ಹಿಂದೂಧರ್ಮದಲ್ಲಿ, ಕೂರ್ಮಾವತಾರವು ಮತ್ಸ್ಯಾವತಾರದ ನಂತರ ಬರುವ ಮತ್ತು ವರಾಹಾವತಾರದ ಮೊದಲು ಬರುವ ವಿಷ್ಣುವಿನ ಎರಡನೇ ಅವತಾರ. ಮತ್ಸ್ಯಾವತಾರದಂತೆ ಈ ಅವತಾರವೂ ಸತ್ಯಯುಗದಲ್ಲಿ ಸಂಭವಿಸಿತ್ತು. ಕೂರ್ಮಾವತಾರಕ್ಕೆ ಸಮರ್ಪಿತ ದೇವಾಲಯಗಳು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿನ ಕೂರ್ಮಾಯಿ ಮತ್ತು ಶ್ರೀಕೂರ್ಮಂ ನೆಲೆಗೊಂಡಿವೆ. == ಶ್ರೀಕೂರ್ಮಂ == ಶ್ರೀಕೂರ್ಮಂ ಆಂಧ್ರ ಪ್ರದೇಶದ ಶ್ರೀಕಾಕುಳಂ (శ్రీకాకుళం)ಜಿಲ್ಲೆಯಲ್ಲಿದೆ. ಶ್ರೀಕಾಕುಳಂ ಪಟ್ಟಣದಿಂದ ೧೬ ಕಿಲೋಮೀಟರುಗಳ ದೂರದಲ್ಲಿದೆ. ರೈಲು ಮಾರ್ಗವಿಲ್ಲ. ಅದರೆ ಬಸ್ಸು ಸೌಕರ್ಯವಿದೆ. ಹಳೆ ಬಸ್ ಸ್ಟಾಂಡಿನಿಂದ ಪ್ರತಿ ೧೫ ನಿಮಿಷಗಳಿಗೆ ಶ್ರೀಕಾಕುಳಂ ಪಟ್ಟಣದಿಂದ ಆಂಧ್ರಪ್ರದೇಶ ರವಾಣೆ ಸಾರಿಗೆ ಸಂಸ್ಥೆ ಬಸ್ಸುಗಳು ತಿರುಗಾಡುತ್ತವೆ. ಉದಯಕಾಲ ೬:೦ಗಂಟೆಯಿಂದ ರಾತ್ರಿ ೮:೦ಗಂಟೆ ವರೇಗೆ ಬಸ್ಸುಗಳಿವೆ. ಈ ಗುಡಿಯಲ್ಲಿದ ವಿಗ್ರಹ ಸ್ವಯಂಭೂವಾಗಿದೆ. ಈ ತರಹ ದೇವಾಲಯ ಭಾರತ ದೇಶದಲ್ಲಿ ಇದೊಂದೆ. ಮಂದಿರ ಅದ್ಬುತವಾದ ಶಿಲ್ಪಕಲಾಶೋಭಿತವಾಗಿದೆ. ಈ ಮಂದಿರದಲ್ಲಿ ಸ್ವಾಮಿ ಪಶ್ಚಿಮಮುಖವಾಗಿ ಇದ್ದಾನೆ. ಈ ದೇವಾಲಯದಲ್ಲಿ ಎರಡು ಧ್ವಜ ಸ್ಥಂಬಗಳಿವೆ. ಮಂದಿರ ಪ್ರಾಂಗಣದಲ್ಲಿ ೧೧ಶತಾಬ್ದಿಯ ಶಾಸನಗಳು ಕಂಡು ಬರುತ್ತವೆ. ದೇವಾಲಯ ಪ್ರಾಂಗಣದಲ್ಲಿ ೧೭ವ ಶತಾಬ್ದಿಯಲ್ಲಿ ಚಿರ್ತಿಸಿದ ಚಿತ್ರಕಲ್ಲುಗಳಿವೆ. == ಗ್ಯಾಲರೀ == == ಬಾಹ್ಯ ಸಂಪರ್ಕಗಳು == , ,