವೆ. ಕೊರ್ವುಸ್ ಎಂಬ ವರ್ಗವು ಆಸ್ಟ್ರೇಲಿಯಾದಲ್ಲಿ ಮರುಪ್ರವೇಶ ಪಡೆದಿದ್ದು (ಇತ್ತೀಚೆಗಷ್ಟೆ) ಇದೇ ವರ್ಗವು ಐದು ಇತರ ತಳಿಗಳ ಹುಟ್ಟಿಗೆ ಕಾರಣವಾಗಿದ್ದು ಇದನ್ನು ಉಪ-ಜಾತಿ ಎನ್ನಬಹುದಾಗಿದೆ. == ನಡವಳಿಕೆ == === ಗಟ್ಟಿಯಾಗದ ಕೂಗು ===