ಕೃತಜ್ಞತೆ , ಧನ್ಯವಾದ , ಅಥವಾ ಹೊಗಳುವಿಕೆ /ಮೆಚ್ಚುಗೆ ಒಂದು ಧನಾತ್ಮಕ ಭಾವ ಅಥವಾ ಗುಣ;ಒಬ್ಬ ವ್ಯಕ್ತಿಯು ತನಗೆ ಲಭಿಸಿದ ಅಥವಾ ಲಭಿಸುವ ಸೌಲಭ್ಯಕ್ಕೆ ಪ್ರತಿಯಾಗಿ ನೀಡುವ ಒಂದು ತರದ ರಸೀದಿ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸಂಶೋಧಕ -ಡೇವಿಸ್, ರಾಬರ್ಟ್ ಡೇವಿಸ್ ಪ್ರಕಾರ ,ಕೃತಜ್ಞತೆ ಮೂರು ಷರತ್ತುಗಳನ್ನು ಒಳಗೊಂಡಿದೆ.ವೈಯಕ್ತಿಕವಾಗಿ ಆನಂದದಾಯಕನಾದಾಗ ನಡೆದುಕೊಳ್ಳುವ ಬಗ್ಗೆ ೧)ಅವನಿಗೆ ಅಥವಾ ಅವಳಿಗೆ ಬೆಲೆಯುಳ್ಳ ರೀತಿ, ೨) ಪಡೆದುಕೊಳ್ಳುವವನಿಗೆ ನೀಡುವ ಬೆಲೆ , ಮತ್ತು ೩)ಉದ್ದೇಶಪೂರ್ವಕವಾಗಿ ಒಪ್ಪಿಸುವುದು. 'ಗ್ರ್ಯಾಟಿಟ್ಯೂಡ್' ಎನ್ನುವ ಶಬ್ದ ,ಲ್ಯಾಟಿನ್ ಭಾಷೆಯ 'ಗ್ರ್ಯಾಶಿಯ' ಶಬ್ದದ ಗ್ರೇಸ್, ಗ್ರೇಟ್ ಫುಲ್ ನೆಸ್ , ಮತ್ತು ಗ್ರೇಶಿಯಸ್ ನೆಸ್ ಗಳ ಜೊತೆಗೂಡಿದೆ. ಈ ಲ್ಯಾಟಿನ್ ಬೇರು ನೀಡುವ ಅರ್ಥವೆಂದರೆ , “ಕರುಣೆ ,ಉದಾರತೆ ಮತ್ತು ಕಾಣಿಕೆಯು,ಕೊಡುವ ಮತ್ತು ತೆಗೆದುಕೊಳ್ಳುವ ಆನಂದವೇ ಆಗಿದೆ". ಕೃತಜ್ಞತೆಯ ಅನುಭವದ ಬಗ್ಗೆ ಚಾರಿತ್ರಿಕವಾಗಿ ಪ್ರಪಂಚದ ಹಲವು ಧರ್ಮಗಳು ಗುರುತಿಸಿವೆ. ಹಾಗು ಬಹುವಾಗಿ ನೀತಿವಂತ ತತ್ವಜ್ಞಾನಿಗಳು ಆಡಂ ಸ್ಮಿತ್ ನಂತೆಇಷ್ಟ ಪಡುತ್ತಾರೆ. 'ಕೃತಜ್ಞತೆ'ಯ ಬಗ್ಗೆ ವ್ಯವಸ್ಥಿತವಾದ ಅಧ್ಯಯನ ,ಮನಃ ಶಾಸ್ತ್ರದನ್ವಯ ಆರಂಭವಾದದ್ದು ೨೦೦೦ ದ ವರ್ಷಗಳಲ್ಲಿ.ಯಾಕೆಂದರೆ, ನಿಶ್ಚಿತವಾಗಿ ಸಂಪ್ರದಾಯಬದ್ಧ ಮನಃ ಶಾಸ್ತ್ರವನ್ನು ಧನಾತ್ಮಕ ಭಾವನೆಗಳನ್ನು ಗುರುತಿಸುವುದಕ್ಕಿಂತ ಹೆಚ್ಚಾಗಿ ಮಾನಸಿಕ ದುಃಖದ ಬಗ್ಗೆ ತಿಳಿಯಲು ಉಪಯೋಗಿಸಲ್ಪಟ್ಟಿದೆ. ಆದರೂ ,ತಿಳುವಳಿಕೆಯ ಧನಾತ್ಮಕ ಮನಃಶಾಸ್ತ್ರದ ಚಲನೆ , ಮನಃ ಶಾಸ್ತ್ರದ ಸಂಶೋಧನೆಯಲ್ಲಿ 'ಕೃತಜ್ಞತೆ'ಯು ಮುಖ್ಯ ವಾಹಿನಿಗೆ ಬಂದು ಗುರುತಿಸಲ್ಪಟ್ಟಿದೆ. ಮನಃಶಾಸ್ತ್ರದ ಮಿತಿಯೊಳಗೆಕೃತಜ್ಞತೆಯ ಬಗೆಗಿನ ಅಧ್ಯಯನ,ಭಾವನೆಯ ಸಣ್ಣ ಪ್ರಮಾಣದ ಅನುಭವವಾಗಿ ಕಂಡಿದ್ದು, (ಕೃತಜ್ಞತೆಯ ಮಟ್ಟ/ಸ್ಥಿತಿ ),ವೈಯಕ್ತಿಕ ಮಟ್ಟದಲ್ಲಿ ಕೃತಜ್ಞತೆಯ ಭಾವಗಳಲ್ಲಿನ ವ್ಯತ್ಯಾಸ (ವಿಶೇಷ ಗುಣಲಕ್ಷಣ - ಕೃತಜ್ಞತೆ ), ಮತ್ತು ಇವೆರಡೂ ಗುಣಗಳ ನಡುವಿನ ಸಂಬಂಧ . == ಭಾವನಾತೀತವಾಗಿ ಕೃತಜ್ಞತೆ == ಪರಿಸ್ಥಿತಿಯನ್ನು ಯಾವ ರೀತಿ ಎದುರಿಸುತ್ತಾರೆ ಎಂದು ಮನಗಂಡ ವ್ಯಕ್ತಿಯು ತಾನು ಪಡೆದ ಸಹಾಯಕ್ಕೆ ಸಲ್ಲಿಸುವ ಭಾವನೆಯೇ 'ಕೃತಜ್ಞತೆ'. ನಿರ್ಧಿಷ್ಟವಾಗಿ,ಕೃತಜ್ಞತೆಯನ್ನು ಅನುಭವಿಸುವ ವ್ಯಕ್ತಿ,ಸಹಾಯವನ್ನು ಗ್ರಹಿಸುವ ರೀತಿಯ ಮೇಲೆ : () ಅವರಿಗೆ ಬೆಲೆಯುಳ್ಳದ್ದಾಗಿದೆಯೇ , ()ದಾನಿಗೆ ತುಂಬಾ ಬೆಲೆಯುಳ್ಳದ್ದೇ, ಮತ್ತು ()ಪರೋಪಕಾರದ ಉದ್ದೇಶದಿಂದ ಮಾಡಿದ ದಾನ (ನಿಜವಾದ ಅಂತಿಮ ಪ್ರೇರಣೆ ). ಒಂದೇ ರೀತಿಯ ಸಂದರ್ಭಗಳು ಎದುರಾದಾಗ, ನೀಡುವ ಸಹಾಯ,ಬೇರೆ ಬೇರೆ ಜನ ಸಂದರ್ಭಗಳನ್ನು ,ಬೇರೆ ಬೇರೆಯಾಗಿ ನೋಡಿ, ಬೆಲೆ ಕಟ್ಟಿ ಹಾಗು ಪರೋಪಕಾರಿ ಉದ್ದೇಶ ಹೊಂದಿದ್ದು,ಇದರಿಂದಾಗಿ ವಿವಿಧ ರೀತಿಯ ಕೃತಜ್ಞತೆಯ ಮಟ್ಟ,ಜನರು ಸಹಾಯ ಪಡೆದ ನಂತರ ಕಾಣುತ್ತದೆ ಎಂಬುದು ಗೊತ್ತಾಗುತ್ತದೆ. ಸಾಮಾನ್ಯವಾಗಿ ಜನರು ಹೆಚ್ಚಿನ ಕೃತಜ್ಞತೆ ಹೊಂದಿದವರು ತಮ್ಮ ಜೀವನದಲ್ಲಿ ಸಂಪ್ರದಾಯವಾಗಿ ಸಹಾಯವನ್ನು ಅರ್ಥ ವಿವರಣೆ ಮಾಡಿಕೊಂಡು,ಹೆಚ್ಚು ಬೆಲೆಯುಳ್ಳದ್ದೆಂದು, ಹೆಚ್ಚು ಉಪಯೋಗಕಾರಿಯೆಂದು,ಹೆಚ್ಚು ಉಪಕೃತ ಉದ್ದೇಶದಿಂದ ಕೂಡಿದ್ದೆಂದು ;ಈ ಸಂಪ್ರದಾಯ ಬದ್ಧ ಒಲವು ಇರುವುದರಿಂದ, ಕೆಲವು ಜನರು ಬೇರೆಯವರಿಗಿಂತ ಹೆಚ್ಚು ಕ್ರುತಗ್ನರಾಗಿರುತ್ತಾರೆ. === ಕೃತಜ್ಞತೆ ಮತ್ತು ಋಣತ್ವ /ಋಣಗಾರಿಕೆ === ಕೃತಜ್ಞತೆಯು, 'ಋಣ' ಅಲ್ಲ,ಬೇರೆ ಬೇರೆಯೇ ಆಗಿದೆ. ಸಹಾಯವನ್ನು ಪಡೆದ ನಂತರ ಎರಡೂ ರೀತಿಯ ಭಾವನೆಗಳು ಉಂಟಾಗುತ್ತವೆ.ವ್ಯಕ್ತಿಯೊಬ್ಬನು ತಾನು ಪಡೆದ ಸಹಾಯಕ್ಕೆ ಪ್ರತಿಯಾಗಿ ಏನನ್ನಾದರೂ ನೀಡಬೇಕು ಎಂಬ ಭಾವನೆಯ ಸಮಯದಲ್ಲಿ ಋಣದ ಭಾವ ಹುಟ್ಟುತ್ತದೆ. ಭಾವನೆಗಳು ಬೇರೆ ಬೇರೆ ಕ್ರಿಯೆಗೆ ಅವಕಾಶ ಮಾಡಿಕೊಡುತ್ತದೆ;ಸಹಾಯವನ್ನು ಪಡೆದ ವ್ಯಕ್ತಿಯ ಋಣ ಭಾವ ಕ್ರಿಯೆಯಾಗಿ ,ಸಹಾಯ ಮಾಡಿದ ವ್ಯಕ್ತಿಯ ಸಹಾಯಕ್ಕೆ ಹೋಗುತ್ತಾನೆ,ಆದರೆ ಕೃತಜ್ಞತಾಭಾವ, ಸಹಾಯ ಪಡೆದ ವ್ಯಕ್ತಿಯ ಜೊತೆ ಸಂಬಂಧ ಉತ್ತಮ ಪಡಿಸಿಕೊಳ್ಳುವ ನಿಟ್ಟಿನಲ್ಲಿ ನಿರತನಾಗುತ್ತಾನೆ. === ನಡತೆಯ ಕ್ರಿಯೆ 'ಕೃತಜ್ಞತೆ' === ದಾನ ಮಾಡಿದವನ ನಡತೆಯಲ್ಲಿ ಸಾಮಾಜಿಕ ಕ್ರಿಯೆಗೆ ,ಮುಂದಿನ ಭವಿಷ್ಯಕ್ಕೆ ಶಕ್ತಿಯನ್ನು ಕೃತಜ್ಞತೆಯು ನೀಡುತ್ತದೆ. ಉದಾಹರಣೆಗೆ ,ಚಿನ್ನದ ಅಂಗಡಿಯ ಖರೀದಿದಾರರನ್ನು ಕರೆಯಿಸಿ,ಧನ್ಯವಾದ ಹೇಳಿದ ನಂತರ ,ಖರೀದಿಯಲ್ಲಿ, ಶೇಕಡಾ ೭೦ ರಷ್ಟು ವ್ಯಾಪಾರದ ಹೆಚ್ಚಳವು ಕಂಡು ಬಂದಿದೆ. ಹೋಲಿಕೆಯಂತೆ ,ಖರೀದಿದಾರರನ್ನು ಕರೆದು ಧನ್ಯವಾದ ಹೇಳಿ,ಮಾರಾಟದ ವಿವರ ನೀಡಿದ ಮೇಲೆ ಕೇವಲ ಶೇಕಡಾ ೩೦ ರಷ್ಟು ಖರೀದಿಯ ಹೆಚ್ಚಳವಾಗಿದೆ. ಖರೀದಿದಾರರನ್ನು ಕರೆಯದೆ ಇದ್ದ ಸಂದರ್ಭದಲ್ಲಿ ,ವ್ಯಾಪಾರದಲ್ಲಿ ಯಾವುದೇ ಹೆಚ್ಚಳ ಕಂಡು ಬಂದಿರುವುದಿಲ್ಲ. ಮತ್ತೊಂದು ಅಧ್ಯಯನದನ್ವಯ , ಹೋಟೆಲ್ಲಿನ ನಿಯಮಿತ ಆಶ್ರಯದಾತ ಹೆಚ್ಚು ದೊಡ್ಡ ಕಾಣಿಕೆಯನ್ನು ನೀಡಿದ್ದು, ಸರ್ವರ್ಸ್ “ಧನ್ಯವಾದ ” ಅವರ ಚೆಕ್ ನಲ್ಲಿ ಬರೆದಾಗ ಮಾತ್ರ. == ಕೃತಜ್ಞತೆಗೆ ಪ್ರಧಾನ ತಾತ್ವಿಕ ಅನುಸಂಧಾನ == ಧರ್ಮ ಮತ್ತು ಕೃತಜ್ಞತೆಯ ನಡುವಿನ ಕೊಂಡಿ ಇತ್ತೀಚಿನ ದಿನಗಳಲ್ಲಿ ಅಧ್ಯಯನಕ್ಕೆ ಜನಪ್ರಿಯ ವಿಷಯವಾಗಿದೆ. ಈ ಎರಡೂ ಗುಣಗಳು ನಿಜವಾಗಿಯೂ ಒಂದಕ್ಕೊಂದು ಬೆಸೆದುಕೊಂಡಿರುವುದಿಲ್ಲ,ಒಂದು ಅಧ್ಯಯನದ ಅನ್ವಯ ಮನುಷ್ಯರಲ್ಲಿರುವ ಧಾರ್ಮಿಕತೆಯು ಆ ವ್ಯಕ್ತಿಯ ಧನ್ಯತಾಭಾವ ಹೆಚ್ಚಾಗಲು ಕಾರಣವಾಗುತ್ತದೆ.ಯಾರು ಹೆಚ್ಚು ಹೆಚ್ಚು ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚು ಹೆಚ್ಚಾಗಿ ಭಾಗವಹಿಸುತ್ತಾರೋ,ಅವರು ತಮ್ಮ ಜೀವನದ ಎಲ್ಲಾ ದಿನಗಳಲ್ಲಿ, ಹೆಚ್ಚು ಹೆಚ್ಚು ಕೃತಜ್ಞತಾ ಭಾವಕ್ಕೆ ಒಳಗಾಗುತ್ತಾರೆ. 'ಕೃತಜ್ಞತೆಯ' ಭಾವವನ್ನು ಕ್ರಿಶ್ಚಿಯನ್ ,ಮತ್ತು ಬುದ್ಧ ಧರ್ಮದಲ್ಲಿ ಮನುಷ್ಯರ ಒಲವಿನ ಕಾಣಿಕೆ ಎಂದು ಕಾಣಬಹುದಾಗಿದೆ. ಮುಸ್ಲಿಂ , ಜುಯಿಷ್ , ಮತ್ತು ಹಿಂದೂ ಸಂಪ್ರದಾಯದಲ್ಲಿಯೂ ಕಾಣಬಹುದಾಗಿದೆ. ಪ್ರಾರ್ಥನೆಯ ಜೊತೆಗೆ 'ಕೃತಜ್ಞತೆ'ಯನ್ನು ದೇವರಿಗೆ ಅರ್ಪಿಸುವುದು ಸಾಮಾನ್ಯ ನಿಲುವು ಆಗಿರುವುದು, ಈ ಧರ್ಮಗಳಲ್ಲಿದೆ.ಈ ಕೃತಜ್ಞತೆಯ ವಿಷಯ ಧಾರ್ಮಿಕ ಪುಸ್ತಕಗಳಲ್ಲಿ,ಉಪನ್ಯಾಸಗಳಲ್ಲಿ,ಮತ್ತು ಸಂಪ್ರದಾಯಗಳಲ್ಲಿ ಹರಡಿಕೊಂಡಿದೆ. ಈ ಕಾರಣದಿಂದ ,ಇದು ಒಂದು ಅತ್ಯಂತ ಸಾಮಾನ್ಯ ಭಾವದಿಂದ ಧರ್ಮವು ತನ್ನ ಹಿಂಬಾಲಕರ ಮನಸ್ಸನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿ 'ಸಾರ್ವರ್ತ್ರಿಕ ಧಾರ್ಮಿಕ ಭಾವನೆ 'ಎಂದು ತಿಳಿಯಲ್ಪಟ್ಟಿದೆ. === ಯಹೂದ್ಯರ ವಿಷಯದಲ್ಲಿ ಕೃತಜ್ಞತೆ === ಜುಡಾಯಿಸಮ್ ನಲ್ಲಿ ,ಕೃತಜ್ಞತೆಯ ಭಾವ ಪ್ರಾರ್ಥನೆಯ ಒಂದು ಅಗತ್ಯ ಅಂಗವೇ ಆಗಿದೆ ಹಾಗು ಪ್ರಾರ್ಥಿಸುವವನ ಜೀವನದ ಅಂದವೆ ಆಗಿದೆ. 'ಹೆಬ್ರ್ಯೂ' ವಿಶ್ವದೃಷ್ಟಿಯ ಪ್ರಕಾರ ,ಎಲ್ಲವೂ ದೇವರಿಂದ ಬರಲ್ಪಟ್ಟಿದ್ದು,ಇದರಿಂದಾಗಿ 'ಕೃತಜ್ಞತೆ ಯ' ಭಾವ ಜುಡಾಯಿಸಮ್ ನಲ್ಲಿಅತಂತ ಮುಖ್ಯವಾದ ವಿಷಯವೇ ಆಗಿದೆ. 'ಹೆಬ್ರ್ಯೂ' ಧರ್ಮ ಗ್ರಂಥಗಳಲ್ಲಿ 'ಕೃತಜ್ಞತೆಯ' ಬಗ್ಗೆ ಸಾಕಷ್ಟು ಉಪಾಯಗಳಿವೆ. ಎರಡು ಉದಾಹರಣೆಗಳೆಂದರೆ, ಅದರಲ್ಲಿ ಬರುವ ಕೀರ್ತನೆಗಳಲ್ಲಿ " ಓ ಜಗದೊಡೆಯ ನನ್ನ ದೇವರೇ,ನಾನು ನಿನಗೆ ಯಾವಾಗಲೂ ಧನ್ಯನಾಗಿರುತ್ತೇನೆ," ಮತ್ತು"ನಾನು ನನ್ನ ಕೃತಜ್ಞತೆಯನ್ನು ನನ್ನ ತುಂಬು ಹೃದಯದಿಂದ ನಿನಗೆ ಸಲ್ಲಿಸುತ್ತೇನೆ." (ಪಿಎಸ್ . ೩೦:೧೨; ಪಿ ಎಸ್ . ೯:೧). ಜ್ಯುಯಿಷ್ ಪ್ರಾರ್ಥನೆಗಳಲ್ಲಿಯೂ ಕೃತಜ್ಞತೆಯ ಭಾವವನ್ನು ಶೀಮಾದಲ್ಲಿ ಅಳವಡಿಸಿ ಕೊಳ್ಳಲಾಗಿದ್ದು ,ಪ್ರಾರ್ಥಕನು ಪ್ರಾರ್ಥಿಸುತ್ತಾ,"ನೀನು ಅನಂತವನ್ನು ಪ್ರೀತಿಸುತ್ತೀ,ನಿನ್ನ ದೇವರನ್ನು ಹೃದಯ ತುಂಬಿ ಪ್ರೀತಿಸುತ್ತೀ,ಆತ್ಮದೊಂದಿಗೆ ಹಾಗೂ ನಿನ್ನ ಎಲ್ಲಾ ಶಕ್ತಿಯೊಂದಿಗೆ." (ದ್ಯುತ್ . ೬:೫). ಪ್ರಾರ್ಥನೆಯನ್ನು ಮುಗಿಸುತ್ತಾ, 'ಅಲೇನು',ಕೃತಜ್ಞತೆಯ ಬಗ್ಗೆ ಮಾತನಾಡುತ್ತಾ,ದೇವರಿಗೆ ಧನ್ಯವಾದ ಹೇಳಿ ಜ್ಯುಯಿಷ್ ಜನಾಂಗದ ನಿರ್ಧಿಷ್ಟ ಗುರಿಗೆ ವಂದಿಸುತ್ತಾರೆ. ಈ ಪ್ರಾರ್ಥನೆಗಳೊಂದಿಗೆ , ನಂಬಿಕೆಯ ಭಕ್ತರು ಹಾಡುತ್ತಾ ,ನೂರಕ್ಕಿಂತ ಹೆಚ್ಚು ಆಶೀರ್ವಚನ ಕೇಳುತ್ತಾ,ದಿನ ಕಳೆಯುತ್ತಾರೆ. === ಕ್ರಿಶ್ಚಿಯನ್ನರಲ್ಲಿ ಕೃತಜ್ಞತೆಯ ಪರಿಕಲ್ಪನೆ === ಕ್ರಿಶ್ಚಿಯನ್ನರ ಇಡೀ ಜೀವನ ಕೃತಜ್ಞತೆಯ ಭಾವದಿಂದ ಅಚ್ಚು ಮತ್ತು ಭಾವವನ್ನು ಹೊಂದಿದೆ. ಕ್ರಿಶ್ಚಿಯನ್ ಪರಿವರ್ತನೆ ಪ್ರಕಾರ , ಮಾರ್ಟಿನ್ ಲೂಥರ್ ,ಕೃತಜ್ಞತೆಯನ್ನು “ಕ್ರಿಶ್ಚಿಯನ್ನರ ಮೂಲಭೂತ ಗುಣ "ಎಂದಿದ್ದು,ಇತ್ತೀಚಿನ ದಿನಗಳಲ್ಲಿ ಅದನ್ನು "ಏಸುಕ್ರಿಸ್ತನ ಸುವಾರ್ತೆಯ ಹೃದಯ" ಎಂದಿದ್ದಾನೆ. ಪ್ರತಿಯೊಬ್ಬ ಕ್ರಿಶ್ಚಿಯನ್ನನು ನಂಬುವಂತೆ ,ಅವನ ಸೃಷ್ಟಿ ವೈಯಕ್ತಿಕವಾಗಿ ದೇವರಿಂದ ಆಗಿದ್ದು,ಕ್ರಿಶ್ಚಿಯನ್ನರು ಧನ್ಯತಾಭಾವದಿಂದ ತನ್ನನ್ನು ಸೃಷ್ಟಿಸಿದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಪ್ರೋತ್ಸಾಹಿಸುತ್ತಾರೆ. ಕ್ರಿಶ್ಚಿಯನ್ನರ ಕೃತಜ್ಞತೆಯಲ್ಲಿ ,ದೇವರು ನಿಸ್ವಾರ್ಥದಿಂದ ಎಲ್ಲಾ ರೀತಿಯ ಒಳ್ಳೆಯ ವಿಷಯವನ್ನು ಕೊಡುವವನಾಗಿದ್ದು,ಹೆಚ್ಚಿನ ಭಾವದಲ್ಲಿ ಉಪಕೃತನಾಗಿದ್ದು,ಇದರಿಂದಾಗಿ ಕ್ರಿಶ್ಚಿಯನ್ನರು ಒಂದು ಸಾಮಾನ್ಯ ಬಂಧನಕ್ಕೊಳಗಾಗಿ,ಭಕ್ತರ ಜೀವನ ಎಲ್ಲಾ ರೀತಿಯಲ್ಲಿ ರೂಪಿತವಾಗುತ್ತಾ ಹೋಗುತ್ತದೆ. ಕ್ರಿಶ್ಚಿಯನ್ನರಲ್ಲಿ ಕೃತಜ್ಞತೆಯು ದೇವರು ನೀಡಿದ ಉದಾರತೆಯ ರಸೀದಿಯಾಗಿದ್ದು,ಇದರಿಂದ ಸ್ಪೂರ್ತಿಗೊಂಡ ಕ್ರಿಶ್ಚಿಯನ್ನರು ತಮ್ಮದೇ ಭಾವಗಳನ್ನು ರೂಪಿಸಿಕೊಳ್ಳುತ್ತಾ,ಕ್ರಿಯೆಗಳನ್ನು ಹೊಮ್ಮಿಕೊಳ್ಳುತ್ತಾ,ಜೀವನವನ್ನು ಕಂಡುಕೊಳ್ಳುತ್ತಾರೆ. ಕೃತಜ್ಞತೆಯ ಭಾವನೆಯು ಒಂದು ಸಾಮಾನ್ಯ ಭಾವನೆಯಾಗದೆ,ಕ್ರಿಶ್ಚಿಯನ್ನರಲ್ಲಿ ಅದು ಪಾವಿತ್ರ್ಯವಾಗಿದ್ದು,ಅದು ಕೇವಲ ಭಾವನೆಯಾಗಿ ಉಳಿಯದೆ ಕ್ರಿಯೆ ಮತ್ತು ಗುರಿಯನ್ನು ತೋರಿಸುವ ಹಾದಿಯೇ ಆಗಿದೆ. ೧೭ ನೇ ಶತಮಾನದ ಪುನರುಜ್ಜೀವಿತ ಧರ್ಮಬೋಧಕ ಮತ್ತು ವೇದಾಂತಿ, ಜೋಹ್ನಾಥನ್ ಎಡ್ವರ್ಡ್ಸ್ ,ತನ್ನ ಗ್ರಂಥದಲ್ಲಿ,ಧಾರ್ಮಿಕ ಆಕರ್ಷಣೆ,ಪ್ರೀತಿ,ಕೃತಜ್ಞತೆ,ಮತ್ತು ಧನ್ಯವಾದ -ಇವು ದೇವರಿಗೆ ಸಲ್ಲಿಸುವ ನಿಜವಾದ ಧರ್ಮವಾಗಿದೆ ಎಂದು ಹೇಳುತ್ತಾನೆ. ಈ ಒಂದು ಅರ್ಥವಿವರಣೆಯಿಂದಾಗಿ,ಈ ಅಧುನಿಕ ಜೀವನದ ಧರ್ಮ ದೈವತ್ವದಲ್ಲಿ, ಧನ್ಯವಾದ ಮತ್ತು ಕೃತಜ್ಞತೆ ದೇವರಿಗೆ ತೋರಿಸುವ ಜಮಾಬಂದಿಯಾಗಿದೆ. 'ಆಲ್ ಪೋರ್ಟ್'(೧೯೫೦)ರ ಪ್ರಕಾರ ಮಾಗಿದ ಧರ್ಮದ ಉದ್ದೇಶಗಳು ಗಾಢ ಕೃತಜ್ಞತೆಯ ಭಾವದಿಂದ ಬಂದವುಗಳಾಗಿದ್ದು,ಮತ್ತು ಎಡ್ವರ್ಡ್ಸ್ (೧೭೪೬/೧೯೫೯)ಹೇಳುವಂತೆ, ಒಬ್ಬ ವ್ಯಕ್ತಿಯ ಜೀವನದಲ್ಲಿ ನಿಜವಾಗಿ ದೇವರನ್ನು ಕಾಣುವ ರೀತಿಯೇ "ಪ್ರೀತಿಯಿಂದ ಕೃತಜ್ಞತೆಯನ್ನು" ಕಾಣುವುದಾಗಿದೆ. ಸಾಮುಯಲ್ಸ್ ಮತ್ತು ಲೆಸ್ಟರ್(೧೯೮೫)ಅಧ್ಯಯನದ ಪ್ರಕಾರ, ಕ್ಯಾಥೊಲಿಕ್ 'ನನ್ಸ್ ಮತ್ತು ಪೂಜಾರಿಗಳಲ್ಲಿ 'ರುವ , ೫೦ ಭಾವಗಳಲ್ಲಿ , ಪ್ರೀತಿ ಮತ್ತು ಕೃತಜ್ಞತೆಯೇ ಹೆಚ್ಚಾಗಿದ್ದು,ದೇವರ ಹತ್ತಿರಕ್ಕೆ ಹೋಗುವ ಭಾವವಾಗಿದೆ. === ಇಸ್ಲಾಂನಲ್ಲಿ ಕೃತಜ್ಞತೆಯ ಪರಿಕಲ್ಪನೆ === ಇಸ್ಲಾಮಿಕ್ ಧರ್ಮಗ್ರಂಥ, 'ಕುರಾನ್' ನಲ್ಲಿ ,ಕೃತಜ್ಞತೆಯ ಭಾವದ ಬಗ್ಗೆ ತಿಳಿಸಲಾಗಿದ್ದು, ಜುಡಾಯಿಸಮ್ ಮತ್ತು ಕ್ರಿಶ್ಚಿಯಾನಿಸಂ ನಂತೆಯೇ ಇವೆ. ಇಸ್ಲಾಂ ತನ್ನ ಹಿಂಬಾಲಕರಿಗೆ ಕೃತಜ್ಞತೆಯಿಂದ ಇರಲು ಹೇಳಿ,ಎಲ್ಲ ಸಂದರ್ಭಗಳಲ್ಲಿಯೂ,ದೇವರಿಗೆ ಧನ್ಯವಾದ ಹೇಳಲು ತಿಳಿಸಿದೆ. ಇಸ್ಲಾಮಿಕ್ ಉಪದೇಶದಲ್ಲಿ ,ಯಾರು ಹೆಚ್ಚು ಕೃತಜ್ಞತಾ ಭಾವ ಹೊಂದಿರುತ್ತಾರೋ ಅವರಿಗೆ ಕಾಣಿಕೆ ಸಿಗುವುದಾಗಿ ಒತ್ತಿ ಹೇಳಿದೆ. ಸಾಂಪ್ರದಾಯಿಕ ಮುಸ್ಲಿಂ ಹೇಳುವಂತೆ:"ಯಾರು ಮೊದಲು ಸ್ವರ್ಗಕ್ಕೆ ಹೋಗುತ್ತಾರೋ ಅವರು ಹೆಚ್ಚಾಗಿ ದೇವರನ್ನು ಎಲಾ ಸಂದರ್ಭಗಳಲ್ಲಿಯೂ ಹೊಗಳಿರುತ್ತಾರೆ."'ಕುರಾನಿನ' ಸುರ ೧೪ ರಲ್ಲಿ ಹೇಳಿರುವಂತೆ ಯಾರು ಹೆಚ್ಚು ಕೃತಜ್ಞರಾಗಿರುತ್ತಾರೋ ಅವರಿಗೆ ದೇವರು ಹೆಚ್ಚು ಕೊಡುತ್ತಾನೆ. ಪ್ರವಾದಿ ಮೊಹಮ್ಮದ್ ಹೇಳುವಂತೆ ,“ಸಮೃದ್ಧಿಯನ್ನು ಹೊಂದಿದ್ದಕ್ಕೆ ಹೆಚ್ಚು ಕೃತಜ್ಞರಾಗುತ್ತಿದ್ದಂತೆ,ಇದು ಜೀವವಿಮೆಯಂತೆ ಕಾರ್ಯ ನಿರ್ವಹಿಸಿ,ಇನ್ನೂ ಹೆಚ್ಚಿನ ಸಮೃದ್ಧಿ ತಂದುಕೊಡುತ್ತದೆ." ಇಸ್ಲಾಮಿಕ್ ನಮ್ಬಿಕೆಯಲ್ಲಿನ ಹಲವು ಅಗತ್ಯ ಅಭ್ಯಾಸಗಳು ಕೃತಜ್ಞತೆಯನ್ನು ಪ್ರೋತ್ಸಾಹಿಸುತ್ತವೆ. ಇಸ್ಲಾಮಿಕ್ ನ ಆಧಾರ ಸ್ಥಂಭ,ಒಂದು ದಿನದಲ್ಲಿ ೫ ಸಾರ್ತಿಯ ಪ್ರಾರ್ಥನೆಯಲ್ಲಿನ ನಂಬಿಕೆಯೂ ,ಅವನು ನಮಗೆ ತೋರಿದ ಕರುಣೆಗೆ ,ನಾವು ನೀಡುವ ಕೃತಜ್ಞತೆಯಾಗಿದೆ. 'ರಂಜಾನ್'ಸಮಯದಲ್ಲಿ ಮಾಡುವ ಉಪವಾಸ ಹಾಗು ಅದರ ಉದ್ದೇಶವೇ, ಭಕ್ತನು ನಂಬಿಕಸ್ಥನು ದೇವರಿಗೆ ಸಲ್ಲಿಸುವ ಕೃತಜ್ಞತೆಯಾಗಿದೆ. == ಕೃತಜ್ಞತೆಯಲ್ಲಿನ ವೈಯಕ್ತಿಕ ವ್ಯತ್ಯಾಸಗಳು. == ಕೃತಜ್ಞತೆಯ ಬಗ್ಗೆ ಇತ್ತೀಚಿಗೆ ನಡೆದ ಸಂಶೋಧನೆಗಳಿಂದ, ಮನಃಶಾಸ್ತ್ರಜ್ಞರ ಪ್ರಕಾರ ಕೃತಜ್ಞತೆಯು ವೈಯಕ್ತಿಕವಾಗಿ ಬೇರೆ ಬೇರೆ ಎಂದು ನಿರೂಪಿಸಲಾಗಿದೆ. ಇದರ ತತ್ಫಲವಾಗಿಯೇ ಹೆಚ್ಚೂ ಕಡಿಮೆ ಹೆಸರಾಂತ ವ್ಯಕ್ತಿಗಳ ಆಗಮನವಾಗುತ್ತದೆ. ವೈಯಕ್ತಿಕ ಮಟ್ಟದಲ್ಲಿ ಕೃತಜ್ಞತೆಯ ಭಾವವನ್ನು ಅಳೆಯಲು ಮೂರು ರೀತಿಯ ಮಾಪಕಗಳನ್ನು ಗುರುತಿಸಲಾಗಿದ್ದು,ಪ್ರತಿಯೊಂದೂ ಮಾಪನದಲ್ಲಿಯೂ ಕೃತಜ್ಞತೆಯ ಭಾವದಲ್ಲಿ ವೈಯಕ್ತಿಕ ವ್ಯತ್ಯಯವಿದೆ. ಜಿಕ್ಯು ೬ ಮಾಪನದನ್ವಯ ಕೃತಜ್ಞತೆಯನ್ನು ಹೇಗೆ ಸತತವಾಗಿ ಮತ್ತು ಉದ್ದೇಶಪೂರ್ವಕವಾಗಿ ಅನುಭವಿಸುತ್ತಾರೆ ಎಂದು ಹೇಳಿದೆ. ಗುಣಗ್ರಹಣ ಮಾಪನ ೮ ವಿವಿಧ ವಿಷಯಗಳ ಕೃತಜ್ಞತೆಯ ಬಗ್ಗೆ ಹೇಳುತ್ತಾ: ಜನರ ಗುಣ ವಿವೇಚನೆ,ಒಡೆತನ,ವಾಸ್ತವ ಚಲನೆ,ಧರ್ಮಾಚರಣೆ,ಭಯದ ಭಾವನೆ,ಸಾಮಾಜಿಕ ಹೋಲಿಕೆ,ವಾಸ್ತವಿಕ ಕಾಳಜಿ ಮಾತ್ತು ನಡತೆ -ಇವುಗಳು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತವೆ. ಗ್ರತ್/ಜಿಆರ್ಎಟಿ ಲೆಕ್ಕಾಚಾರದ ಪ್ರಕಾರ, ಬೇರೆಯವರಿಗೆ ಕೃತಜ್ಞತೆ,ಸಾಮಾನ್ಯವಾಗಿ ವಿಶ್ವದೆಡೆಗೆ ಕೃತಜ್ಞತೆ,ನಿನ್ನಲ್ಲಿ ಏನಿಲ್ಲವೋ ಅದರ ಬಗ್ಗೆ ಅಸಮಾನದ ಕೊರತೆ - ಈ ಪ್ರತಿಯೊಂದೂ ಮಾಪನದ ಬಗ್ಗೆ ಇತ್ತೀಚೆಗೆ ನಡೆದ ಅಧ್ಯಯನದ ಅನ್ವಯ ಜೀವನವನ್ನು ಒಂದೇ ರೀತಿಯಾಗಿ ಕಾಣುವುದೇ ಆಗಿದೆ;ಇದರಿಂದಾಗಿ, ವೈಯಕ್ತಿಕ ವ್ಯತ್ಯಾಸಗಳಿದ್ದರೂ,ಕೃತಜ್ಞತೆಯ ಭಾವದಲ್ಲಿ ಇದೆಲ್ಲವೂ ಅಡಕವಾಗಿದೆ. == ಅನುಭವಸಿದ್ಧ ನಿರ್ಣಯ == === ಕೃತಜ್ಞತೆ ಮತ್ತು ಚೆನ್ನಾಗಿರುವುದು === ಇತ್ತೀಚಿನ ದಿನಗಳಲ್ಲಿ ನಡೆದ ಹಲವು ಅಧ್ಯಯನಗಳಿಂದ ತಿಳಿಯುವುದೇನೆಂದರೆ, ಯಾರು ಹೆಚ್ಚು ಕೃತಜ್ಞರಾಗಿರುತ್ತಾರೋ,ಅವರು ಹೆಚ್ಚಿನ ಮಟ್ಟದಲ್ಲಿ ಚೆನ್ನಾಗಿರುತ್ತಾರೆ. ಮಹಾನ್ ವ್ಯಕ್ತಿಗಳು ,ಹೆಚ್ಚು ಖುಷಿಯಾಗಿದ್ದು,ಕಡಿಮೆ ದುಃಖಿತರಾಗಿರುತ್ತಾರೆ, ಕಡಿಮೆ ಒತ್ತಡಕ್ಕೆ ಒಳಗಾಗುತ್ತಾರೆ,ಜೀವನದಲ್ಲಿ ಹೆಚ್ಚು ತೃಪ್ತರಾಗಿರುತ್ತಾರೆ ಮತ್ತು ಸಾಮಾಜಿಕ ಸಂಬಂಧ ಗಳಲ್ಲಿ ಸಂತೃಪ್ತರಾಗಿರುತ್ತಾರೆ.ಮಹಾನ್ ವ್ಯಕ್ತಿಗಳು ತಮ್ಮ ಸುತ್ತಲಿನ ಪರಿಸರದ ಬಗ್ಗೆ ಹೆಚ್ಚಿನ ಹಿಡಿತ ಹೊಂದಿರುತ್ತಾರೆ,ವೈಕ್ತಿಕ ಬೆಳವಣಿಗೆ,ಜೀವನದಲ್ಲಿನ ಗುರಿ ಮತ್ತು ಸ್ವಾರ್ಥದ ಒಪ್ಪಿಗೆಯಲ್ಲಿ ಹಿಡಿತವಿಟ್ಟುಕೊಂಡಿರುತ್ತಾರೆ. ಮಹಾನ್ ವ್ಯಕ್ತಿಗಳು ಹೆಚ್ಚಿನ ಧನಾತ್ಮಕ ಭಾವದಿಂದ ತಮ್ಮ ಜೀವನದ ಕಷ್ಟಗಳನ್ನು ಎದುರಿಸುತ್ತಾರೆ,ಬೇರೆ ಜನರಿಂದ ಹೆಚ್ಚಿನ ನಿರೀಕ್ಷೆಯನ್ನು ನಿರೀಕ್ಷಿಸದೆ ಇರುವವರಾಗಿರುತ್ತಾರೆ.ಅನುಭವದ ಪಾಠವನ್ನು ಕಲಿತು ಜೀವನದಲ್ಲಿ ಬೆಳೆಯುತ್ತಾರೆ,ಹೆಚ್ಚಿನ ಸಮಯವನ್ನು ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಯೋಚಿಸುತ್ತಾರೆ. ಮಹಾನ್ ವ್ಯಕ್ತಿಗಳು ಋಣಾತ್ಮಕ ಭಾವನೆಯಿಂದ ದೂರಾಗಿ,ಸಮಸ್ಯೆಗಳನ್ನು ಆದಷ್ಟೂ ಕಡಿಮೆ ಮಾಡಿ,ಅದರಿಂದ ದೂರ ಉಳಿಯಲು ಯತ್ನಿಸುತ್ತಾರೆ,ಸಮಸ್ಯೆಯನ್ನು ಅಲ್ಲಗೆಳೆಯುತ್ತಾರೆ,ತಮ್ಮನ್ನು ನಿಂದಿಸಿಕೊಲ್ಲುತ್ತಾರೆ,ಅಥವಾ ತತ್ವದ ಬಗ್ಗೆ ಹೊಂದುಕೊಳ್ಳುತ್ತಾರೆ. ಮಹಾನ್ ವ್ಯಕ್ತಿಗಳು ಚೆನ್ನಾಗಿ ನಿದ್ರೆ ಮಾಡುತ್ತಾರೆ,ಕಾರಣವೆಂದರೆ,ಅವರು ಮಲಗುವುದಕ್ಕೆ ಮುಂಚೆ ಋಣಾತ್ಮಕವಾಗಿ ಕಡಿಮೆ,ಧನಾತ್ಮಕವಾಗಿ ಹೆಚ್ಚು ಚಿಂತಿಸುವ ಸ್ವಭಾವದವರಾಗಿರುತ್ತಾರೆ.. ಮಾನಸಿಕ ಆರೋಗ್ಯದ ಯಾವುದೇ ಗುಣಲಕ್ಷಣದೊಂದಿಗೆ ಕೃತಜ್ಞತೆಯು ಹೆಚ್ಚಿನ ಸಂಬಂಧ ಹೊಂದಿರುತ್ತದೆ. ಅಂಕಿ-ಅಂಶಗಳ ಅಧ್ಯಯನವು ಹೇಳುವುದೇನೆಂದರೆ,ಮಹಾನ್ ವ್ಯಕ್ತಿಗಳು ಉನ್ನತ ಮಟ್ಟದ ಸಂತೋಷ ಹೊಂದಿದವರಾಗಿದ್ದು,ಕಡಿಮೆ ಮಟ್ಟದ ಒತ್ತಡಕ್ಕೆ ,ಆಯಾಸಕ್ಕೆ ಒಳಗಾಗುತ್ತಾರೆ. ಕೃತಜ್ಞತೆಗೆ ಸಂಬಂಧಿಸಿದಂತೆ ನಡೆಸಿದ ಒಂದು ಅಧ್ಯಯನದಲ್ಲಿ,ಭಾಗವಹಿಸಿದವರನ್ನು ಗೊತ್ತು ಗುರಿಯಿಲ್ಲದ ೬ ರೀತಿಯಚಿಕಿತ್ಸಾ ತಂತ್ರಕ್ಕೆ ಒಳಪಡಿಸಿ,ಜೀವನದ ಸಮಗ್ರ ಗುಣಮಟ್ಟ ಹೆಚ್ಚಿಸಲು (ಸೇಲಿಗ್ ಮ್ಯಾನ್ ಇಟಿ.ಆಲ್., ೨೦೦೫). ಈ ಪರಿಸ್ಥಿತಿಯಲ್ಲಿ ,ಅತಿ ದೊಡ್ಡ,ಕಡಿಮೆ-ಅವಧಿಯ ಪ್ರಭಾವವು 'ಕೃತಜ್ಞತಾ-ಭೇಟಿ'ಯಿಂದ ಬಂದುದಾಗಿದ್ದು,ಮತ್ತು ಹಾಗು ತಮಗೆ ಜೀವನದಲ್ಲಿ ಸಹಾಯ ಮಾಡಿದವರಿಗೆ ಭಾಗವಹಿಸಿದವರು ಬರೆದ 'ಕೃತಜ್ಞತಾ ಪತ್ರ'ವನ್ನು ವಿತರಿಸಿರುವುದು ಕಂಡು ಬಂದಿದೆ. ಈ ಸ್ಥಿತಿಯಲ್ಲಿ ಶೇಕಡಾ ೧೦ ರಷ್ಟು ಜನರು ಖುಷಿಯಾಗಿದ್ದುದಷ್ಟೇ ಅಲ್ಲದೆ,ಚಿಂತೆಯ ಮನೋಭಾವವು ಸಹ ಕಡಿಮೆಯಾಗಿದ್ದು,ಫಲಿತಾಂಶವು ಒಂದು ತಿಂಗಳ ಭೇಟಿಯ ನಂತರ ಫಲಿಸಿತು. ಒಟ್ಟು ೬ ಷರತ್ತುಗಳಲ್ಲಿ ,ತುಂಬಾ ದೀರ್ಘಕಾಲದ ಪ್ರಭಾವವು ಉಂಟಾಗಲು ಕಾರಣ ಯಾವುದೆಂದರೆ 'ಕೃತಜ್ಞತೆಯ ಪತ್ರಿಕೆ' ಬರೆದವರಾಗಿದ್ದು ,ಭಾಗಿಯಾದವರನ್ನು ,ಪ್ರತಿದಿನ ಯಾವ ಕಾರಣಕ್ಕೆ ಮೂರು ಸಲ ಕೃತಜ್ಞರಾದರು ಎಂಬ ಕಾರಣ ಕೇಳಿ ಬರೆಯಲು ತಿಳಿಸಲಾಯಿತು. ಈ ಪ್ರಯೋಗದಲ್ಲಿ ಭಾಗಿಯಾದವರು ’ಹೆಚ್ಚು ಖುಷಿಯಾಗಿದ್ದು,ಪ್ರತಿಯೊಂದು ಸರ್ತಿಯಲ್ಲೂ ಖುಷಿಯ ಮಟ್ಟ ಜಾಸ್ತಿಯಾಗುತ್ತಲೇ ಹೋಗಿದ್ದು ದಾಖಲಾಯಿತು. ನಿಜವೆಂದರೆ ,ಚಿಕಿತ್ಸೆಯನ್ನು ನೀಡಿದ ಆರು ತಿಂಗಳ ನಂತರ ಸಾಮಾನ್ಯವಾಗಿ ಹೆಚ್ಚಿನ ಉಪಯೋಗ ಕಾಣಲಾರಂಭಿಸಿತು. ಈ ಪ್ರಯೋಗ ಹೆಚ್ಚು ಯಶಸ್ವಿಯಾಗಿದ್ದು,ಭಾಗಿಯಾದವರಿಗೆ ಪತ್ರಿಕೆ ಬರಹದಲ್ಲಿ ಕೇವಲ ಭಾಗಿಯಾಗಲು ಹೇಳಿ,ಚಿಕಿತ್ಸೆ ಮುಗಿದ ನಂತರವೂಭಾಗೀದಾರರು ಅದೇ ಹವ್ಯಾಸವನ್ನು ಮುಂದುವರಿಸಿದ್ದು ಕಂಡು ಬಂದಿತು. ಇದೆ ರೀತಿಯ ಫಲಿತಾಂಶವನ್ನು ಎಮ್ಮೊಂಸ್ ಮತ್ತು ಮಕ್ ಕುಲ್ಲೌಗ್ಹ್ (೨೦೦೩) ಹಾಗೂ ಲ್ಯುಬೋಮಿರ್ಸ್ಕ್ಯ್ ಇಟಿ . ಆಲ್ .ನಡೆಸಿದ ಅಧ್ಯಯನದಿಂದಲೂ ಕಂಡು ಬಂದಿದೆ. (೨೦೦೫) ಹಲವು ಭಾವನೆಗಳು ಹಾಗು ಗುಣ-ಲಕ್ಷಣಗಳು ವೈಯಕ್ತಿಕವಾಗಿ ಮುಖ್ಯವಾಗಿದ್ದು,ಕೃತಜ್ಞತೆಯು ಸಹ ಅಷ್ಟೇ ಮುಖ್ಯ ಎಂಬುದಕ್ಕೆ ಸಾಕ್ಷಿಯಾಗಿದೆ. ಮೊದಲನೇ ಸರ್ತಿ ,ರೇಖಾಂಶ ಅಧ್ಯಯನದಲ್ಲಿ ಜನರು ಯಾರು ಹೆಚ್ಚು ಕೃತಜ್ಞರಾಗಿರುತ್ತಾರೋ ಅವರು ತಮ್ಮ ಜೀವನದಲ್ಲಿ ಸ್ಥಿತ್ಯಂತರದಲ್ಲಿ ಉತ್ತಮರಾಗಿರುತ್ತಾರೆ. ನಿರ್ಧಿಷ್ಟವಾಗಿ,ಯಾರು ಸ್ಥಿತ್ಯಂತರಕ್ಕೆ ಮುಂಚಿತವಾಗಿ ಕೃತಜ್ಞರಾಗಿರುತ್ತಾರೋ ಅವರು ಕಡಿಮೆ ಒತ್ತಡಕೆ ಒಳಗಾಗಿದ್ದು,ಕಡಿಮೆ ದುಃಖಿತರಾಗುತ್ತಾರೆ,ಹಾಗು ಮೂರು ತಿಂಗಳ ನಂತರ ಹೆಚ್ಚು ತಮ್ಮ ಸಂಬಂಧಗಳಲ್ಲಿ ಸಂತೃಪ್ತರಾಗಿರುತ್ತಾರೆ. ಎರಡನೆಯದಾಗಿ ,ಇತ್ತೀಚಿನ ಎರಡು ಅಧ್ಯಯನಗಳ ಪ್ರಕಾರ ಕೃತಜ್ಞತೆಯಲ್ಲಿಒಂದೇ ರೀತಿಯ ಸಂಬಂಧಗಳು ಒಳ್ಳೆ-ರೀತಿಯಲ್ಲಿ ಇದ್ದು,ಒಳ್ಳೆ-ರೀತಿಯಲ್ಲಿ ಇರಲು ಕಾರಣವೇನೆಂದು ವಿವರಿಸಲು,ಬೇರೆಯವರಲ್ಲಿ ಆ ಗುಣಲಕ್ಷಣ ಸಾಧ್ಯವಿರುವುದಿಲ್ಲ. ಎರಡೂ ಅಧ್ಯಯನಗಳ ಹೇಳಿಕೆಯಂತೆ ,'ಕೃತಜ್ಞತೆ'ಯು , ದೊಡ್ಡ ಐದು ಮತ್ತು ತುಂಬಾ ಸಾಮಾನ್ಯವಾದ ಗುಣಲಕ್ಷಣದ ಅಧ್ಯಯನದ ೩೦ ಒಳ್ಳೆ-ರೀತಿಗಳನ್ನು ವಿವರಿಸುವ ಸಾಮರ್ಥ್ಯವನ್ನು ಹೊಂದಿದೆ. === ಕೃತಜ್ಞತೆ ಮತ್ತು ಪರಹಿತಾಸಕ್ತಿ === ಕೃತಜ್ಞತೆಯ ಭಾವದ ಕಾರಣದಿಂದ ಒಬ್ಬ ವ್ಯಕ್ತಿಯ ಪರಹಿತಾಸಕ್ತಿಯ ಭಾವ ಹೆಚ್ಚುತ್ತಾ ಹೋಗುತ್ತದೆ. ಡೇವಿಡ್ ಡೇಸ್ಟೆನೋ ಮತ್ತು ಮೋನಿಕಾ ಬಾರ್ಟ್ಲೆಟ್ (೨೦೧೦)ರವರು ನಡೆಸಿದ ಒಂದು ಅಧ್ಯಯನದಿಂದ ಕೃತಜ್ಞತೆಯು ಆರ್ಥಿಕ ಉದಾರತೆಯೊಂದಿಗೆ ಸಂಬಂಧವನ್ನು ಹೊಂದಿದೆ. ಈ ಒಂದು ಅಧ್ಯಯನದಲ್ಲಿ ,ಅರ್ಥ ಶಾಸ್ತ್ರದ ಆಟದೊಂದಿಗೆ,ಹೆಚ್ಚಿನ ಕೃತಜ್ಞತಾ ಭಾವ ಕಂಡಿದ್ದು,ಇದರಿಂದಾಗಿ ಹೆಚ್ಚಿನ ಆರ್ಥಿಕ ಸೌಲಭ್ಯ ಕಂಡು ಬಂದಿತು. ಈ ಫಲಿತಾಂಶಗಳಿಂದ ,ಈ ಅಧ್ಯಯನಗಳಿಂದ ,ಆನಂದದಾಯಕ ವ್ಯಕ್ತಿಗಳು ತಮ್ಮ ವೈಯಕ್ತಿಕ ಲಾಭಗಳನ್ನು ತ್ಯಾಗ ಮಾಡಿ ಜನಾಂಗದ ಲಾಭಕ್ಕೆ ನೆರವಾಗುತ್ತಾರೆ. (ಡೇಸ್ಟೆನೋ ಮತ್ತು ಬಾರ್ಟ್ಲೆಟ್ , ೨೦೧೦). ಮಕ್ ಕುಲ್ಲೌಗ್ಹ್ , ಎಮ್ಮೊಂಸ್ ,ಮತ್ತು ತ್ಸಾಂಗ್ ,(೨೦೦೨) ಇವರು ನಡೆಸಿದ ಅಧ್ಯಯನದಿಂದ,ಒಂದೇ ರೀತಿಯ ಸಂಬಂಧಗಳನ್ನು, ಕೃತಜ್ಞತೆ ಮತ್ತು ಅನುಭೂತಿ ಶಕ್ತಿ/ಸ್ಪಷ್ಟ ಪಡಿಸುವಿಕೆ,ಉದಾರತೆ ಮತ್ತು ಸಹಾಯಗಳನ್ನು ಕಾಣಬಹುದಾಗಿದೆ. === ಕೃತಜ್ಞತೆಯ ಭಾವವನ್ನು ಹೆಚ್ಚಿಸಲು ಮಧ್ಯಸ್ಥಿಕೆ === ಕೃತಜ್ಞತೆಯ ಭಾವದಿಂದ ಜನರು ಚೆನ್ನಾಗಿರಲು, ನಿಶ್ಚಯಿಸುವ ಶಕ್ತಿ ಕಾರಣವಾಗುತ್ತದೆ.ಹಲವಾರು ಮನಃಶಾಸ್ತ್ರದ ಮಧ್ಯಸ್ಥಿಕೆಯನ್ನು ಅಭಿವೃದ್ಧಿ ಪಡಿಸಿದ್ದು,ಕೃತಜ್ಞತಾ ಭಾವನೆ ಹೆಚ್ಚಿಸಲು ಕಾರಣವಾಗಿದೆ. ಉದಾಹರಣೆಗೆ , ವಾಟ್ ಕಿನ್ಸ್ ಮತ್ತು ಜೊತೆಗಾರರು ಭಾಗಿಯಾದ ವಿವಿಧ ರೀತಿಯ ಕೃತಜ್ಞತೆಯ ಪರೀಕ್ಷೆಯ ಅಭ್ಯಾಸಗಳಲ್ಲಿ,ಜೀವಂತ ವ್ಯಕ್ತಿಯ ಬಗ್ಗೆ ಯೋಚಿಸುತ್ತಾ,ಯಾರಿಗೆ ಕೃತಜ್ಞ ರಾಗಿರುತ್ತಾರೋ ಅವರಿಗೆ,ಪತ್ರವನ್ನು ಬರೆಯುತ್ತಾರೆ. ಭಾಗಿಯಾದವರಿಗೆ ಪರೀಕ್ಷೆಯ ಹಿಡಿತದ ಷರತ್ತಿನೊಂದಿಗೆ ಅವರ ವಾಸದ ಕೊಠಡಿಯ ಬಗ್ಗೆ ವಿವರಿಸಲು ಕೇಳಲಾಯಿತು. ಯಾವ ಭಾಗೀದಾರರು ,ಯಾರು ಕೃತಜ್ಞತೆಯ ಅಭ್ಯಾಸದಲ್ಲಿರುತ್ತಾರೋಅವರು ಧನಾತ್ಮಕ ಭಾವದಲ್ಲಿ ಹೆಚ್ಚಿನ ಅನುಭವ ತೋರಿದ್ದು,ಈ ನಿಟ್ಟಿನಲ್ಲಿ ಸದೃಢ ಭಾಗೀದಾರರಾಗಿದ್ದು,ಅವರು ಯಾರ ಬಗ್ಗೆ ಹೆಚ್ಚು ಕೃತಜ್ಞರಾಗಿರುತ್ತಾರೋ ಅವರ ಬಗ್ಗೆ ಯೋಚಿಸಲು ಹೇಳಿದ್ದಾರೆ. ಭಾಗೀದಾರರು ಹೆಚ್ಚಿನ ಕೃತಜ್ಞತೆಯುಳ್ಳವರು ಆರಂಭದಲ್ಲಿ,ಹೆಚ್ಚಿನ ಸೌಲಭ್ಯವನ್ನು ಹೊಂದಿರುತ್ತಾರೆ. == ಮುಕ್ತಾಯ == ಸಿಸೆರೋ ಪ್ರಕಾರ , “ಕೃತಜ್ಞತೆಯು ಕೇವಲ ಹೆಚ್ಚಿನ ಸದ್ಗುಣವಷ್ಟೇ ಆಗದೆ,ಎಲ್ಲಾ ರೀತಿಯವರಿಗೆ ತಾಯಿಯಾಗಿದೆ." ಹಲವಾರು ರೀತಿಯಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಕೃತಜ್ಞತೆ ಮತ್ತು ಹೆಚ್ಚಿನ ಚೆನ್ನಾಗಿರುವದರ ಸಂಬಂಧಗಳು ಕೇವಲ ವೈಯಕ್ತಿಕ ಮಟ್ಟವಷ್ಟೇ ಆಗಿರದೆ, ಯಾರು ಭಾಗಿಯಾಗಿರುತ್ತಾರೋ ಅವರೆಲ್ಲರಿಗೂ ಆಗುತ್ತದೆ. ಧನಾತ್ಮಕ ಮನಃಶಾಸ್ತ್ರದ ಅಭಿಪ್ರಾಯದ ಅನ್ವಯ,ಎಲ್ಲಾ ರೀತಿಯಲೂ ಚೆನ್ನಾಗಿರಲು ಈ ಭಾವ ಸಹಾಯಕವಾಗಿದೆ.ಇದರಿಂದಾಗಿ ಈ ಅಭ್ಯಾಸಗಳನ್ನು ಉಪಯೋಗಿಸಿಕೊಂಡು, ಕೃತಜ್ಞತೆಯ ಭಾವಗಳನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ. ಆದರೂ,ಹಳೆಯ ಕಾಲದಲ್ಲಿ ಮನಃಶಾಸ್ತ್ರಜ್ಞರು ಈ ಕೃತಜ್ಞತೆಯ ಭಾವವನ್ನು ತಿರಸ್ಕರಿಸಿದ್ದು,ಇತ್ತೀಚಿನ ವರ್ಷಗಳಲ್ಲಿ ಕೃತಜ್ಞತೆಯ ಬಗ್ಗೆಅಧ್ಯಯನ ನಡೆದು, ಅದರ ಧನಾತ್ಮಕ ಅಭಿಪ್ರಾಯದ ಬಗ್ಗೆ ಸಂಶೋಧನೆ ಆಗುತ್ತಿದೆ. == ಆಕರಗಳು ==