ಕಾಟರ್( ()) ಒಂದು ಅಗುಳಿ ಅಥವಾ ಅಲ್ಪವಸ್ತು.ಇದನ್ನು ಯಾವುದೇ ಎರಡು ಬೇರೆ ಬೇರೆ ಭಾಗಗಳ ರಂಧ್ರದ ಮೂಲಕ ಹೊರಡಿಸುವುದರಿಂದ ಅವುಗಳನ್ನು ದೃಢವಾಗಿ ಜೋಡಿಸಬಹುದು(ಹೊಂದಿಸಬಹುದು). ಬ್ರಿಟೀಶ್‍ರು ಇದೇ ಅರ್ಥದಲ್ಲಿ ಉಪಯೋಗಿಸುವರು. ಆದರೆ, ಅಮೇರಿಕ ಸಂಯುಕ್ತ ಸಂಸ್ಥಾನ ದವರಿಗೆ ಇದು ಬೇರೆಯ ಬಂಧಕ(ಪ್ಯಾಸೆನೆರ್) ಆಗಿದೆ. ಈ ಕಾಟರ್‍ಗಳು ಗಿಡ್ಡವಾದ ಥ್ರೆಡೆಡ್ ಸೆಕ್ಶನ್( )ಮತ್ತು ಕಿರಿದಾದ ಕೊನೆಯನ್ನು ಹೊಂದಿರುತ್ತದೆ.ಈ ಥ್ರೆಡೆಡ್ ಸೆಕ್ಶನ್( ) ವಾಷರ್ ಮತ್ತು ನೆಟ್ ಮೂಲಕ ಕಾಟರ್‍ನ್ನು ನಿಗಧಿತ ಸ್ಥಳದಲ್ಲಿ ಕೂರಿಸಲು ಉಪಯೋಗವಾಗಿದೆ. ಇದರ ಮುಖ್ಯವಾದ ಉಪಯೋಗಗಳೆಂದರೆ ದ್ವಿಚಕ್ರವಾಹನಗಳ ಜೋಡಣೆಯಲ್ಲಿ, ತಿರುಗುಬೆಣೆ () ಮತ್ತು ಕ್ರಾನ್ಕ್ ಶಾಫ಼್ಟ್(), ಸ್ಟೀಮ್ ಎನ್ಜಿನ್ ( )ನ ಪಿಸ್ಟನ್ ರಾಡ್ ( ) ಮತ್ತು ಕ್ರಾಸ್ ಹೆಡ್() ಜೋಡಣೆಯಲ್ಲಿ ಬಳಸಲಾಗುತ್ತದೆ.ಸಾಮಾನ್ಯವಾಗಿ ಇದನ್ನು ಸೈಕಲ್‍ನ ಕ್ರಾಂಕ್ ಜೋಡಣೆಯಲ್ಲಿ ಬಳಸುತ್ತಾರೆ. ಕಾಟರ್ ಪಿನ್‍ನ ಕೋನವು ಜೋಡಿಸಬೇಕಾದ ಭಾಗಗಳ ಸ್ಥಾನವನ್ನು ಸೂಚಿಸುತ್ತದೆ. ಆದುದರಿಂದ ಕಾಟರ್ ಪಿನ್ನಿನ ವೆಡ್ಜ್ ನ ಕೋನವು ಪಿನ್ನಿನ ಎರಡೂ ಕಡೆ ಸಮವಾಗಿದ್ದರೆ ಬೈಸಿಕಲ್ ನ ಮೇಲೆ ಭುಜಗಳು ೧೮೦ ಡಿಗ್ರಿ ಕೋನದಲ್ಲಿ ಮಾತ್ರ ಇರುತ್ತದೆ. == ಜನಪ್ರಿಯ ಉಪಯೋಗಗಳು == ಈ ಹಿಂದೆ, ಸಾಮಾನ್ಯವಾಗಿ ಬೈಸಿಕಲ್ ನ ಕ್ರಾಂಕ್‍ನ್ನು ಕಾಟರ್‍ನ್ನು ಉಪಯೋಗಿಸಿ ಕೂರಿಸುವುದೂ ಆದರೂ, ಈಗ ಹೆಚ್ಚು ಸುಲಭವಾಗಿ ನಿರ್ವಹಿ ಸುವಂತಿರುವ ವ್ಯವಸ್ಥೆಯಾದ ಚೌಕಾಕಾರದ ಕೋಚಂಚು ಅಥವಾ ಜಾರು ಕೀಲಕ ಸಮವಾದ ಎಲ್ಲೆಯಾಗಿರುವ ಮೇಲ್ಮೈ ಇರುವಂತಿರುವುದನ್ನು ಉಪಯೋಗಿಸುವರು. ಈ ಕಾಟರ್‍ಗಳು ವಾಷರ್ ಮತ್ತು ನಟ್‍ನ ಜತೆಗೆ ಕಾಟರ್‍ನ್ನು ಅದರ ಜಾಗದಲ್ಲಿ ಕೂರಿಸಲು ಕಿರಿದಾದ ಕೊನೆಯಲ್ಲಿ ಥ್ರೆಡ್ ಭಾಗವನ್ನು ಹೊಂದಿದೆ. == ಚರಿತ್ರೆ == ಕಾಟರ್ ಮೂಲ ವಿನ್ಯಾಸವನ್ನು "ರುಡೋಲ್ಫ ಕಾಟರ್" ರವರು ೧೮೩೪ ರಲ್ಲಿ ವಿನ್ಯಾಸಗೊಳಿಸಿದರು. ಮೂಲ ವಿನ್ಯಾಸವು ಒಂದು ರಂಧ್ರವುಳ್ಳ ಬೋಲ್ಟ್ () ಮತ್ತು ಒಂದು ಲೋಹದ ಭಾಗವನ್ನು ಹೊಂದಿತ್ತು. == ಕಾಟರ್ ನ ವಿಧಗಳು == ಗಿಬ್ ರಹಿತ ಕಾಟರ್ ಎರಡು ಗಿಬ್ಗಳುಳ್ಳ ಕಾಟರ್ ಒಂದು ಗಿಬ್ ಉಳ್ಳ ಕಾಟರ್ == ಇವನ್ನೂ ನೋಡಿ == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==