ಕಾಡುಮಲ್ಲಿಗೆ (ವೈಲ್ಡ್ ಜಾಸ್ಮಿನ್) ಜಾಸ್ಮಿನಮ್ ಆಂಗಸ್ಟಿಫೋಲಿಯಮ್ ಎಂಬ ಸಸ್ಯಶಾಸ್ತ್ರೀಯ ಹೆಸರನ್ನುಳ್ಳ ಒಂದು ಹೂಬಿಡುವ ಸಸ್ಯ. ವನಮಲ್ಲಿಗೆ ಪರ್ಯಾಯನಾಮ. ಇದು ಭಾರತ, ಶ್ರೀಲಂಕಾ ಮತ್ತು ಅಂಡಮಾನ್ ದ್ವೀಪಗಳಿಗೆ ಸ್ಥಳೀಯವಾದ ಮಲ್ಲಿಗೆಯ ಒಂದು ಪ್ರಭೇದ. ದಕ್ಷಿಣ ಭಾರತದ ಕೆಳಎತ್ತರದ ಗುಡ್ಡ ಪ್ರದೇಶಗಳಲ್ಲೆಲ್ಲ ಬೆಳೆಯುವ ಕಾಡುಜಾತಿ ಮಲ್ಲಿಗೆ. ಕೃಷಿ ಮಾಡಿ ಕೂಡ ಬೆಳೆಸಬಹುದು. ಎಂಥ ಮಣ್ಣಿನಲ್ಲಾದರೂ ಬೆಳೆಯುತ್ತದೆ. == ವಿವರಣೆ == ಹಚ್ಚ ಹಸುರಾದ ಎಲೆಗಳು, ಸಮೃದ್ಧವಾಗಿ ಅರಳುವ ಹೂಗಳಿಂದಾಗಿ ಇದು ಕಿಟಕಿ, ಚೌಕಟ್ಟು ಮುಂತಾದೆಡೆ ಹಬ್ಬಿಸಿ ಬೆಳೆಸಲು ಉತ್ತಮ ಬಗೆಯದೆನಿಸಿದೆ. ಎಲೆಗಳು ಸರಳರೀತಿಯವು. ಹೂ ಬಿಳಿ ಬಣ್ಣದವು, ನಕ್ಷತ್ರದಾಕಾರವುಳ್ಳವು. ಒಂಟಿಯಾಗಿ ಅಥವಾ ತಲಾ ಮೂರು ಹೂವುಳ್ಳ ಮಂಜರಿಗಳಲ್ಲಿ ಅರಳುವುವು. == ಉಪಯೋಗಗಳು == ಈ ಸಸ್ಯದ ಬೇರನ್ನು ಔಷಧೀಯ ಗುಣಗಳಿರುವುದಕ್ಕೆ ಬಳಸಲಾಗುತ್ತದೆ. == ಉಲ್ಲೇಖಗಳು ==