ಕುಪ್ಪಂ ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯಲ್ಲಿ ಇರುವ ಒಂದು ಜನಗಣತಿ ಪಟ್ಟಣ. ಇದು ಮದನಪಲ್ಲೇ ಕಂದಾಯ ವಿಭಾಗದ ಅದೇ ಹೆಸರಿನ (ಕುಪ್ಪಂ ಮಂಡಲ) ಮಂಡಲ ಪ್ರಧಾನ ಕಾರ್ಯಸ್ಥಾನವಾಗಿದೆ. == ಜನಸಂಖ್ಯಾಶಾಸ್ತ್ರ == ಭಾರತದ ೨೦೧೧ರ ಜನಗಣತಿಯ ಪ್ರಕಾರ, ಕುಪ್ಪಂ ೨೧,೯೬೩ ಜನಸಂಖ್ಯೆಯನ್ನು ಹೊಂದಿತ್ತು. ಇವರಲ್ಲಿ ೧೧,೦೯೧ ಗಂಡಸರು ಮತ್ತು ೧೦,೮೭೨ ಹೆಂಗಸರು ಇದ್ದಾರೆ. ತಲಾ ೧೦೦೦ ಪುರುಷರಿಗೆ ೯೮೦ ಸ್ತ್ರೀಯರಿದ್ದಾರೆ. ೨,೫೫೧ ಮಕ್ಕಳು ೦-೬ ವರ್ಷಗೊಳಗಿನವರು, ಅವರಲ್ಲಿ ೧,೩೪೦ ಹುಡುಗರು ಮತ್ತು ೧,೨೧೧ ಹುಡುಗಿಯರಿದ್ದಾರೆ. ಕುಪ್ಪಂನಲ್ಲಿ ೧೬,೨೩೨ ಸಾಕ್ಷರಸ್ತರಿದ್ದು ಅದರ ಸರಾಸರಿ ಸಾಕ್ಷರತಾ ಪ್ರಮಾಣ ೮೩.೬೨% ರಾಜ್ಯದ ಸರಾಸರಿ ೬೭.೪೧ % ಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. == ==