ಕುಂ. ವೀರಭದ್ರಪ್ಪ ಅವರು ಕನ್ನಡದ ಖ್ಯಾತ ಸಾಹಿತಿ. ಅವರ ಅರಮನೆ ಕೃತಿಗೆ ೨೦೦೭ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. == ಜನನ == ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನಲ್ಲಿ ಅಕ್ಟೋಬರ್ ೧, ೧೯೫೩ರಲ್ಲಿ ಜನನ. ತಂದೆ ಕುಂಬಾರ ಹಾಲಪ್ಪ, ತಾಯಿ ಕೊಟ್ರಮ್ಮ, ಪತ್ನಿ ಅನ್ನಪೂರ್ಣ. ಮಕ್ಕಳು ಪುರೂರವ, ಶಾಲಿವಾಹನ ಮತ್ತು ಪ್ರವರ. ಮೊಮ್ಮಗ ಅಥರ್ವ. ಎಂ ಎ ಪದವೀಧರರು. ಆಂಧ್ರಪ್ರದೇಶದ ಹಳ್ಳಿಗಳಲ್ಲಿ ೩೫ ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವರು. ಗ್ರಾಮೀಣ ಬದುಕಿನ ಸಂವೇದನೆಗಳನ್ನು ತಮ್ಮ ಕೃತಿಗಳಲ್ಲಿ ಸಮರ್ಥವಾಗಿ ಬಳಸಿಕೊಂಡಿರುವ ಬರಹಗಾರ. ಇವರು ಬಳಸುವ ಭಾಷೆಯೂ ಕೂಡ ವಿಶಿಷ್ಟವಾದುದು. ಬಿರುಬಿಸಿಲು ನಾಡಿನ ಬಳ್ಳಾರಿ ಪ್ರದೇಶದ ಗಂಡು ಭಾಷೆಯೇ ಇವರ ಬರಹಕ್ಕೆ ಮತ್ತಷ್ಟು ಶಕ್ತಿ ನೀಡಿವೆ. ಈಗ ತಮ್ಮ ಜನ್ಮಸ್ಥಳವಾದ ಬಳ್ಳಾರಿ ಜಿಲ್ಲೆಯ ಕೊಟ್ಟೂರಲ್ಲಿ ನೆಲಸಿದ್ದಾರೆ. == ಕೃತಿಗಳು == == ಪ್ರಶಸ್ತಿಗಳು == ತುಮಕೂರಿನ ವೀಚಿ ಪ್ರತಿಷ್ಠಾನ ಪ್ರಶಸ್ತಿ ರಾಣೆಬೆನ್ನೂರಿನ ಲದ್ವಾ ಪ್ರತಿಷ್ಠಾನ ಪ್ರಶಸ್ತಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸಂದೇಶ ಪ್ರಶಸ್ತಿ ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ೧೯೮೬, ೨೦೦೦ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ ವರ್ಧಮಾನ ಪ್ರಶಸ್ತಿ ೧೯೮೮ ಲಂಕೇಶ ಪ್ರತಿಷ್ಠಾನ ಪ್ರಶಸ್ತಿ ೨೦೦೬ ಅರಮನೆ (ಕಾದಂಬರಿಗೆ)ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೨೦೦೭ ಪ್ರೊ. ಕೆ. ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೃಪತುಂಗ ಪ್ರಶಸ್ತಿ<< == ಚಲನಚಿತ್ರಗಳು == ಮನಮೆಚ್ಚಿದ ಹುಡುಗಿ (ಬೇಟೆ ಕಿರು ಕಾದಂಬರಿಯಾಧಾರಿತ) ದೊರೆ (ಬೇಲಿಯ ಹೂಗಳು ಕಾದಂಬರಿಯಾಧಾರಿತ) ಕೊಟ್ರೇಶಿ ಕನಸು (ಇದಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ) ಕೆಂಡದ ಮಳೆ ಕೂರ್ಮಾವತಾರ(ಇದಕ್ಕೆ ರಾಷ್ಟ್ರೀಯ ಪ್ರಶಸ್ತಿ ಹಾಗೂ ವೈಯಕ್ತಿಕ ಕಥಾಪ್ರಶಸ್ತಿ ಲಭಿಸಿದೆ.) ಭಗವತಿ ಕಾಡು ಬೇಲಿ ಮತ್ತು ಹೊಲ == ಉಲ್ಲೇಖಗಳು ==