ಕಾಡುಕೋಣ ಭಾರತದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ದಟ್ಟವಾದ ಕಾಡುಗಳಲ್ಲಿ ವ್ಯಾಪಕವಾಗಿ ಇರುವ ಪ್ರಾಣಿ. ಸಾಧಾರಣವಾಗಿ ೮-೧೨ರ ಹಿಂಡುಗಳಲ್ಲಿ ಕಂಡು ಬರುವುದು. ಒಂದು ಹಿಂಡು ಒಂದೇ ಕುಟುಂಬಕ್ಕೆ ಸೇರಿದ್ದರೂ ಅಹಾರ ಅನ್ವೇಷಣೆಯಲ್ಲಿ ಹಲವು ಗುಂಪುಗಳು ಸೇರಿಕೊಳ್ಳುತ್ತದೆ. == ವೈಜ್ಞಾನಿಕ ವರ್ಗೀಕರಣ == ಇಂಡಿಯನ್ ಬೈಸನ್ ಎಂದು ಕರೆಯಲ್ಪಟ್ಟರೂ ಇದರ ಸರಿಯಾದ ಹೆಸರು ಗೌರ್ ಎಂದಾಗಿದೆ. ಪ್ರಾಣಿಶಾಸ್ತ್ರೀಯ ವರ್ಗೀಕರಣದಲ್ಲಿ ಇದನ್ನು ರೀತ್ಯಾ 'ಬಸ್ ಗೌರಸ್' ಎಂದು ಕರೆಯುತ್ತಾರೆ. ಕೆಲವೆಡೆ ಕಾಟಿ ಎಂದೂ ಕರೆಯುತ್ತಾರೆ. == ಗುಣಲಕ್ಷಣಗಳು == ಕಾಡುಕೋಣದ ಸಾಧಾರಣವಾಗಿ ೧.೬ ಮೀ ಎತ್ತರವಿರುತ್ತವೆ. ಇವುಗಳು ದೊಡ್ಡಗಾತ್ರದ ದೇಹ ಮತ್ತು ಕೊಂಬುಗಳನ್ನು ಹೊಂದಿದೆ. ಇಳಿಜಾರು ಬೆನ್ನುಬ್ಬು ಕಾಡುಕೋಣಗಳ ವೈಶಿಷ್ಟ್ಯ. ಬೆಳೆದ ಕಾಡುಕೋಣಗಳ ಬಣ್ಣ ಎಳೆಗಂದು. == ಆಧಾರ ಗ್ರಂಥಗಳು == ವನಸಿರಿ:ಅಜ್ಜಂಪುರ ಕೃಷ್ಣಸ್ವಾಮಿ. = ಬಾಹ್ಯ ಸಂಪರ್ಕಗಳು = 2008-09-07 ವೇಬ್ಯಾಕ್ ಮೆಷಿನ್ ನಲ್ಲಿ. . - ( ) 2006-05-02 ವೇಬ್ಯಾಕ್ ಮೆಷಿನ್ ನಲ್ಲಿ. 2018-10-26 ವೇಬ್ಯಾಕ್ ಮೆಷಿನ್ ನಲ್ಲಿ.