ಕಿರ್ಗಿಸ್ಥಾನ್ (ಕಿರ್ಗಿಜ್ ಭಾಷೆಯಲ್ಲಿ: Кыргызстан; ರಷ್ಯನ್ ಭಾಷೆಯಲ್ಲಿ: Киргизия) , ಅಧಿಕೃತವಾಗಿ ಕಿರ್ಗಿಜ್ ಗಣರಾಜ್ಯ, ಮಧ್ಯ ಏಷ್ಯಾದ ಒಂದು ಭೂಆವೃತ ದೇಶ. ಅನೇಕ ಪರ್ವತಗಳಿರುವ ಈ ದೇಶದ ಉತ್ತರಕ್ಕೆ ಕಜಾಕಸ್ಥಾನ್, ಪಶ್ಚಿಮಕ್ಕೆ ಉಜ್ಬೀಕಿಸ್ಥಾನ್, ನೈರುತ್ಯಕ್ಕೆ ತಾಜಿಕಿಸ್ಥಾನ್ ಮತ್ತು ಆಗ್ನೇಯಕ್ಕೆ ಚೀನಗಳಿವೆ.