ಕೃ‍ಷ್ಣರಾಜನಗರವು ಮೈಸೂರು ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರವಾಗಿದ್ದು ಕಾವೇರಿ ನದಿಯ ದಡದಲ್ಲಿದೆ. ಈ ನಗರವು ಹಿಂದೆ ಎಡತೊರೆ ಎಂದು ಕರೆಯಲ್ಪಡುತ್ತಿತ್ತು. ಈ ನಗರದ ಕಾವೇರಿ ದಂಡೆಯ ಮೇಲೆ ಅರ್ಕೇಶ್ವರ ಸ್ವಾಮಿ ದೇವಸ್ಥಾನವಿದೆ. ಇದು ಜಗತ್ತಿನಲ್ಲೆ ಕಂಡುಬರುವ ಎರಡನೇ ಸೂರ್ಯ ದೇವಾಲಯವಾಗಿದೆ. ಈ ದೇವಾಲದಲ್ಲಿರುವ ಲಿಂಗದ ಮೇಲೆ ಶಿವರಾತ್ರಿಯಾದ ಮಾರನೇ ದಿನ ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತವೆ ಕೃಷ್ಣರಾಜನಗರವು ಮೈಸೂರು ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕಾಗಿದ್ದು, ಇದು ಸರಿಸುಮಾರು 1925-1930ರ ಮಧ್ಯಂತರ ಇಸವಿಯಲ್ಲಿ ನಗರವಾಗಿ ಸ್ಥಾಪಿತಗೊಂಡಿದ್ದು ಕಾವೇರಿ ನದಿ ಪ್ರವಾಹದ ಹಾನಿಯ ಪರಿಣಾಮ ಎಡತೊರೆಯು ಹುಟ್ಟಿ ನಂತರ ಕೃಷ್ಣರಾಜನಗರ ಎಂದಾಯಿತು. (ಎಡತೊರೆ ಹೆಸರಿನ ಹಿನ್ನೆಲೆ: ನಗರದ ಎಡಭಾಗಕ್ಕೆ ತೊರೆಯಿದ್ದು ಆದಕಾರಣ ಈ ಹೆಸರು ಬಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನಾಮಾಂಕಿತವಾಗಿ ಇದನ್ನು ಕೃಷ್ಣರಾಜನಗರ ಎಂದು ನಾಮಕರಣ ಮಾಡಲಾಗಿದೆ. ಇವರ ಕಾಲಘಟ್ಟದಲ್ಲಿ ಕಾವೇರಿ ನದಿಗೆ ಅಚ್ಚಕಟ್ಟಾದ ಸೇತುವೆ ನಿರ್ಮಾಣ ಮಾಡಲಾಗಿದ್ದು, ಇದರ ನಿರ್ಮಾತೃ ಅಂದಿನ ಮೈಸೂರು ಸಂಸ್ಥಾನದ ದೀವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯನವರು ಕಾವೇರಿಯ ನದಿಯ ದಡಕ್ಕೆ ಆರ್ಕೇಶ್ವರ ಸ್ವಾಮಿಯ ದೇವಾಲಯವಿದ್ದು ಪ್ರತಿ ವರ್ಷ ಜನವರಿ ತಿಂಗಳಲ್ಲಿ ಅದ್ದೂರಿ ಜಾತ್ರೆ ಜರುಗುತ್ತದೆ. ಕೆ.ಆರ್.ನಗರಕ್ಕೆ ಉತ್ತಮ ರೈಲು ಸಂಪರ್ಕವಿದ್ದು ಹಾಸನವನ್ನು ಮೈಸೂರಿಗೆ ಸಂಪರ್ಕಿಸುತ್ತದೆ. ಕೆ.ಆರ್.ನಗರದಿಂದ 22ಕಿ.ಮೀ ದೂರದಲ್ಲಿ ಪ್ರಸಿದ್ದ ಚುಂಚನಕಟ್ಟೆ ಸ್ಥಳದಲ್ಲಿ ಕಾವೇರಿ ನದಿಯ ಜಲಪಾತವಿದ್ದು ನೋಡುಗರನ್ನು ಆಕರ್ಷಿಸುತ್ತಿದೆ, ಶ್ರೀ ರಾಮನು ಇಲ್ಲಿನ ಪ್ರಮುಖ ಆರಾಧ್ಯದೈವ. ಸರ್ವಧರ್ಮಕ್ಕೊ ಸಮನ್ವಯವಾಗಿ ಇಲ್ಲಿ ಅನೇಕ ಮಸೀದಿಗಳು, ಢೋರ್ನಹಳ್ಳಿ ಎಂಬಲ್ಲಿ ಕ್ರೈಸ್ತರ ಸಂತ ಅಂತೋಣಿರವರ ಚರ್ಚ್ ಇದ್ದು ಸರ್ವ ಧರ್ಮ ಸಮನ್ವಯತೆಯನ್ನು ಎತ್ತಿ ಹಿಡಿದಿದೆ. ಇನ್ನು ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಅಭಿವೃದ್ಧಿಯಾಗಿದ್ದು ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಪದವಿ ಕಾಲೇಜು, ಡಿಪ್ಲೋಮಾ ಕಾಲೇಜು, ಪಿ.ಯು ಕಾಲೇಜು, ಪ್ರೌಢಶಾಲೆಗಳು ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡುತ್ತಿರುವದು ಶ್ಲಾಘನೀಯ ವಿಷಯ. ಇನ್ನು ರಾಜಕೀಯ ವಿಷಯಕ್ಕೆ ಬಂದರೆ ಪ್ರಸ್ತುತ ತಾಲ್ಲೂಕಿನ ಶಾಸಕರಾಗಿ ಡಿ ರವಿಶಂಕರ್ ಇದ್ದಾರೆ. ಇನ್ನು ಲೋಕಸಭಾ ಕ್ಷೇತ್ರದಲ್ಲಿ ಕೆ.ಆರ್.ನಗರವು ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸುತ್ತದೆ. == ಕೃ‍ಷ್ಣರಾಜನಗರದ ವಿಶೇಷತೆ == ಈ ತಾಲೂಕಿನಾದ್ಯಂತ ಕಾವೇರಿ ನದಿಯ ಪಾತ್ರವಿದ್ದು ನೀರಾವರಿ ಯೊಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಚುಂಚನಕಟ್ಟೆ, ಕಟ್ಟೆಪುರ ಮೊದಲಾದ ಕಡೆ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಹಲವಾರು ಏತ ನೀರಾವರಿ ಯೊಜನೆಗಳನ್ನೂ ಕೂಡ ಕೈಗೆತ್ತಿಕೊಳ್ಳಲಾಗಿದೆ. ಕೆ.ಆರ್. ನಗರವು ರಾಜ್ಯ ಹೆದಾರಿ ೫೭ ರಲ್ಲಿ ಬರುವುದರಿಂದ ವ್ಯವಸ್ತಿತ ರಸ್ತೆಗಳ ನಿರ್ಮಾಣವಾಗಿದೆ. ಅಲ್ಲದೆ ಮೈಸೂರು - ಹಾಸನ - ಅರಸಿಕೆರೆ ರೈಲುಮಾರ್ಗವು ಕೂಡ ಹಾದೂ ಹೋಗಿದ್ದು ರಸ್ತೆ ಮತ್ತು ರೈಲು ಸೌಲಭ್ಯ ಲಭ್ಯವಾಗಿದೆ. ಜಿಲ್ಲಾ ಕೆಂದ್ರ ಮೈಸೂರಿನಿಂದ ೪೨ ಕಿ.ಮೀ. ದೂರವಿದೆ. ಹುಣಸೂರು, ಪಿರಿಯಾಪಟ್ಟಣ, ಅರಕಲಗೂಡು, ಹೊಳೆ ನರಸಿಪುರ, ಕೆ.ಆರ್.ಪೇಟೆ ತಾಲೂಕುಗಳ ಮದ್ಯದಲ್ಲಿ ಕೆ.ಆರ್.ನಗರ ತಾಲೂಕು ಇದೆ. ವ್ಯವಸ್ಥಿತ ರಸ್ತೆ, ಚರಂಡಿ, ಬಸ್‌ನಿಲ್ದಾಣ, ಹೆರಿಗೆ ಆಸ್ಪತ್ರೆ, ವಾಚನಾಲಯ, ಶಾಲಾ ಕಾಲೇಜು, ಪಶುಆಸ್ಪತ್ರೆ, ತಾಲೂಕು ಕಚೇರಿ, ಮುಖ್ಯರಸ್ತೆಯಲ್ಲಿ ಎಲ್ಲಾ ಸರಕಾರಿ ಕಚೇರಿಗಳು ಮತ್ತು ಸರಕಾರಿ ವಸತಿಗೃಹಗಳು ಇವೆ. ಆಕರ್ಷಕ == ಪ್ರಮುಖ ಬೆಳೆ == ತಾಲೂಕಿನ ಪ್ರಮುಖ ಬೆಳೆ ಭತ್ತವಾಗಿದ್ದು, ಇದರೊಂದಿಗೆ ರಾಗಿ, ತರಕಾರಿ ಮತ್ತು ಇತರ ವಾಣಿಜ್ಯ ಬೆಳೆಗಳನ್ನು ಕೂಡ ಬೆಳೆಯುತ್ತಾರೆ. ಕೆ.ಆರ್.ನಗರ ತಾಲೂಕನ್ನು ಮೈಸೂರು ಜಿಲ್ಲೆಯ ಭತ್ತದ ಕಣಜ / ಭತ್ತದ ನಾಡೆಂದು ಕರೆಯುತ್ತಾರೆ. ಬರ/ಪ್ರವಾಹದಂತ ಸಂದರ್ಭದಲ್ಲಿ ಕೆ.ಆರ್.ನಗರದಲ್ಲಿರುವ ಆಹಾರ ಉಗ್ರಾಣ ಎಲ್ಲರ ಜೀವನಾಡಿಯಾಗಿರುತ್ತದೆ == ಕಾಟ್ನಾಳು == ಕಾಟ್ನಾಳು ಎಂಬ ಹೆಸರು ಬರಲು ಕಾರಣ ಹಿಂದಿನ ಕಾಲದಿಂದ ಈ ಊರಿಗೆ ಲಕ್ಷ್ಮಿಪುರ ಎಂಬ ಹೆಸರು ಇತ್ತು ಅಗಿನ ಕಾಲದ ಪದ್ಧತಿ ಪ್ರಕಾರ ಲಕ್ಷ್ಮಿ ದೆವರನ್ನುಆರಾದಿಸುತ್ತಿದ್ದರು ಆದ್ದರಿಂದ ಪ್ರತಿವರ್ಷ ಜಾತ್ರೆ ಯನ್ನು ಕೊಡಮಾಡುತ್ತಿದ್ದರು ಅದ್ದರಿ ನಂತರ ಕಾಟ್ನಾಳು ಯೆಂದು ಕರೆದರು == ಪ್ರಸಿದ್ಧ ವ್ಯಕ್ತಿಗಳು == ಶೈಕ್ಷಣಿಕವಾಗಿ. ಸಾಂಸ್ಕೃತಿಕವಾಗಿ ತನ್ನದೇ ಆದ ಛಾಪನ್ನು ಹೊಂದಿರುವ ಕೆ.ಆರ್.ನಗರ ತಾಲೂಕು ಪ್ರಭಾವಿ ವ್ಯಕ್ತಿಗಳನ್ನು ಈ ನಾಡಿಗೆ ಕೊಟ್ಟಿದೆ. ರಾಜಕಾರಣಿಗಳಾದ ಶ್ರೀ ಹೆಚ್.ವಿಶ್ವನಾಥ. ಶ್ರೀ ಸಾ.ರಾ.ಮಹೇಶ್ . ಸಾಹಿತಿಗಳಾದ ಸಿ.ಪಿ.ಕೃಷ್ಣಕುಮಾರ್, ಬೆ.ಗೊ.ರಮೇಶ್, ರಾಮಸ್ವಾಮಿಗೌಡ ಎನ್, ಡಿ ರವಿಶಂಕರ್ ಮುಂತಾದವರು ಈ ತಾಲ್ಲೂಕಿನವರು. == ತಾಲ್ಲೂಕಿನ ಗ್ರಾಮ ಪಂಚಾಯತಿಗಳು ಮತ್ತು ಪ್ರಮುಖ ಗ್ರಾಮಗಳು == ಅಡಗೂರು ಅಂಕನಹಳ್ಳಿ ಅರ್ಜುನಹಳ್ಳಿ ಬೇರ್ಯ ಬ್ಯಾಡರಹಳ್ಳಿ ಚನ್ನಂಗೆರೆ ಚಂದಗಾಲು ಡೋರ್ನಳ್ಳಿ ಗಂಧನಹಳ್ಳಿ ಹಳಿಯೂರು ಹಂಪಾಪುರ ಹನಸೋಗೆ ಹರದನಹಳ್ಳಿ ಹೆಬ್ಬಾಳ ಹೊನ್ನೇನಹಳ್ಳಿ ಹೊಸ ಅಗ್ರಹಾರ ಹೊಸಕೋಟೆ ಕರ್ಪೂರವಳ್ಳಿ ಕೆಸ್ತೂರು ಕುಪ್ಪೆ ಹಂತ ಲಕ್ಷ್ಮಿಪುರ ಲಾಳಂದೇವನಹಳ್ಳಿ ಮಾವತ್ತೂರು ಮಾಯಾಗೌಡನಹಳ್ಳಿ ಮಾಲೂರು ಮಿರ್ಲೆ ಮುಂಜನಹಳ್ಳಿ ನರಚನಹಳ್ಳಿ ಸಾಲಿಗ್ರಾಮ ಶ್ರೀಗವಾಳು ಸಿದ್ದಾಪುರ ತಂದ್ರೆ ತಿಪ್ಪೂರು == ಭೌಗೋಳಿಕ == ಭೌಗೋಳಿಕ ವಾಗಿ ಉತ್ತಮವಾದ ಫಲವತ್ತತೆ ಯನ್ನು ಹೊಂದಿದೆ ಡ್ಯಾಮ್ ನಿಂದ ನೀರಾವರಿ ಸೌಲಭ್ಯ ಹೊಂದಿದೆ == ಬೆಳೆಗಳು == ಇಲ್ಲಿನ ಪ್ರಮುಖ ಬೆಳೆಗಳು ಹೊಗೆಸೊಪ್ಪು(ತಂಬಾಕು) ಭತ್ತ ರಾಗಿ ಅಡಿಕೆ ತೆಂಗು ತೊಗರಿ ಅಲಸಂದೆ ಹುರುಳಿಕಾಳು == ತಾಲ್ಲೂಕಿನ ಪ್ರವಾಸಿ ಕೇಂದ್ರಗಳು ==