ಕಿರಿಬಾಟಿ (ಗಿಲ್ಬರ್ಟೀಸ್ ಭಾಷೆಯಲ್ಲಿ: ಕೀರೀಬಾಸ್), ಅಧಿಕೃತವಾಗಿ ಕಿರಿಬಾಟಿ ಗಣರಾಜ್ಯ, ಶಾಂತ ಮಹಾಸಾಗರದಲ್ಲಿ ಒಷ್ಯಾನಿಯದಲ್ಲಿರುವ ಒಂದು ದ್ವೀಪ ರಾಷ್ಟ್ರ. ಭೂಮಧ್ಯರೇಖೆಯ ಎರಡೂ ಕಡೆಯಲ್ಲಿ ೩.೫ ಮಿಲಿಯನ್ ಚದುರ ಕಿ.ಮಿ.ಗಳ ವಿಸ್ತಾರದಲ್ಲಿ ಚದುರಿರುವ ೩೩ ದ್ವೀಪಗಳು ಈ ದೇಶವನ್ನು ಸೇರುತ್ತವೆ. ಈ ದೇಶದ ಸ್ವಾತಂತ್ರ್ಯದ ಮುಂಚಿನ ಹೆಸರಾದ ಗಿಲ್ಬರ್ಟ್ ದ್ವೀಪಗಳು ಪ್ರದೇಶದ ಭಾಷೆಯಲ್ಲಿ ಕಿರಿಬಾಟಿ ಎಂದು ಪರಿವರ್ತನೆಗೊಂಡು ಪ್ರಸ್ತುತ ಹೆಸರು ಬಂದಿದೆ.