ಕುಲ್ಲು ಅಥವ ಕುಲು ಭಾರತದ ರಾಜ್ಯವಾದ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಪ್ರಮುಖ ಪಟ್ಟಣ. ಈ ಪಟ್ಟಣವು ಬುಂಟರ್ ಅಂತಾರಾಷ್ಟ್ರೀಯ ನಿಲ್ದಾಣದಿಂದ ೧೦ ಕಿ.ಮಿ ಉತ್ತರಕ್ಕಿರುವ ಕುಲ್ಲು ಕಣಿವೆಯಲ್ಲಿರುವ ಬೀಸ್ ನದಿಯ ದಂಡೆಯಲ್ಲೆದೆ. ಕುಲ್ಲು ಪಟ್ಟಣವು ಮನಾಲಿ ಮತ್ತು ಲಾರ್ಗಿಯ ನಡುವಿನಲ್ಲಿ ಬೀಸ್ ನದಿಯಿಂದ ನಿರ್ಮಿತವಾದ ವಿಶಾಲವಾದ ತೆರೆದ ಕಣಿವೆ. ಕುಲುವಿನ ಪುರಾತನ ಹೆಸರು ಕುಲಾಂತಿ ಪೀಠ‌. ಇದು ಚಂಡಿಗಡದಿಂದ ೨೩೩ ಕಿ.ಮೀ. ದೂರದಲ್ಲಿದೆ. ಈ ಪ್ರದೇಶದ ಸರಾಸರಿ ಎತ್ತರ ೧೨೨೦ ಮೀ. ಈ ಕಣಿವೆಯು ಅದರ ಸೌಂದರ್ಯ, ಧಾರ್ಮಿಕ ಸ್ಥಳಗಳು ಹಾಗು ಪೈನ್, ದೇವದಾರು ಮತ್ತು ವಿಸ್ತಾರವಾದ ಸೇಬು ತೋಟಗಳಿಂದ ಆವೃತ್ತವಾದ ಬೆಟ್ಟಗಳಿಗೆ ಪ್ರಸಿದ್ಧಿ ಹೊಂದಿದೆ. ಕುಲ್ಲು ಕಣಿವೆಯು ಪಿರ್ ಪನ್ಜಲ್, ಕೆಳ ಹಿಮಾಲಯ ಮತ್ತು ಶ್ರೇಷ್ಠ ಹಿಮಾಲಯನ್ ಶ್ರೇಣಿಗಳ ನಡುವಿದೆ. == ಆಡಳಿತ == ಕುಲ್ಲು ಪಟ್ಟಣವು ಕುಲ್ಲು ಜಿಲ್ಲೆಯ ಆಡಳಿತ ಪ್ರಧಾನ ಕಚೇರಿ. ಈ ಪಟ್ಟಣವು ಉಪ ಕಮಿಷನರ್ ಕಛೇರಿ, ಪೊಲೀಸ್ ಅಧೀಕ್ಷಕರ ಕಛೇರಿ ಮತ್ತು ಜಿಲ್ಲೆಯ ನ್ಯಾಯಲಯಗಳನ್ನು ಹೊಂದಿದೆ. ಇದು ಅತಿದೊಡ್ಡ ಹಾಗು ಹೆಚ್ಚು ವೈವಿಧ್ಯಮಯವಾದ ಲೋಕ ಸಭೆಯ ಕ್ಷೇತ್ರ ಹಾಗು ಪಾರ್ಲಿಮೆಂಟ್ ನ ಕೆಳಮನೆ. == ಹವಾಮಾನ == ಚಳಿಗಾಲದಲ್ಲಿ ಡಿಸೆಂಬರ್ ಹಾಗು ಜನವರಿಯಲ್ಲಿ ಅತಿ ಕಡಿಮೆ ತಾಪಮಾನವನ್ನು ಮತ್ತು ಹಿಮಪಾತವನ್ನು ಕಾಣಬಹುದು. ಚಳಿಗಾಲದಲ್ಲಿ ಸಂಜೆಯ ವೇಳೆ ಹಾಗು ಮುಂಜಾನೆ ಬಹಳ ಚಳಿಯಿರುತ್ತದೆ. ಬೇಸಿಗೆಯಲ್ಲಿ ವಾರ್ಷಿಕ ಗರಿಷ್ಟ ತಾಪಮಾನವು ೨೪ ರಿಂದ ೩೪ ಸೆಲ್ಶಿಯಸ್ ಇರುತ್ತದೆ. ಜುಲೈ ಮತ್ತು ಆಗಸ್ಟ್ ತಿಂಗಳು ಮಳಿಗಾಲವಾಗಿರುತ್ತದೆ. == ನೆರೆ ಹೊರೆ == ಕುಲ್ಲುವಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಸಿನೀರಿನ ಬುಗ್ಗೆಗಳಿಗೆ ಪ್ರಸಿದ್ದಿಯಾದ ಮಣಿಕರನ್,ಪ್ರವಾಸಿಗರ ನೆಚ್ಚಿನ ತಾಣವಾದ ಮನಾಲಿ ಸೇರಿದೆ. ಧಾರ್ಮಿಕ ಸ್ಥಳಗಳಾದ ಮಲಾನ, ಲುನ್ಗ್ ಕಣಿವೆಯ ಕೆಶ್-ಧಾರ್, ಬಿಜ್ಲಿ ಮಹಾದೇವ್, ಕಸೊಲ್ ಮುಂತಾದವು ಕುಲ್ಲುವಿನ ನೆರೆಹೊರೆಯ ಪ್ರದೇಶಗಳು. ಕುಲ್ಲುವಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನಾಲಿ ಅತ್ಯಂತ ಪ್ರಸಿದ್ದವಾದ ಹಾಗು ಆ ರಾಜ್ಯದ ಆಕರ್ಷಣೆಗಳಲ್ಲಿ ಒಂದು. ಮನಾಲಿಯು ಹಿಡಿಂಬ ದೇವಿಯ ದೇವಸ್ಥಾನವನ್ನು ಹೊಂದಿದೆ. ಈ ಪಟ್ಟಣದ ಆರ್ಥಿಕತೆಯು ಹೆಚ್ಚಾಗಿ ಪ್ರವಾಸೋದ್ಯಮ, ತೋಟಗಾರಿಕೆ (ಸೇಬು, ಒಣಗಿದ ದ್ರಾಕ್ಷಿ, ಪೇರಳೆ, ಮತ್ತು ಬಾದಾಮಿ) ಮತ್ತು ಕರಕುಶಲ ವಸ್ತುಗಳ ಮೇಲೆ ಅವಲಂಬಿತವಾಗಿದೆ. ಈ ಪ್ರದೇಶದ ಬಹುತೇಕ ಯುವ ಜನಾಂಗವು ಜೀವನೋಪಾಯವಾಗಿ ಪ್ರವಾಸೋದ್ಯಮವನ್ನು ನೆಚ್ಚಿಕೊಂಡಿದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == 2017-04-19 ವೇಬ್ಯಾಕ್ ಮೆಷಿನ್ ನಲ್ಲಿ. 2014-07-28 ವೇಬ್ಯಾಕ್ ಮೆಷಿನ್ ನಲ್ಲಿ. 2008-06-29 ವೇಬ್ಯಾಕ್ ಮೆಷಿನ್ ನಲ್ಲಿ. 2011-03-20 ವೇಬ್ಯಾಕ್ ಮೆಷಿನ್ ನಲ್ಲಿ. , 2016-03-03 ವೇಬ್ಯಾಕ್ ಮೆಷಿನ್ ನಲ್ಲಿ. 2013-05-17 ವೇಬ್ಯಾಕ್ ಮೆಷಿನ್ ನಲ್ಲಿ. *