ಕುರುಬರು ಇದು ಹಿಂದು ಧರ್ಮದ ಒಂದು ಜಾತಿ. ಇವರನ್ನು ಕುರುಬ, ಕುರುಮ, ಕುರುಂಬ, ಗಾದರಿಯ ಎಂದು ಕರೆಯುತಾರೆ. ಇವರುಗಳು ಹೆಚ್ಚಾಗಿ ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕಂಡುಬರುತ್ತಾರೆ. ಕರ್ನಾಟಕದಲ್ಲಿ ಇವರು ಸಂಖ್ಯಯಲ್ಲಿ ಮೂರನೇ ಒಂದರಷ್ಟರಿದ್ದಾರೆ. ಇವರ ಕುಲ ಕಸುಬು ಕುರಿಕಾಯುವುದು. == ಪೂರ್ವ ಇತಿಹಾಸ == ಕುರುಬಗೌಡ/ಹಾಲುಮತ ಗೌಡ ಜನಾಂಗ ತುಂಬಾ ಪುರಾತನವಾದ ಜನಾಂಗ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲ್ಲಿದ್ದ ಗೆಡ್ಡೆ, ಗೆಣಸು ತಿನ್ನುತಿದ್ದ. ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವುದನ್ನು ಕಲಿತ, ನಂತರ ಅವನು ಹಳ್ಳಿಗಳಲ್ಲಿ ವಾಸಿಸತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆ ಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ಒಕ್ಕಲುತನ ಮಾಡುವನು ಒಕ್ಕಲಿಗನಾದ, ಬೇಟೆಯಾಡುವವನು ಬೇಡನಾದ, ಮಡಿಕೆ ಮಾಡುವವನು ಕುಂಬಾರನಾದ, ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನ್ನು ಮಾಡತೊಡಗಿದರು. ಹೀಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು. ಭಾರತದ ದಕ್ಷಿಣಾಪಥದಲ್ಲಿ ದೊರೆತ ಗೋರಿ ಹಾಗೂ ಇತರೆ ಅವಶೇಷಗಳ ಆಧಾರದ ಮೇಲೆ ವಂಶಶಾಸ್ತ್ರಜ್ಞರಾದ ಹ್ಯಾಡೋನ್ ಅವರು ಕುರುಬರ ಚರಿತ್ರೆಯನ್ನು ಕ್ರಿ.ಪೂ. 4000-5000 ದಷ್ಟು ಹಿಂದಕ್ಕೆ ಒಯ್ತುತ್ತಾರೆ. ಮಧ್ಯ ಏಶಿಯಾದಿಂದ ಹೊರಟು ತಮ್ಮ ಬದುಕಿಗೆ ನೆಲೆಗಳನ್ನು ಹುಡುಕುತ್ತ ಇವರು ಬೋಲನ್ ಕಣಿವೆ ಮೂಲಕ ಭಾರತವನ್ನು ಪ್ರವೇಶಿಸಿ ಇಲ್ಲಿ ತಮ್ಮ ಸಂಸ್ಕೃತಿಯನ್ನು ರೂಪಿಸಿಕೊಂಡಿದ್ದಾರೆ. ಕುರುಬರನ್ನು ಹಟ್ಟಿಕಾರರೆಂದೂ ಕರೆಯುತ್ತಾರೆ. ಈ ಹಟ್ಟಿಕಾರರ ಉಲ್ಲೇಖ ರುದ್ರಾಧ್ಯಾಯದಲ್ಲಿ ಬರುತ್ತದೆಯಾದ್ದರಿಂದ ಕ್ರಿ.ಶ.ಪೂ 1200-2000 ವೇಳೆಗೆ ಕುರುಬ ಸಮಾಜ ಸುವಿಖ್ಯಾತವಾಗಿತ್ತೆಂದು ಸಂಬಾ ಜೋಶೀ ಅವರು ಅಭಿಪ್ರಾಯ ಪಟ್ಟಿದ್ದಾರೆ. ಕ್ರಿ.ಶ. ಮೂರನೆಯ ತಮಾನದಷ್ಟೊತ್ತಿಗೆ ಕುರುಬರು ಪ್ರಭುಗಳಾಗಿ ಅಧಿಕಾರದ ಗದ್ದುಗೆ ಏರಿದ್ದರು ಎಂದು ಸರ್ ಡಬ್ಲೂ ಇಲಿಯಟ್ ಅಭಿಪ್ರಾಯಪಡುತ್ತಾರೆ. ದಕ್ಷಿಣ ಭಾರತದಲ್ಲಿ ದೊರೆಯುವ ಅತೀ ಪ್ರಾಚೀನ ನಾಣ್ಯಗಳೆಂದರೆ ಕುರುಬರದೇ ಎನ್ನುತ್ತಾರೆ ಇಲಿಯಟ್. ಕುರುಬರು ಮೊದಲು ಸ್ಥಾಪನೆ ಮಾಡಿದ ಪಟ್ಟಣದ ಹೆಸರು ಪುಲಾಲ. ಈ ರಾಜ್ಯಕ್ಕೆ ಕುರುಂಬರ ನಾಡು ಎಂದು ಕರೆಯುತ್ತಿದ್ದರು. ಕೇರಳದ ಮಲಬಾರ ಜಿಲ್ಲೆಯಲ್ಲಿ ಈ ಹೆಸರಿನ ಪ್ರದೇಶ ಇಂದಿಗೂ ದೊರೆಯುತ್ತದೆ. ವಿಜಯನಗರ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ ಹಕ್ಕಬುಕ್ಕರು, ಕದಂಬರು, ಪಲ್ಲವರು, ದೇವಗಿರಿಯ ಯಾದವರು, ಇಂದೂರಿನ ಹೋಳ್ಕರ್, ಬಡೋದೆಯ ಗಾಯಕವಾಡರು, ರಾಷ್ಟ್ರಕೂಟ ದೊರೆಗಳು ಇವರೆಲ್ಲ ಕುರುಬರೇ ಎಂದು ಚರಿತ್ರೆಕಾರರು ನಿರ್ಣಯಿಸಿದ್ದಾರೆ. ಹೀಗೆ ಕುರುಬರ ಚರಿತ್ರೆಯೇನೋ ಬಹು ಪ್ರಾಚೀನವಾಗಿದೆ. == ಇತಿಹಾಸ == ಕುರುಬರು ಮೂಲತಃ ನಾಗಕುಲದವರು. ಪಲ್ಲವರು ಎಂದು ಕರ್ನಾಟಕದಲ್ಲಿ, ಪೊಲಿಯಾರ್/ ಪೊಲಯರ್ ಎಂದು ಕೇರಳದಲ್ಲಿ ಪಲ್ಲಿಗ ಎಂದು ಮಹಾರಾಷ್ಟ್ರದಲ್ಲಿ, ಉತ್ತರ ಭಾರತದೆಡೆ ಹಟ್ಟಿಗಾರರೆಂದು ಗುರುತಿಸಲ್ಪಡುತ್ತಾರೆ‌. ಕುರುಬರು ಸಿದ್ದ ಶೈವ ಶಾಖೆಯವರು. ಪಲ್ಲವರು ೫ ರಿಂದ ೭ನೇ ಶತಮಾನದಲ್ಲಿ ಲಿಂಗ ದರಿಸುತ್ತಿದ್ದರು ಎಂಬ ವಿವರ ಶಾಸನಗಳಲ್ಲಿ ಇದೆ. ಪಲ್ಲವರ ಸಹೋದರ ವಂಶಾವಳಿ ಛಲವಾದಿ ಚಾಳುಕ್ಯ ಮಾದಿಗರು (ಕುರುಬರಲ್ಲಿ ಸಾದರು) ಸಹ ಲಿಂಗದಾರಿಗಳಾಗಿದ್ದ ವಿವರವಿದೆ. ೨ನೇ ಶತಮಾನದಲ್ಲಿ ಭಾರತದ ವಂಶಸ್ಥರು ಭಾರ ಕುಲದ ಮಾದಿಗರು ಭಾರಶಿವನೆಂಬ ರಾಜ ಲಿಂಗದಾರಿಯಾದ ವಿವರಗಳಿವೆ. ಕುರುಬರಲ್ಲಿ ಲಿಂಗವನ್ನು ಕರಡಿಗೆಯಲ್ಲಿ ಪೂಜಿಸುವ ಕ್ರಮವಿದೆ. ವೀರಶೈವವು ಮತವಾಗಿ ಪರಿವರ್ತಿತವಾಗುವ ಸಮಯದಲ್ಲಿ ಕುರುಬರ ಪ್ರಭಾವ ಅಪಾರವಾದದ್ದು. ಕುರುಬರ ರೇವಣಸಿದ್ದ ವೀರಶೈವ ಕುರುಬರ ಮೂಲ ಪುರುಷ. ಕುರುಬರ ಗುಡ್ಡದ ಮಲ್ಲಯ್ಯ(ಶ್ರೀ ಶೈಲ ಮಲ್ಲಿಕಾರ್ಜುನ ಸಂಪ್ರದಾಯ), ಬೀರೇಲಿಂಗೇಶ್ವರ(ವೀರಭದ್ರ ಸಂಪ್ರದಾಯ), ಕುರುಬರ ಕಾರ್ಣೀಕ ಮೈಲಾರಲಿಂಗ(ಮಹಾಂತ ಸಂಪ್ರದಾಯ), ಕುರುಬರ ದಳವಾಯಿ( ಪುರವಂತರು), ಕುರುಬರ ನೊಳಂಬ ಪಲ್ಲವ (ನೊಣಬ ಲಿಂಗಾಯತ) ಇತ್ಯಾದಿ. ಇದಲ್ಲದೆ ಕಂಚಿ ಕುರುಬ, ಮೂಳ್ಳು ಕುರುಬ, ಹಾಲುಕುರುಬ, ಹೆಂಡೆಕುರುಬ, ಕಂಬಳಿಕುರುಬ, ಹೊಸಕುರುಬ, ಹಳೆಕುರುಬ, ಕಂಬಿಕುರುಬ, ,ಸಾದಕುರುಬ, ಮೊದಲಾದ ಒಳಪ್ರಭೇಧಗಳು ಇವರಲ್ಲಿವೆ. ಕುರಿ ಹಿಕ್ಕೆಯಲ್ಲಿಯೇ ಲಿಂಗವನ್ನು ಕಂಡು ಭಗವಂತನನ್ನು ಮರುಳು ಮಾಡಿ ಕುರಿ ಹಟ್ಟಿಯಲ್ಲಿ ಬೀರಪ್ಪ, ಮಾಳಿಂಗರಾಯನನ್ನು ಸಾಕ್ಷತ್ಕಾರ ಮಾಡಿಕೊಂಡು ಮುಗ್ಧ ಭಕ್ತಿ ಪರಂಪರೆಗೆ ಕುರುಬರು ಸಾಕ್ಷಿಯಾಗಿದ್ದಾರೆ. ಪರಿಶ್ರಮಿಕರಾದ ಕುರಿ ಕಾಯುವ ಕುರುಬರು ಸದಾ ನಿಸರ್ಗದಲ್ಲಿದ್ದು ಮಳೆ ನಕ್ಷತ್ರ, ಮಳೆ-ಬೆಳೆ, ಬರಗಾಲ, ರಾಜನೀತಿ ಮಹತ್ವದ ದಿನಮಾನಗಳನ್ನು ತಮ್ಮ ರಟ್ಟುಮತ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ == ಕುಲ ಮತ್ತು ಸಾಲು == ಇವರುಗಳಲ್ಲಿ ಸಾವಂತಕುಲ, ಗೌಡಕುಲ, ಬಸರಿಕುಲ, ಬೇಲಕುಲ,ಬಳೆಗಾರಕುಲ, ಬೆಣಛುಕುಲ, ಬೇವುಕುಲ, ಬೀರಕುಲ, ಬಾನಕುಲ, ಬೆಣ್ಣೆಕುಲ, ಗಾಳಿಕುಲ, ಗರಿಕೆಕುಲ, ಗೊಬ್ಬರಕುಲ, ಗುಡಿಕುಲ, ಹೊನ್ನಕುಲ, ಜೀರಿಗೆಕುಲ, ತುಂಬೆಕುಲ, ವನಕುಲ, ಲಕ್ಷ್ಮಿಕುಲ, ಗಣ ಕಕುಲ, ಬಡಗಕುಲ, ಬಾಳೆಕುಲ, ಆಡುಕುಲ, ಆನೆಕುಲ, ಆಣ್ಣಿಕುಲ, ಅರಿಶಿನಕುಲ, ಆಲುಕುಲ, ಅತ್ತಿಕುಲ, ಬಂಡಿಕುಲ, ಎಮ್ಮೆಕುಲ, ಆವರೆಕುಲ, ಚಂದನಕುಲ ಎಮ ಕುಲಗಳಿದ್ದು ಕುಲದಹೊರಗಡೆ ವಿವಾಹ ಬಾಂಧವ್ಯ ನಡೆಸುತ್ತಾರೆ. ಜೊತೆಗೆ 'ದೊಡ್ಡಮ್ಮನ ಸಾಲು', 'ಚಿಕ್ಕಮ್ಮನ ಸಾಲು' ಎಂಬ ಸಾಲುಗಳೂ ಇದ್ದು, ಈ ಸಲುಗಳ ನಡುವೆ ರಕ್ತ ಸಂಬಂಧ ಬೆಳೆಯುವುದಿಲ್ಲ. ಹಾಲು ಕ್ರುಬರಲ್ಲೇ 'ಹತ್ತಿಕಂಕಣದವರು', 'ಉಣ್ಣೇಕಂಕಣದವರು' ಎಂಬ ಒಳಭೇಧ ಇದೆ. ವಿವಾಹ ಸಂಧರ್ಭದಲ್ಲಿ ಕಂಕಣ ಕಟ್ಟುವಾಗ ಮಾತ್ರ ಸಾಲುಗಳನ್ನು ಗಮನಿಸುತ್ತಾರೆ. ಇಲ್ಲಿ ಜಾತಿ ಪಂಚಾಯಿತಿಗಳು ಅಸ್ತಿತ್ವದಲ್ಲಿದ್ದು, ಹಬ್ಬವಾರುಗಳ ನಿಷ್ಕರ್ಷೆಕ್ಕೆ ಮಾತ್ರ ಒಂದೆಡೆ ಸೇರುತ್ತಾರೆ. == ಸಂಪ್ರದಾಯ == ಕೆರೆಸಂತೆ ಶ್ರೀ ಲಕ್ಕಮ್ಮ ದೇವಿ ದೊಡ್ಡ ಜಾತ್ರೆ. ಕೆರೆಸಂತೆ ಕಡೂರ್ ಶ್ರೀರೇವಣ ಸಿದ್ಡೇಶ್ವರ ಜಾತ್ರೆ ಹೊಳೆ ಸೇವೆ ಶ್ರೀ ಮದ್ ಶಾಂತ ಸಿಂಹಾಸನ ಅಣತಿ ಮಠದ ರೇಣುಕ ಜಯಂತಿ, ಚನ್ನರಾಯಪಟ್ಟಣ ತಾ ಹಾಸನ ಜಿಲ್ಲೆ ಮೈಲಾರ ಜಾತ್ರೆ ಮಾದೇಶ್ವರ ಜಾತ್ರೆ ಬೀರೆದೇವರ ಜಾತ್ರೆ ಕನಕದಾಸ ಜಯಂತಿ ಕಾರ್ಣಿಕೋತ್ಸವ ಮಾರಿ ಹಬ್ಬ ಬಿಳಿಗಿರಿ ರಂಗನಾಥ ಸ್ವಾಮಿ ಜಾತ್ರೆ ದೊಡ್ಡ ದ್ಯವರ ಜಾತ್ರೆ == ಕುರುಬ ಉಪ ಜಾತಿಗಳು == ಕಾಡು ಕುರುಬ ಜೇನು ಕುರುಬ ಸಂಚಾರಿ ಕುರುಬ ಗೊಂಡ ಕುರುಬ ಬೆಟ್ಟ ಕುರುಬ ದೊಡ್ಡ ಕುರುಬ == ಕುರುಬ ಇತಿಹಾಸ ಕತೆಗಳು == ಹಾಲುಮತ ಕುರುಬ ಪುರಾಣ ಮಾದೇಶ್ವರ ಪುರಾಣ == ಕುರುಬ ಜನಪದ ಕಲೆಗಳು == ಕಂಸಾಳೆ ಭಜನೆ ಗೀತೆಗಳು ಕೋಲಾಟ ಡೊಳ್ಳು ಕುಣಿತ ಗೊರವರ ಕುಣಿತ ಬೀರೆದೇವರ ಕುಣಿತ ವೀರಗಾಸೆ ಡೊಳ್ಳಿನ ಪದ == ಕುರುಬ ಧರ್ಮಕ್ಷೇತ್ರಗಳು == ಶ್ರೀ ರೇಣುಕಾಚಾರ್ಯರ ಮಹಾ ಸಂಸ್ಥಾನ, ಸರವೂರು, ಬಿಜಾಪುರ ಜಿಲ್ಲೆ. ಮಾಳಿಂಗರಾಯನ ಮುಂಡಾಸ (ಶೀವ ಪಾರ್ವತಿಯಿಂದ) ಮಹೋತ್ಸವ ಹುಲಿಜಂತಿ, ಮಹಾರಾಷ್ಟ್ರ. ಶ್ರೀ ಗುರು ಗೌರಿ ಸೋಮಲಿಂಗೇಶ್ವರ ಮಾಯಿ ಮಖಣಾಪುರ. ಶ್ರೀ ಯೋಗಿ ಅಮೋಘಸಿದ್ಧೇಶ್ವರ, ಮಮ್ಮೇಟ ಗುಡ್ಡ, ಜಾಲಗೇರಿ, ವಿಜಯಪುರ ಜಿಲ್ಲಾ. . ಶ್ರೀ ಹಾಲ ಮರಡಿಸಿದ್ದೇಶ್ವರ ದೇವಸ್ಥಾನ ಹೊನವಾಡ ಶ್ರೀ ರೇಣುಕಾಚಾರ್ಯರ ಮಹಾ ಸಂಸ್ಥಾನ, ಅಣತಿ, ಹಾಸನ ಜಿಲ್ಲೆ ಶ್ರೀ ಬೀರಲಿಂಗೇಶ್ವರ ಸ್ವಾಮಿ {ಮಜ್ಜಗೆ ಹಳದ ಅಯ್ಯ}ಕಕ್ಕೆಹಳ್ಳಿ, ಚನ್ನರಾಯಪಟ್ಟಣ ತಾ ಹಾಸನ ಜಿಲ್ಲೆ. ಶ್ರೀ ಲಕ್ಷೀದೇವಿ ದೇವಸ್ಥಾನ ಕೆರೆಸಂತೆ ಕಡೂರು ತಾ ಚಿಕ್ಕಮಗಳೂರು ಜಿ ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟ ಬಿಳಿಗಿರಿ ರಂಗನಾಥ ಸ್ವಾಮಿ ಬೆಳಕು ಮಾ ದಶಮಿಯ ಬೆಟ್ಟ ಮೈಲಾರ ಕಾಗಿನೆಲೆ ಹಂಪಿ ಶ್ರೀ ಹಿರೇಬೀರಲಿಂಗೇಶ್ವರ ಸ್ವಾಮಿ ದೇವಾಲಯ, ದೇವರ ಆದಿಹಳ್ಳಿ, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ, ಶ್ರಿ ರಂಗನಾಥ [[ಗುಡ್ಡದ ಮಲ್ಲಯ್ಯ, ಹಲ್ಹಹಾರ್ವಿ ಗ್ರಾಮ ಮತ್ತು ಮಂಡಲೆ, ಆಲೂರು ತಾಲುಕು, ಕರ್ನುಲ್ ಜಿಲ್ಲೆ, ಆಂದ್ರಾಪ್ರದೇಶ್ (ಗಡಿನಾಡು)]] ಬಲ್ಲೂರಪ್ಪ, ಹಲ್ಹಹಾರ್ವಿ ಗ್ರಾಮ ಮತ್ತು ಮಂಡಲೆ, ಆಲೂರು ತಾಲುಕು, ಕರ್ನುಲ್ ಜಿಲ್ಲೆ, ಆಂದ್ರಾಪ್ರದೇಶ್ (ಗಡಿನಾಡು) ಶ್ರೀ ಸೋಮೇಶ್ವರ ದೇವಸ್ಥಾನ ಕಡೂರು ಚಿಂಚಲ್ಲಿ ಮಾಯವ್ವ ಶ್ರೀ ಹಳ್ಳದ ಬೀರಲೀಂಗೇಶ್ವರ ದೇವಾಸ್ಥನ, ಶಂಕರನಹಳ್ಳಿ, ಜಾವಗಲ್ ಶ್ರೀ ಬೀರಲಿಂಗೇಶ್ವರ, ಲಕ್ಕಿಹಳ್ಳಿ, ಮುಗಲಿಕಟ್ಟೆ, ಕಡೂರು. ಬೂದಿ ಮುಚ್ಚಿದ ಕೆಂಡ ಶ್ರೀ ಬೀರಲಿಂಗೇಶ್ವರ ಸ್ವಾಮಿ ಬಂದೂರು , ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕು,ಹಾಸನ ಜಿಲ್ಲೆ. == ಇತಿಹಾಸ ಪುರುಷರು == ಶ್ರೀ ಗುರು ರೇವಣಸಿದ್ದೇಶ್ವರರು ಜಗದ್ಗುರು ಶಾಂತ ಮುತ್ತಯ್ಯ (ಶಾಂತಿಮಯ್ಯ)ಒಡೆಯರ್ ಮಹಾಕವಿ ಕಾಳಿದಾಸ ದಾಸ ಶ್ರೇಷ್ಟ ಕನಕದಾಸ ಕ್ರಾಂತಿ ವೀರಸಂಗೊಳ್ಳಿ ರಾಯಣ್ಣ ಮಹಾತ್ಮಾ ಬೋಮ್ಮಗೊಂಡೇಶ್ವರ == ಬಾಹ್ಯ ಸಂಪರ್ಕಗಳು == ಕರ್ನಾಟಕ ಪ್ರದೇಶ ಕುರುಬರ ಸಂಘ. 2014-04-09 ವೇಬ್ಯಾಕ್ ಮೆಷಿನ್ ನಲ್ಲಿ. ಕುರುಬ ಬಳಗ ಹಾಲುಮತ ಕುರುಬ 2014-08-14 ವೇಬ್ಯಾಕ್ ಮೆಷಿನ್ ನಲ್ಲಿ. ಆಂಧ್ರ ಕುರುಬ 2011-05-21 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==