ಕಾಸರಕ ದಕ್ಷಿಣ ಏಷಿಯಾದ ಕಾಡುಗಳಲ್ಲಿ ಕಂಡು ಬರುವ ಪರ್ಣಪಾತಿ ಮರ.ಇದರ ಬೀಜ ವಾಣಿಜ್ಯಿಕವಾಗಿ ಬೆಲೆಬಾಳುತ್ತದೆ. == ಸಸ್ಯಶಾಸ್ತ್ರೀಯ ವರ್ಗೀಕರಣ == ಇದು ಲೊಗನಿಯಸಿಯೆ ಕುಟುಂಬಕ್ಕೆ ಸೇರಿದ್ದು,ಸ್ಟ್ರಿಕ್ನೋಸ್ ಸಸ್ಯಕುಲದಲ್ಲಿ ಸ್ಟ್ರಿಕ್ನೋಸ್ ನಕ್ಸ್-ವೊಮಿಕ ಎಂದು ಕರೆಯಲ್ಪಡುತ್ತದೆ.ಕನ್ನಡದಲ್ಲಿ ನಂಜಿನಕೊರಡು,ಕಾತರಿಕೆ,ವಿಷಮುಷ್ಠಿ ಎಂದೂ,ತುಳುವಿನಲ್ಲಿ 'ಕಾಯೆರ್' ಎಂದೂ ಕರೆಯುತ್ತಾರೆ. == ಸಸ್ಯದ ಗುಣಲಕ್ಷಣಗಳು == ಮಧ್ಯಮ ಪ್ರಮಾಣದ ಮರ.ನುಣುಪಾದ ಎಲೆಗಳಿಂದ ಕೂಡಿದ್ದು ನೋಡಲು ಸುಂದರವಾಗಿದೆ.ಕೇಸರಿ ಬಣ್ಣದ ಹಣ್ಣು ಇದ್ದು ಒಳಗೆ ಗುಂಡಿಗಳಂತಿರುವ ಬೀಜವಿರುತ್ತದೆ.ಬೀಜಗಳು ವಿಷಕಾರಿ.ಹಣ್ಣಿನಲ್ಲಿಯೂ ಸ್ವಲ್ಪ ಪ್ರಮಾಣದ ವಿಷವಸ್ತು ಇದೆ.ದಾರುವು ಗಡುಸಾಗಿದ್ದು ಕಳಪೆ ಗುಣಮಟ್ಟದ್ದಾಗಿದೆ. == ಉಪಯೋಗಗಳು == ಇದರ ಬೀಜದಿಂದ 'ಸ್ಟ್ರಿಕ್ನಿನ್'()ಮತ್ತು 'ಬ್ರೂಸಿನ್'()ಎಂಬ ಸಸ್ಯಕ್ಷಾರ()ನ್ನು ಬೇರ್ಪಡಿಸುತ್ತಾರೆ.ಇದರ ಕೊರಡನ್ನು ಹಳ್ಳಿಮದ್ದಿನಲ್ಲಿ ನಂಜುನಿವಾರಕವಾಗಿ ಬಳಸುತ್ತಾರೆ. == ಆಧಾರ ಗ್ರಂಥಗಳು ==