ಕುಶನಾಭ (ಸಂಸ್ಕೃತ: कुशनाभ) ಹಿಂದೂ ಗ್ರಂಥಗಳಲ್ಲಿ ಕಾಣಿಸಿಕೊಂಡಿರುವ ರಾಜ. ಇವನು ಅಮವಾಸು ವಂಶದ ರಾಜನಾಗಿ ಚಂದ್ರವಂಶದ ಸಾಲಿಗೆ ಸೇರಿದವನೆಂದು ವರ್ಣಿಸಲಾಗಿದೆ. ಇವನು ಕುಶನ ಮಗ ಎಂದು ಹೇಳಲಾಗುತ್ತದೆ. ಕುಶನಾಭ ಇತನು ಮಹೋದಯ ನಗರದ ಸ್ಥಾಪಕನೆಂದು ನಂಬಲಾಗಿದೆ. == ದಂತಕಥೆ == === ಮದುವೆ === ಗ್ರಿಟಾಚಿ ಒಬ್ಬಳು ನಿಪುಣ ನರ್ತಕಿಯಾಗಿದ್ದಳು. ಕುಶನಾಭನು ಅವಳ ನೃತ್ಯವನ್ನು ನೋಡಿ ಅವಳ ಮೇಲೆ ವ್ಯಾಮೋಹಗೊಂಡು ಅವಳನ್ನು ಮದುವೆಯಾದನು. ಅವನು ೧೦೦ ಜನ ಸಹೋದರಿಯರನ್ನು ಪುರು ಮತ್ತು ಯದು ರಾಜವಂಶದ, ಕಂಪಿಲ್ಯ ಸ್ಥಾಪಕ ಚೂಲಿ ಋಷಿಯ ಮಗ ಮತ್ತು ಅಪ್ಸರ ಸೋಮದ ಮಗನಿಗೆ ಮದುವೆ ಮಾಡಿದರು. === ಗಾಧಿಯ ಜನನ === ಕುಶನಾಭನಿಗೆ ೧೦೦ ಹೆಣ್ಣು ಮಕ್ಕಳಿದ್ದರು ಆದರೆ ಅವನ ಸಿಂಹಾಸನಕ್ಕೆ ಪುರುಷ ಉತ್ತರಾಧಿಕಾರಿ ಇರಲಿಲ್ಲ. ಆದ್ದರಿಂದ, ಅವನು ಇಂದ್ರ ದೇವತೆಯನ್ನು ಪೂಜಿಸಲು ಪ್ರಾರಂಭಿಸಿದನು ಮತ್ತು ಇಂದ್ರ ನಂತಹ ಮಗನನ್ನು ಹೊಂದಬೇಕೆಂದು ತಪಸ್ಸನ್ನು ಮಾಡಿದನು. ಕೊನೆಗೆ, ಇಂದ್ರ ಸಮ್ಮತಿಸಿ ಅವತಾರದಿಂದ ಅವನ ಮಗ ಗಾಧಿ ಆಗಿ ಜನಿಸಿದನು. == ಉಲ್ಲೇಖಗಳು ==