ಕಾದಲವೇಣಿ (ಇಂಗ್ಲೀಷ್: ) ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಒಂದು ಹಳ್ಳಿ ಪ್ರದೇಶ. ಇದು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಲ್ಲಿದೆ. ಕಾದಲವೇಣಿಯು ಉಪ ಜಿಲ್ಲೆಯ ಕೇಂದ್ರ ಕಾರ್ಯಾಲಯ ಗೌರಿಬಿದನೂರಿನಿಂದ ಸುಮಾರು ೬ ಕಿ.ಮೀ ದೂರದಲ್ಲಿದೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಧಾನ ಕಛೇರಿಯಿಂದ ೪೪ ಕಿ.ಮೀ ದೂರದಲ್ಲಿದೆ. == ಇತಿಹಾಸ == ಕಾದಲವೇಣಿ ಎಂಬ ಹೆಸರು ಮೂಲತಃ ಕನ್ನಡದ "ಕಾಲು ಹರಿದ ಓಣಿ" ಎಂಬ ಪದದಿಂದ ಬಂದಿದ್ದು, ಕಾಲಕ್ರಮೇಣ ಇದು "ಕಾದಲವೇಣಿ"ಯಾಗಿ ಮಾರ್ಪಾಡಾಗಿದೆ ಎಂದು ಹೇಳಲಾಗುತ್ತದೆ. == ಜನಸಂಖ್ಯಾಶಾಸ್ತ್ರ == ೨೦೧೧ರ ಜನಗಣತಿಯ ಪ್ರಕಾರ ಸ್ಥಳ ಸಂಕೇತ ಅಥವಾ ಕಾದಲವೇಣಿ ಹಳ್ಳಿಯ ಗ್ರಾಮ ಕೋಡ್ ೬೨೩೨೬೨ ಎಂದು ನಮೂದಿಸಿದೆ. ೨೦೦೯ರ ಅಂಕಿ ಅಂಶಗಳ ಪ್ರಕಾರ, ಕಾದಲವೇಣಿ ಗ್ರಾಮವು ಗ್ರಾಮ ಪಂಚಾಯತ್ ಕೂಡ ಆಗಿದೆ. ಗ್ರಾಮದ ಒಟ್ಟು ಭೌಗೋಳಿಕ ಪ್ರದೇಶವು ೮೮೦.೩೨ ಹೆಕ್ಟೇರ್ ಆಗಿದೆ. ಕಾದಲವೇಣಿ ಗ್ರಾಮದಲ್ಲಿ ಒಟ್ಟು ೨,೫೧೨ ಜನಸಂಖ್ಯೆಯನ್ನು ಹೊಂದಿದ್ದು ೧,೨೫೪ ಪುರುಷರು ಮತ್ತು ೧,೨೫೮ ಹೆಂಗಸರಿದ್ದಾರೆ. ಈ ಗ್ರಾಮದಲ್ಲಿ ಸುಮಾರು ೫೯೯ ಮನೆಗಳಿವೆ. ಕಾದಲವೇಣಿ ಗ್ರಾಮಕ್ಕೆ ಸಮೀಪದಲ್ಲಿರುವ ಪಟ್ಟಣ ಗೌರಿಬಿದನೂರು, ಇದು ಸುಮಾರು ೬ ಕಿ.ಮೀ ದೂರದಲ್ಲಿದೆ. === ಕಾದಲವೇಣಿ ಗ್ರಾಮ ಪಂಚಾಯತ್ ಗ್ರಾಮಗಳು === ಗುಂಡಾಪುರ ಮರಳೂರು ವೈಚಕುರಾಹಳ್ಳಿ ಕಾದಲವೇಣಿ ಉಡಮಲೋಡು == ಸೌಲಭ್ಯಗಳು == ಕಾದಲವೇಣಿ ಗ್ರಾಮವು ಈ ಕೆಳಕಂಡ ಸೌಲಭ್ಯಗಳನ್ನು ಒಳಗೊಂಡಿದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರ್ಕಾರಿ ಪ್ರೌಢಶಾಲೆ ಕೆನರಾ ಬ್ಯಾಂಕ್ - ಈ ಬ್ಯಾಂಕ್ ಕಾದಲವೇಣಿ ಗ್ರಾಮದಿಂದ ಗೌರಿಬಿದನೂರು ರಸ್ತೆಯ ಕಡೆಗೆ ಇದೆ. ಗ್ರಾಮ ಪಂಚಾಯತ್ ಕಚೇರಿ (ಮಂಡಲ್ ಕಚೇರಿ) - ಗ್ರಾಮದ ಕೇಂದ್ರಭಾಗದಲ್ಲಿ. ಕೆ.ಎಂ.ಎಫ್ (ಕರ್ನಾಟಕ ಹಾಲು ಒಕ್ಕೂಟ) ಡೈರಿ - ಕಾದಲವೇಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಬಾಗದಲ್ಲಿದೆ. ಸರ್ಕಾರಿ ನ್ಯಾಯಬೆಲೆ ಅಂಗಡಿ - ಕರ್ನಾಟಕ ಸರ್ಕಾರದ ಸ್ವಾಮ್ಯದ್ದಾಗಿದೆ. ರಾಷ್ಟ್ರೀಯ ಹೆದ್ದಾರಿ-೨೦೬ - ಗೌರಿಬಿದನೂರು ಹಾಗೂ ಮಧುಗಿರಿಯನ್ನು ಸಂಪರ್ಕಿಸುತ್ತದೆ. == ದೇವಾಲಯಗಳು == ಹನುಮಾನ್ ದೇವಸ್ಥಾನ ಮಾರಮ್ಮ ದೇವಸ್ಥಾನ ಗಣೇಶ ದೇವಾಲಯ ಮಸೀದಿ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ://.../ 2019-03-10 ವೇಬ್ಯಾಕ್ ಮೆಷಿನ್ ನಲ್ಲಿ.